ಮೈಸೂರು: ಸಿದ್ದರಾಮಯ್ಯ (Siddaramaiah) ಗುಡುಗಿದ್ರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ (V Srinivas Prasad) ಲೇವಡಿ ಮಾಡಿದ್ದಾರೆ.
ವರುಣಾ ಕ್ಷೇತ್ರದಲ್ಲಿ (Varuna Constituency) ಸಿದ್ದರಾಮಯ್ಯ ಅಬ್ಬರದ ಪ್ರಚಾರದ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಗುಡುಗಿದ್ರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗುತ್ತೆ. ಲೋಕಸಭೆಯಲ್ಲೂ ರಾಹುಲ್ ಗಾಂಧಿನ (Rahul Gandhi) ನಿಲ್ಲಿಸಿಕೊಂಡು ಗುಡುಗಿದ್ರು, ಮೋದಿ ಮುಳುಗೇಹೋದರು ಅನ್ನೋಹಾಗೇ ಗುಡುಗಿದ್ರು. ಕೊನೆಗೆ ಏನಾಯ್ತು? ರಾಜ್ಯದಲ್ಲಿ ಕೇವಲ 1 ಸೀಟು ಗೆದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ
ಗುಡುಗಿ.. ಗುಡುಗಿ.. 30 ಸಾವಿರ ವೋಟ್‌ನಲ್ಲಿ ಸೋತರು. ವರುಣಾ ಕ್ಷೇತ್ರದಲ್ಲಿ 1 ಲಕ್ಷ ವೋಟ್ ಗೆಲ್ಲೋಕೆ ಸಾಧ್ಯನಾ? ಪ್ರತಿಪಕ್ಷ ನಾಯಕನಾಗಿ ಮಾತನಾಡುವ ಮಾತಾ ಅದು? ಸೋಮಣ್ಣ ಹೊರಗಿನವರು ಅನ್ನೋ ಸಿದ್ದರಾಮಯ್ಯ, ತಾವು ಬಾದಾಮಿಗೆ ಯಾಕೆ ಹೋದ್ರು? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕನಿಗೆ ಚಳಿ ಬಿಡಿಸಿದ ನಟಿ ಊರ್ವಶಿ ರೌಟೇಲಾ
ಇದೇ ವೇಳೆ ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಕೂಡ ಈ ಬಗ್ಗೆ ಮಾತನಾಡಬೇಡಿ ಅಂತಾ ಈಗಾಗಲೇ ಹೇಳಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಫಲಿತಾಂಶದ ನಂತರ ಯೋಚನೆ ಮಾಡೋಣ ಅಂತಾ ಹೇಳಿದ್ದಾರೆ. ಫಲಿತಾಂಶದ ಮೇಲೆ ದಲಿತ ಸಿಎಂ, ಅಥವಾ ಲಿಂಗಾಯತ ಸಿಎಂ ಅನ್ನೋದು ನಿರ್ಧಾರವಾಗುತ್ತೆ. ಪಕ್ಷದ ವರಿಷ್ಠರು ಅದನ್ನ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.