ಬೆಂಗಳೂರು: ಸಿದ್ದರಾಮಯ್ಯ (Siddaramaiah) ಈಗಲಾದರೂ ಭಂಡತನ ಬಿಟ್ಟು ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.
ಮುಡಾ ಕಚೇರಿ (MUDA Office) ಮೇಲೆ ಇ.ಡಿ ದಾಳಿ (ED Raid) ಸಂಬಂಧ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 3-4 ತಿಂಗಳಿಂದ ಮುಡಾ ಹಗರಣ ಚರ್ಚೆ ಆಗಿತ್ತು. ಬಿಜೆಪಿ-ಜೆಡಿಎಸ್ ಹೋರಾಟ ಮಾಡಿ ಪಾದಯಾತ್ರೆ ಮಾಡಿತ್ತು. ಪ್ರಾಮಾಣಿಕವಾಗಿ ಆಡಳಿತ ಮಾಡುತ್ತೇವೆ, ಯಾವುದೇ ಕಳಂಕ ಇಲ್ಲ ಎಂದು ಸಿಎಂ ಹೇಳಿದ್ದರು. ಆದರೆ ಮುಡಾ ಕೇಸ್ ಅಕ್ರಮ ಆಗಿ ಎಷ್ಟು ಭಂಡತನ ಮಾಡಿದ್ದಾರೆ. ಮೊದಲು ಹಗರಣ ನಡೆದಿಲ್ಲ ಎಂದರು. ಬಿಜೆಪಿ ಅವರಿಗೆ ತಲೆ ಕೆಟ್ಡಿದೆ ಅಂದಿದ್ದರು. ಬಳಿಕ ಒಪ್ಪಿಕೊಂಡು ಮುಡಾ ಸೈಟ್ ವಾಪಸ್ ಕೊಟ್ಟಿದ್ದಾರೆ. ಹೈಕೋರ್ಟ್, ಸೆಷನ್ಸ್ ಕೋರ್ಟ್ ತೀರ್ಪು ನಂತರ ಸಿಎಂ ಭಂಡತನ ಬಿಡಬೇಕಿತ್ತು. ಈಗ ಇ.ಡಿ ಅಖಾಡಕ್ಕೆ ಇಳಿದಿದೆ. ದಾಳಿ ಆಗಿದೆ. ಸಿಎಂ ತಾನು ನಿರಪರಾಧಿ ಅಂತ ಬಿಂಬಿಸುವ ಕೆಲಸ ಮಾಡಿದ್ರು. ಈಗ ರಾಜಕೀಯ ದಾಳಿ ಅಂತ ಇ.ಡಿ ಮೇಲೆ ಟೀಕೆ ಮಾಡುತ್ತಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣು ಆಗಿಲ್ಲ ಅನ್ನೋ ರೀತಿ ಇದ್ದಾರೆ. ಸಿಎಂಗೆ ಕಿಂಚಿತ್ತು ಕಾನೂನು ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಸೈಟ್ ವಾಪಸ್ ಕೊಟ್ಟರೂ ಕಾಲ ಮುಗಿದಿದೆ. ಸಿದ್ದರಾಮಯ್ಯ ಅವರು ಗೌರವಯುತ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್ – ಆರೋಪಿ ಮೊಬೈಲ್‌ನಲ್ಲಿ ಸಿದ್ದಿಕಿ ಪುತ್ರನ ಫೋಟೋ ಪತ್ತೆ
Advertisement
Advertisement
ಮುಡಾ ಕೇಸ್‌ನಲ್ಲಿ ಅಂದಿನ ಅಧಿಕಾರಿ ಕುಮಾರ್ ನಾಯಕ್ ಸಿದ್ದರಾಮಯ್ಯ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರ್ ನಾಯಕ್‌ಗೆ ಎಂಪಿ ಟಿಕೆಟ್ ಕೊಟ್ಟಾಗಲೇ ಅನುಮಾನ ಇತ್ತು. ಸಿಎಂ ಅವರ ಕುಟುಂಬಕ್ಕೆ ಲಾಭ ಪಡೆದಿದ್ದಾರೆ. ಅದಕ್ಕೆ ಬೆಂಬಲವಾಗಿ ನಿಂತಿದ್ದು ಕುಮಾರ್ ನಾಯಕ್ ಅವರು. ಹೀಗಾಗಿ ಸಿದ್ದರಾಮಯ್ಯ ಅವರು ಟಿಕೆಟ್ ಕೊಟ್ಟಿದ್ದಾರೆ. ಹೈಕೋರ್ಟ್ ಕೂಡಾ ಅವರ ಪಾತ್ರ ಪರಿಗಣಿಸಿದೆ. ಮುಂದೆ ರಾಯಚೂರು ಸಂಸದ ಕುಮಾರ್ ನಾಯಕ್ ಅವರು ಕೂಡ ರಾಜೀನಾಮೆ ಕೊಡೋ ಸಮಯ ಬರಬಹುದು ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಜಾತಿ ಜನಗಣತಿ ವರದಿ ಜಾರಿಯಾದ್ರೆ ನಮ್ಮ ಸಮುದಾಯಕ್ಕೆ ಒಳಿತಾಗುವ ನಂಬಿಕೆ ಇದೆ: ಪ್ರದೀಪ್ ಈಶ್ವರ್
Advertisement
ಮರಿಗೌಡ ರಾಜೀನಾಮೆ ಕೊಡುತ್ತಾರೆ. ಸಚಿವ ಮಹದೇವಪ್ಪ ಬಿಪಿಗೆ ರಾಜೀನಾಮೆ ಕೊಟ್ಟಿದ್ದಾರೆ ಎಂದಿದ್ದಾರೆ. ಮುಂದೆ ಈ ಸರ್ಕಾರದಲ್ಲಿ ಇನ್ನು ಯಾರಿಗೆ ಬ್ಲಡ್ ಪ್ರಷರ್ ಬರುತ್ತೆ ನೋಡುತ್ತಿರಿ. ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಕೊಟ್ಟೇ ಕೊಡುತ್ತಾರೆ. ಸಿದ್ದರಾಮಯ್ಯ ಓಡಿ ಹೋಗಲು ಸಾಧ್ಯವಿಲ್ಲ. ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಲಿ ಎಂದು ತಿಳಿಸಿದರು. ಇದನ್ನೂ ಓದಿ: ಜೋಶಿ ರಾಜೀನಾಮೆ ಕೇಳಿ ಕಾಂಗ್ರೆಸ್ಸಿಗರು ವಿಘ್ನ ಸಂತೋಷಪಡಲು ಮುಂದಾಗಿದ್ದಾರೆ – ವಿಜಯೇಂದ್ರ
Advertisement
ಭಾನುವಾರ ಸಚಿವರ ಜೊತೆ ಸಿಎಂ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಮ್ ಆದ್ಮಿ ಅರವಿಂದ್ ಕೇಜ್ರಿವಾಲ್ ಪರಿಸ್ಥಿತಿ ಏನು ಆಗಿದೆ ಅಂತ ಎಲ್ಲರಿಗೂ ಗೊತ್ತು. ನೇರವಾಗಿ ಹೇಳುತ್ತಿದ್ದೇನೆ. ಸಿಎಂ ಅವರು ಭಂಡತನ ಬಿಟ್ಟು ರಾಜೀನಾಮೆ ನೀಡಲಿ. ಹೈಕಮಾಂಡ್ ಬೆಂಬಲ ಇದೆ ಎಂದು ಹೀಗೆ ನಡೆದುಕೊಳ್ಳೋದು ಸರಿಯಲ್ಲ. ಹೈಕಮಾಂಡ್ ಬೆಂಬಲ ದೊಡ್ಡ ವಿಚಾರ ಅಲ್ಲ. ಹೈಕೋರ್ಟ್ ತೀರ್ಪಿನಲ್ಲಿ ಹಲವು ವಿಚಾರ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಇನ್ನೊಂದು ಸಾರಿ ತೀರ್ಪು ಓದಲಿ. ಆಗ ರಾಜೀನಾಮೆ ಕೊಡೋಕೆ ಅನುಕೂಲ ಆಗುತ್ತೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಡಾದಲ್ಲಿ ಅಕ್ರಮವಾಗಿಲ್ಲ ಎಂದಾದ್ರೆ ಸೈಟ್ ವಾಪಸ್ ಕೊಟ್ಟಿದ್ದು, ಮರೀಗೌಡ ರಾಜೀನಾಮೆ ಯಾಕೆ? – ಎಸ್ ಮುನಿಸ್ವಾಮಿ