ಭೋಪಾಲ್: ಮೂರು ವರ್ಷದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಕೊಂದಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಾಡ್ಲಿಯಾ ಗ್ರಾಮದಲ್ಲಿ ನಡೆದಿದೆ.
ಜಿಲ್ಲಾ ಕೇಂದ್ರದಿಂದ ಸುಮಾರು ಏಳು ಕಿಮೀ ದೂರದಲ್ಲಿರುವ ಗ್ರಾಮದ ಜಮೀನೊಂದರಲ್ಲಿ ಗುರುವಾರ ಸಂಜೆ ಮಗು ಆಟವಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಾವನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಪರ್ಣಾ ಯಾದವ್
ಬಾಲಕಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಬೀದಿನಾಯಿಗಳ ಹಿಂಡು ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿದೆ. ಆಕೆಯ ಕಿರುಚಾಟವನ್ನು ಕೇಳಿ ಅಕ್ಕಪಕ್ಕದಲ್ಲಿಯೇ ಕೆಲಸ ಮಾಡುತ್ತಿದ್ದ ಆಕೆಯ ಪೋಷಕರು ಗಾಬರಿಯಿಂದ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅವರು ನಾಯಿಗಳನ್ನು ಓಡಿಸುವಷ್ಟರಲ್ಲಿ ಮಗು ರಕ್ತಸ್ರಾವ ಮತ್ತು ತೀವ್ರವಾಗಿ ಗಾಯಗೊಂಡಿತ್ತು.
ಬಾಲಕಿಯನ್ನು ನಂದಿನಿ ಎಂದು ಗುರುತಿಸಲಾಗಿದ್ದು, ಆಕೆಯನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಪೋಸ್ಟ್ ನ ಉಸ್ತುವಾರಿ ಬಿ.ಆರ್. ಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: 16ರ ಹುಡುಗಿ ಮೇಲೆ ತಂದೆ, ಸಹೋದರನಿಂದಲೇ 2ವರ್ಷ ನಿರಂತರ ಅತ್ಯಾಚಾರ