ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ವಿಚಾರ ಇದೀಗ ಭಾರೀ ಚರ್ಚೆಯಾಗುತ್ತಿದೆ. ಈ ಸಂಬಂಧ ಸ್ವತಃ ಸುಮಲತಾ ಅವರೇ ಇದೀಗ ಪ್ರತಿಕ್ರಿಯಿಸಿದ್ದಾರೆ.
ಮಂಡ್ಯದ ಹೊನಗನಹಳ್ಳಿಯಲ್ಲಿ ಚರ್ಚೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಸದ್ಯಕ್ಕೆ ಎಂಪಿಯಾಗಿದ್ದರೂ ಎಂಎಲ್‍ಎಗಳ ಕೆಲಸಗಳನ್ನು ಹೊತ್ತುಕೊಂಡು ಮಾಡುತ್ತಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬಂದು ಮಾಡಬೇಕು ಎಂಬುದೇನೂ ಇಲ್ಲ. ಮಂಡ್ಯ ಜಿಲ್ಲೆಗೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಬೇರೆಯವರು ಮಾಡಿದ್ದಾರೆ. ಆದರೆ ನಾನು ಪ್ರಯತ್ನ ಪಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಾನು ಸಚಿವರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಜಿಲ್ಲೆ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು.
Advertisement
Advertisement
ಇದೇ ವೇಳೆ ಕ್ರೆಡಿಟ್ ವಾರ್ ಬಗ್ಗೆ ಮಾತನಾಡಿ, ಸಂಸದೆಯಾಗಿ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಶಾಸಕರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ. ಈ ನಡುವೆ ನಾನು ಮಾಡಿದ ಕೆಲಸಗಳಿಗೆ ಕ್ರೆಡಿಟ್ ತೆಗೆದುಕೊಳ್ಳಲು ಅವರುಗಳು ಮುಂದಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!
Advertisement
Advertisement
ಶಿಂಷಾ ನದಿಗೆ ಸೇತುವೆ ನಿರ್ಮಾಣ ವಿಚಾರವಾಗಿ ಸಂಸದೆಯಾಗಿ ನಾನು ಕೆಲಸ ಮಾಡಿದ್ದೇನೆ. ದೇವೇಗೌಡರು, ಪ್ರತಾಪ್ ಸಿಂಹ ಪ್ರಯತ್ನ ಪಟ್ಟಿಲ್ಲ ಎಂದು ಹೇಳಿದ್ದಿಲ್ಲ. ನಾನು ನಿತಿನ್ ಗಡ್ಕರಿಯನ್ನು ಎಷ್ಟು ಬಾರಿ ಭೇಟಿಯಾಗಿದ್ದೇನೆ ಎಂಬುದನ್ನ ಅವರ ಸಚಿವಲಾಯದಿಂದ ತಿಳಿದುಕೊಳ್ಳಬಹುದು. ಬೇರೆ ಜಿಲ್ಲೆ ಸಮಸ್ಯೆ ತೆಗೆದುಕೊಂಡು ಹೋದರೆ ನಿಮ್ಮ ಜಿಲ್ಲೆ ಸಮಸ್ಯೆ ತೆಗೆದುಕೊಂಡು ಬಾ ಅನ್ನೋ ಉತ್ತರ ಬರುತ್ತೆ. ನನ್ನ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೇಳಿದಾಗ ಗಡ್ಕರಿಯವರು ಸ್ಪಂದಿಸಿದ್ದಾರೆ. ಈಗ ಸಂಸದರ ಕೆಲಸಕ್ಕು ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಅವರು ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಎಂದರು.
ಎಂಎಲ್‍ಎ ಗೆ ಎರಡು ಕೋಟಿ ಅನುದಾನ ಸಿಗುತ್ತೆ. ಆದರೆ ನನಗೆ ಒಂದು ತಾಲೂಕಿಗೆ ಸಿಗೋದು 40 ಲಕ್ಷ ಮಾತ್ರ. ಶಾಸಕರು ಕೆಲಸ ಮಾಡಿದ್ದರೆ ಜನರು ನನ್ನನ್ನು ಏಕೆ ಕೇಳುತ್ತಾರೆ. ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯುವ ಕಾಲ ಇತ್ತು. ಆದರೆ ಈಗ ಜನರು ಎಚ್ಚೆತ್ತಕೊಂಡಿದ್ದಾರೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳಿಗೆ ಜನಗಣಮನ ಹೇಳಿ ಕಳುಹಿಸಲು ಜನರು ಕಾಯುತ್ತಿದ್ದಾರೆ. ಹೆಸರೇಳದೆ ಜೆ.ಡಿ.ಎಸ್ ಶಾಸಕರಿಗೆ ಟಾಂಗ್ ಕೊಟ್ಟರು.
ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ಬಜೆಟ್ ನಲ್ಲಿ 50 ಕೋಟಿ ವಿಚಾರ ಬಗ್ಗೆ ಮಾತನಾಡಿ, ಮೂರು ವರ್ಷಗಳ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಎಲ್ಲರ ಶ್ರಮದ ಜೊತೆಗೆ ನನ್ನ ಶ್ರಮವು ಇದೆ. ಹಿಂದೆ 400 ಕೋಟಿ ಬಿಡುಗಡೆಯಾಗಿತ್ತು ಆ ಹಣವೆಲ್ಲ ಎಲ್ಲೊಯ್ತು ಎಂದು ಎಲ್ಲರ ಗೊತ್ತಿದೆ. ಈ ಹಣ ಭ್ರಷ್ಟಾಚಾರ ಎಂಬ ಇಲಾಖೆಗೆ ಸೇರಿತ್ತು. ಇದರಿಂದ ಏನು ಕಾರ್ಖಾನೆ ಉದ್ದಾರ ಆಗಲಿಲ್ಲ. ಎರಡು ವರ್ಷ ಸರ್ಕಾರವೆ ಕಾರ್ಖಾನೆ ನಡೆಸುತ್ತೆ ಎಂದು ಹೇಳಿದೆ. ಅದು ಯಾವ ರೀತಿಯಲ್ಲಾದರೂ ಪ್ರಾರಂಭವಾಗಲಿ. ಅಥವಾ ಎಷ್ಟು ಕೋಟಿಯಾದರೂ ಹಾಕಲಿ. ಆದರೆ ಚಾಲನೆ ಮಾಡುತ್ತಾರೋ ಇಲ್ಲವೋ ಎಂಬುದಷ್ಟೆ ನಾವು ಕೇಳಬೇಕು. ನಮ್ಮ ಬೇಡಿಕೆಯು ಕಾರ್ಖಾನೆ ಆರಂಭವಾಗಬೇಕಿರೋದು ಎಂಬುದಷ್ಟೆ ಇರೋದು ಎಂದು ಹೇಳಿದರು.