ಕನ್ನಡದ ಹಿರಿಯ ನಟಿ, ಮಂಡ್ಯ (Mandya) ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ (Sumalata Ambarish), ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಡುಗೊರೆಯಾಗಿ ಬೆಲ್ಲ (Organic Jaggery) ನೀಡಿದರು. ಇಂದು ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಗೆ ಉಡುಗೊರೆಯಾಗಿ ಬೆಲ್ಲ ನೀಡಿದಾಗ, ಪ್ರಧಾನಿ ಮುಖದಲ್ಲಿ ಮಂದಹಾಸವಿತ್ತು. ಅಲ್ಲದೇ, ಪಕ್ಕದಲ್ಲೇ ಇದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಕ್ಷಣ ಹೊತ್ತು ಉಡುಗೊರೆ ಬಗ್ಗೆ ವಿವರಿಸಿದ್ದು ವಿಶೇಷವಾಗಿತ್ತು.
Advertisement
ಈ ಕುರಿತಾಗಿ ಸುಮಲತಾ ಅಂಬರೀಶ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ, ‘ನನ್ನ ಸ್ವಾಭಿಮಾನಿ ಮಂಡ್ಯ ಕ್ಷೇತ್ರದಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ, ಮಂಡ್ಯದ ಗುರುತಾಗಿರುವ ‘ಬೆಲ್ಲ’ವನ್ನು ಉಡುಗೊರೆಯಾಗಿ ನೀಡಿದೆ. ಮಾನ್ಯ ಪ್ರಧಾನ ಮಂತ್ರಿಗಳು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಈ ನೆಲದ ಅಸ್ಮಿತೆಯಾಗಿರುವ ಬೆಲ್ಲದ ಉಡುಗೊರೆಯನ್ನು ಸ್ವೀಕರಿಸಿದ್ದು ಸಂಭ್ರಮ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲಿಂಗಭೈರವಿ ದೇವಿಯ ಮೋರೆ ಹೋದ ಸಮಂತಾ
Advertisement
Advertisement
ಮಂಡ್ಯ ಸಕ್ಕರೆ ಮತ್ತು ಬೆಲ್ಲದ ನಾಡು. ಕಬ್ಬು ಈ ಭಾಗದ ಪ್ರಮುಖ ಬೆಳೆಯೂ ಹೌದು. ಸುಮಲತಾ ಸಂಸದೆಯಾದ ನಂತರ ಮಂಡ್ಯದಲ್ಲಿ ತಯಾರಾಗುವ ಬೆಲ್ಲದ ಬಗ್ಗೆ ಸಂಸತ್ತಿನಲ್ಲೂ ಮಾತನಾಡಿದ್ದರು. ಬೆಲ್ಲದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು. ಅಲ್ಲದೇ, ಸಾವಯವ ಬೆಲ್ಲಕ್ಕೆ ಬೆಂಬಲ ಬೆಲೆ ಘೋಷಿಸಿಬೇಕೆಂದು ಸಂಸತ್ತಿನಲ್ಲಿ ಮನವಿ ಕೂಡ ಮಾಡಿದ್ದರು. ಕಬ್ಬು ಬೆಳೆಗಾರರ ಅನೇಕ ಹೋರಾಟಗಳಲ್ಲಿ ಭಾಗಿಯಾದವರು. ಹಾಗಾಗಿ ರೈತರ ಪರವಾಗಿ ಬೆಲ್ಲವನ್ನು ಪ್ರಧಾನಿಗೆ ನೀಡಿದ್ದಾರೆ.
Advertisement
ಪ್ರಧಾನಿಗೆ ಇಂದು ನೀಡಿದ ಉಡುಗೊರೆಯಲ್ಲಿ ಬೆಲ್ಲದುಡುಗೊರೆ ವಿಶೇಷವಾಗಿತ್ತು. ಅಲಂಕೃತ ಬುಟ್ಟಿಯಲ್ಲಿ ಬೆಲ್ಲದ ಚೌಕಾಕೃತಿಯ ತುಂಡುಗಳನ್ನು ಹಾಕಿ, ಸಾವಯವಬೆಲ್ಲವನ್ನೂ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಬೆಲ್ಲದ ಕುರಿತು ಕೆಲ ಹೊತ್ತು ಮಾತೂ ಆಡಿದರು. ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ಜೋರಾದ ಚಪ್ಪಾಳೆ ಕೂಡ ಕೇಳಿ ಬಂತು.