ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ. ಹೀಗಾಗಿ ಭಾರತೀಯ ಯೋಧರ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಸಂಸದ ಉಗ್ರಪ್ಪ ಕಿಡಿಕಾಡಿದ್ದಾರೆ.
ಹಂಪಿಯಲ್ಲಿ ಮಾತನಾಡಿದ ಸಂಸದರು, ಭಾರತ ಪಾಕಿಸ್ತಾನದ ಮಧ್ಯೆ ಇರುವ ಕಲಹ ನಿನ್ನೆ ಮೊನ್ನೆಯದಲ್ಲ. ಈ ಹಿಂದೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ಆದರೆ ಆ ಸಂದರ್ಭವನ್ನು ಯಾವುದೇ ರಾಜಕೀಯ ಪಕ್ಷ ತನ್ನ ಪ್ರಚಾರಕ್ಕೆ ಬಳಸಿಕೊಳ್ಳಿಲ್ಲ. ಆದರೆ ಏರ್ ಸ್ಟ್ರೈಕ್ ಅನ್ನು ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ : ಏರ್ಸ್ಟ್ರೈಕ್ನಿಂದ 22 ಸೀಟ್ ಗೆಲ್ತೇವೆ – ಪಾಕಿಸ್ತಾನದಲ್ಲೂ ಡಿಬೇಟ್ ಆಯ್ತು ಬಿಎಸ್ವೈ ಹೇಳಿಕೆ
Advertisement
Advertisement
ಯೋಧರು ಜೀವದ ಹಂಗು ತೊರೆದು ನಮ್ಮನ್ನ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಅವರ ತ್ಯಾಗ, ಬಲಿದಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳವುದು ಯಾವುದೇ ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ. ಈ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆ ಅವರಲ್ಲಿರುವ ಸಣ್ಣತನವನ್ನ ತೋರುತ್ತದೆ ಎಂದು ಹೇಳಿದರು.
Advertisement
https://youtu.be/-HDTIgjGwJg
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv