Connect with us

Districts

ಡಿಸೆಂಬರ್‍ನಲ್ಲಿ ಕಾಂಗ್ರೆಸ್‍ನಲ್ಲಿ ಮಹಾ ಸ್ಫೋಟವಾಗುತ್ತೆ: ಶೋಭಾ ಕರಂದ್ಲಾಜೆ

Published

on

ಉಡುಪಿ: ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ಗೆ ಕರೆದುಕೊಂಡು ಬಂದು ಸಿಎಂ ಮಾಡಿದ್ದೇ ಎಚ್. ವಿಶ್ವನಾಥ್. ಆದ್ರೆ ಸಿದ್ದರಾಮಯ್ಯ ಏರಿದ ಏಣಿಯನ್ನು ತುಳಿಯುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸೆಂಬರ್ ನಂತರ ಕಾಂಗ್ರೆಸ್- ಜೆಡಿಎಸ್‍ನ ಹಲವು ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್‍ನ ಹಲವು ಶಾಸಕರೂ ಸಂಪರ್ಕ ಮಾಡಿದ್ದು, ಕಾಂಗ್ರೆಸ್‍ನೊಳಗೆ ಮಹಾಸ್ಫೋಟವಾಗಲಿದೆ ಎಂದು ಬಾಂಬ್ ಹಾಕಿದ್ರು.

ಚುನಾವಣೆಗೆ ಇನ್ನೂ ಒಂದು ವರ್ಷ ಇರುವುದರಿಂದ ಬರುವ ನಾಯಕರ ಹಸರನ್ನು ಹೆಸರು ಬಹಿರಂಗಪಡಿಸುವುದಿಲ್ಲ. ಪ್ರಧಾನಿ ನರೇಂದ್ರಮೋದಿ- ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಾಯಕತ್ವ ಒಪ್ಪಿ ಪಕ್ಷಕ್ಕೆ ಒಪ್ಪಿ ಬರಲು ಹಲವರು ತಯಾರಾಗಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಇದನ್ನೂ ಓದಿ- ರಾಷ್ಟ್ರ ರಾಜಕಾರಣಕ್ಕೆ ರಮ್ಯಾ: ಎಐಸಿಸಿಯಲ್ಲಿ ಸಿಕ್ತು ಹೊಸ ಹುದ್ದೆ

ಇದೇ ಸಂದರ್ಭ ರೌಡಿ ನಾಗ ತಲೆಮರೆಸಿಕೊಂಡಿರುವ ವಿಚಾರದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಸರ್ಕಾರದಲ್ಲಿ ರೌಡಿಗಳದ್ದೇ ಮೇಲುಗೈ. ರೌಡಿಗಳು ಮತ್ತು ವಿಚಿತ್ರಕಾರಿ ಶಕ್ತಿಗಳು ಲೂಟಿ ಮಾಡಿದ ಹಣದಲ್ಲಿ ದಂಧೆ ನಡೆಯುತ್ತಿದೆ. ದಂಧೆಯ ಒಂದು ಮೂಲ ಮಾತ್ರ ರೌಡಿ ನಾಗ. ರೌಡಿ ನಾಗನಿಗೆ ರಾಜ್ಯ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕು. ಇಡಿ ಮತ್ತು ಸಿಬಿಐ ತನಿಖೆ ಮಾಡಿದರೆ ಮಾತ್ರ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.

ಸಿಎಂ ಸಿದ್ದರಾಮಯ್ಯ- ಗೃಹಸಚಿವ ಪರಮೇಶ್ವರ್ ಸೇರಿದಂತೆ ಹಲವು ನಾಯಕರ ಹೆಸರು ರೌಡಿ ನಾಗನ ಬಾಯಲ್ಲಿ ಬಹಿರಂಗವಾಗಿದೆ. ರೌಡಿ ನಾಗನಿಗೆ ಯಾರೆಲ್ಲಾ ಬೆಂಬಲವಾಗಿ ನಿಂತಿದ್ದಾರೆ ಎಂಬ ಎಲ್ಲಾ ಸತ್ಯಗಳು ಬಹಿರಂಗವಾಗಬೇಕು ಎಂದು ಅವರು ಒತ್ತಾಯ ಮಾಡಿದರು.

Click to comment

Leave a Reply

Your email address will not be published. Required fields are marked *