ಚಾಮರಾಜನಗರ: ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಎಲ್ಲಿಯವರೆಗೂ ಸಿದ್ದರಾಮಯ್ಯ ಅವರಿಗೆ ಇರುತ್ತೋ ಅಲ್ಲಿಯವರೆಗೂ ಅವರೇ ಸಿಎಂ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಇದೀಗ ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗ್ತಿಲ್ಲ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆAಬ ವಿಶ್ವಾಸವಿದೆ ಎಂದರು.
ಮುಡಾ ಕೇಸ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚು ದಾಖಲೆ ಕೊಟ್ಟಿದ್ದಾರೆಂದು ಸ್ನೇಹಮಯಿ ಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಿಎಂ ಆಗದಿದ್ದ ಅವಧಿಯಲ್ಲಿ ಅಧಿಕಾರಿಗಳು ಸೈಟ್ ಕೊಟ್ಟಿರೋದು. 14 ಸೈಟ್‌ಗಳ ಬಗ್ಗೆ ಎಷ್ಟು ದೊಡ್ಡ ಮಟ್ಟದ ಚರ್ಚೆಯಾಗಿದೆ. ಕಾಂತರಾಜು ಕಮಿಷನರ್ ಆಗಿದ್ದ ಅವಧಿಯಲ್ಲಿ 9 ಸಾವಿರ ಸೈಟ್‌ಗಳು ಎಲ್ಲೋದವು?. ಇದರ ಬಗ್ಗೆ ಯಾರೂ ಕೂಡ ಚರ್ಚೆ ಮಾಡ್ತಿಲ್ಲ. 14 ಸೈಟ್ ವಿಚಾರ ಮಾತ್ರ ಪ್ರಚಾರ ಪಡೀತಿದೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ಲೋಕಾ ಅಧಿಕಾರಿಗಳು ಕೂಡ ಸಿಎಂ ನಿರ್ದೋಷಿ ಅಂತಾ ಹೇಳಿದ್ದಾರೆ. 9 ಸಾವಿರ ಸೈಟ್ ವಿಚಾರವಾಗಿ ಚರ್ಚೆ ಆಗಲಿ. ಸ್ನೇಹಮಯಿ ಕೃಷ್ಣ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮೂಡಿಸಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ದಾಖಲೆಯ 16 ನೇ ಬಜೆಟ್ ಮಂಡಿಸಲಿದ್ದಾರೆ. ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಯಾವುದೇ ತೆರಿಗೆ ವಿಧಿಸದೆ ಸಂಪನ್ಮೂಲಗಳ ಕ್ರೋಢೀಕರಣ, ಜಲ ಸಂಪನ್ಮೂಲ, ರಸ್ತೆ ಯೋಜನೆಗಳಿಗೆ ಆದ್ಯತೆ ಸಿಗಲಿದೆ. 24% ಎಸ್ಸಿ,ಎಸ್ಟಿ ಹಣವನ್ನು ಕೂಡ ಬಜೆಟ್ ಗಾತ್ರದ ಅನುಸಾರ ಮೀಸಲಿಡುತ್ತಾರೆ ಎಂದರು.