ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ನಿಮ್ಹಾನ್ಸ್ ಗೆ ಅಡ್ಮಿಟ್ ಮಾಡಬೇಕು. ಹೀಗೆ ಮಾಡಿದ್ರೆ ಮಾತ್ರ ಈ ದೋಸ್ತಿ ಸರ್ಕಾರ ಉಳಿಯುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನರೇಂದ್ರ ಮೋದಿ ನಾಲಾಯಕ್ ಪ್ರಧಾನಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಬುದ್ಧಿ ಭ್ರಮಣೆ ಆಗಿದೆ. ಚುನಾವಣೆ ಘೋಷಣೆ ಆದ ಮೇಲೆ ಅವರು ಏನು ಮಾತನಾಡುತ್ತಾರೆ ಎಂದು ಅವರಿಗೇ ಗೊತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ನಿಮ್ಹಾನ್ಸ್ ಗೆ ಅಡ್ಮಿಟ್ ಮಾಡಿದ್ರೆ ಮಾತ್ರ ಈ ದೋಸ್ತಿ ಸರ್ಕಾರ ಉಳಿಯುತ್ತದೆ ಎಂದು ತಿಳಿಸಿದ್ರು.
ಕುಮಾರಸ್ವಾಮಿ ಅವರನ್ನ ಕೆಳಗಿಳಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿದ್ದಾರೆ. ಸಿದ್ದರಾಮಯ್ಯನವರೇ ನಾಲಾಯಕ್ ಮುಖ್ಯಮಂತ್ರಿ. ಜಾತಿ ಒಡೆಯುವ ಪ್ರಯತ್ನ ಮಾಡಿದ್ರು. ಟಿಪ್ಪು ಸುಲ್ತಾನ್ ಜಯಂತಿ ಮಾಡಿ ಕುಟ್ಟಪ್ಪನಂತವರನ್ನ ಕೊಂದ ಕೊಲೆಗಾರ. ಇವರಂಥವರಿಂದ ಮೋದಿ ಪಾಠ ಕಲಿಯುವ ಅಗತ್ಯ ಇಲ್ಲ ಎಂದು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.