ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ (B.L Santhosh) ಹಾಡಿಹೊಗಳಿದ್ದಾರೆ.
ಮಂಡ್ಯದಲ್ಲಿ ದಶಪಥ ಸಮಾವೇಶ ಹಾಗೂ ಮೋದಿ ರೋಡ್ ಶೋ ಸಕ್ಸಸ್ ಹಿನ್ನೆಲೆಯಲ್ಲಿ ಮಂಡ್ಯ ಬಿಜೆಪಿ ಪದಾಧಿಕಾರಿಗಳಿಗೆ ಹಾಗೂ ಮಂಡ್ಯ ಬಿಜೆಪಿ ಕಾರ್ಯಕರ್ತರಿಗೆ ಬಿ.ಎಲ್ ಸಂತೋಷ್ ಪತ್ರ ಬರೆದಿದ್ದಾರೆ. ಈ ಮೂಲಕ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
Advertisement
Advertisement
ಮಂಡ್ಯದಲ್ಲಿ ನಡೆದ ಬೃಹತ್ ರೋಡ್ ಶೋ ಕಾರ್ಯಕ್ರಮದ ಸಂಪೂರ್ಣ ಯಶಸ್ಸು ಮಂಡ್ಯ ಜಿಲ್ಲೆಯ ಕಾರ್ಯಕರ್ತರಿಗೆ ಸಲ್ಲುತ್ತದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಮತ್ತು ಇತರ ಅಧಿಕಾರಿಗಳು ಹಗಲು ಇರುಳೆನ್ನದೆ ಶ್ರಮವಹಿಸಿ ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ್ದಾರೆ. ಇಂತಹ ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭದ ಮಾತೇನಲ್ಲ. 41 ವರ್ಷಗಳ ಬಳಿಕ ದೇಶದ ಪ್ರಧಾನಿಯೊಬ್ಬರು ಮಂಡ್ಯಕ್ಕೆ ಭೇಟಿ ನೀಡುವ ಅಪರೂಪದ ಸಂದರ್ಭ ಇದಾಗಿತ್ತು. ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಪರೂಪದ ವಿಷಯ. ಮಂಡ್ಯ ಬಿಜೆಪಿ ಘಟಕದ ಶಕ್ತಿ ಮತ್ತು ಅಲ್ಲಿಯ ಅವಕಾಶಗಳ ಬಗ್ಗೆ ಅನೇಕ ನಾಯಕರು ಸಂಶಯ ವ್ಯಕ್ತಪಡಿಸುತ್ತಾರೆ. ಬಹಳ ಅಪರೂಪವೇ ಎನ್ನುವಂತೆ ಬಿಜೆಪಿ ಕಛೇರಿಯ ಬಳಿ ನಾಯಕರ ಕಾರುಗಳು ನಿಲ್ಲುತ್ತವೆ ಎಂದಿದ್ದಾರೆ.
Advertisement
Advertisement
ಹೆಚ್ಚಾಗಿ ಎಲ್ಲರ ಗಮನ ಮೈಸೂರು – ಕೊಡಗು ಅಥವಾ ಬೆಂಗಳೂರಿನ ಇನ್ನೊಂದು ಭಾಗದ ಕಡೆಗೆ ಇರುತ್ತದೆ. ಈ ಬಾರಿಯೂ ನಾಯಕರ ಒತ್ತಾಸೆ ಮೈಸೂರು ಅಥವಾ ಕೆಂಗೇರಿ ಕಡೆಗಿತ್ತು. ಅದಲ್ಲದೆ ಎರಡು ತಿಂಗಳು ಹಿಂದೆಯಷ್ಟೇ ಮಂಡ್ಯದಲ್ಲಿ ಗೃಹಸಚಿವ ಅಮಿತ್ ಶಾ ಅವರ ಅದ್ಧೂರಿ ಕಾರ್ಯಕ್ರಮ ನಡೆದಿತ್ತು. ಕೆಲವು ದಿನಗಳ ಹಿಂದೆ ವಿಜಯ ಸಂಕಲ್ಪ ಯಾತ್ರೆಯು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋಗಿತ್ತು. ಆದರೆ ರಾಜ್ಯಪಕ್ಷದ ದೃಢನಿಲುವು, ಜಿಲ್ಲಾ ಘಟಕದ ದೃಢಸಂಕಲ್ಪವು ಈ ಕಾರ್ಯಕ್ರಮ ಮಂಡ್ಯದಲ್ಲಿಯೇ ನಡೆಯುವಂತೆ ಮಾಡಿತು. ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಬಿಜೆಪಿಗೆ ದೊರೆತ ಬೂಸ್ಟರ್ ಎಂದರೆ ಸಂಸದರಾದ ಸುಮಲತಾ ಅವರಿಂದ ದೊರೆತ ಬೆಂಬಲ. ಅವರು ಹೆಚ್ಚಿನ ಜನಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆನೀಡಿದ್ದರು ಎಂದಿದ್ದಾರೆ. ಇದನ್ನೂ ಓದಿ: Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮಂಡ್ಯದ ಜನಸಾಮಾನ್ಯರ ಮನ ಗೆದ್ದಿದ್ದಾರೆ. ಯೋಜನೆಗಳು ಜನರನ್ನು ತಲಪುವುದು ಎಂದಿಗೂ ಅರಿವಿಗೆ ಬಾರದೇ ಇರದು. ಕಾರ್ಯಕ್ರಮ ಮಾಡಲು ತೆಗೆದುಕೊಂಡ ಧೈರ್ಯವೂ ಸಾರ್ಥಕವೆನಿಸಿತು. ಇಂದು ಮಂಡ್ಯದ ಬಿಜೆಪಿಯಲ್ಲಿ ನಗುಮುಖಗಳು ಮಾತ್ರ ಇವೆ. ಈ ರೋಡ್ ಶೋ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಹೊಸ ತಿರುವನ್ನು ನೀಡಿದೆ. ಮುಂಬರುವ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಪ್ರಮುಖ ಶಕ್ತಿಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮಾರ್ಗದರ್ಶನ ಉಲ್ಲೇಖನಾರ್ಹವಾದದ್ದು. ಬಿ.ಎಸ್. ಯಡಿಯೂರಪ್ಪನವರು ತಮ್ಮ ತವರು ಜಿಲ್ಲೆಯಾದ ಮಂಡ್ಯಕ್ಕೆ ಸದಾ ಮಾರ್ಗದರ್ಶಕರಾಗಿದ್ದಾರೆ. ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ದೊಡ್ಡಪಾತ್ರವನ್ನು ವಹಿಸಿದ ಪ್ರತಾಪ್ ಸಿಂಹ ಅವರು ಯಶಸ್ಸಿಗೆ ಸಾಥ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೆಗಾ ಶೋಗಾಗಿ ಮಂಡ್ಯ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರನ್ನು ನನ್ನ ಹೃದಯದಾಳದಿಂದ ಅಭಿನಂದಿಸುತ್ತೇನೆ. ಮುಂದಿನ ದಿನಗಳು ಇನ್ನಷ್ಟು ತಾಕತ್ತಿನದ್ದಾಗಿರಲಿದೆ. ಇನ್ನು ಮುಂದೆ ಹೆಚ್ಚಿನ ನಿರೀಕ್ಷೆಯ ಜೊತೆಜೊತೆಗೆ ವಿರೋಧವೂ ಇರಲಿದೆ. ಈ ಹಿಂದೆ ಇದ್ದ ಸಂದೇಹಗಳೆಲ್ಲವೂ ತಪ್ಪು ಎಂದು ಸಾಬೀತಾಗಿರುವುದರಿಂದ ಆರಂಭಿಸಿರುವ ಓಟವನ್ನು ಯಶಸ್ವಿಯಾಗಿ ಮುಗಿಸುವುದು ನಮ್ಮ ಕರ್ತವ್ಯವಾಗಿದೆ. ಸಂಘಟನೆಗೆ ಹೊಸ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರಗಳ ಗೆಲುವು ಸದಾ ವಿಶೇಷ ವಿಷಯವೇ. ಮಂಡ್ಯವನ್ನು ಗೆಲ್ಲುವುದು ಕರ್ನಾಟಕ ಬಿಜೆಪಿ ಬಹಳ ವಿಶೇಷವಾದದ್ದು. ನಮ್ಮ ಸಮಯವು ಈಗ ಬಂದಿದೆ. ಒಂದೇ ಮನಸ್ಸಿನಿಂದ ಗುರಿಯನ್ನು ಸಾಧಿಸೋಣ. ಮಂಡ್ಯ ಬಿಜೆಪಿಗೆ ಸುಮಲತಾ ಬೂಸ್ಟರ್ ಎಂದು ಬಿ.ಎಲ್ ಸಂತೋಷ್ ಗುಣಗಾನ ಮಾಡಿದ್ದಾರೆ.