ಪ್ರಚಾರಕ್ಕೆ ಬಂದ್ರೆ ಒಂದು ತಲೆಗೆ 500 ರೂ. – ಶಿವರಾಮೇಗೌಡರ ಆಡಿಯೋ ವೈರಲ್

Public TV
1 Min Read
SHIVARAMEGOWDA

ಮಂಡ್ಯ: ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು. ಪ್ರಚಾರಕ್ಕೆ ಬಂದ್ರೆ ತಲಾ 500 ರೂ. ಕೊಡುತ್ತೇನೆ ಎಂದು ಶಿವರಾಮೇಗೌಡರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದ ರಮೇಶ್ ಜೊತೆ ಮಾತನಾಡಿದ್ದಾರೆ. ಈ 43 ಸೆಕೆಂಡುಗಳ ಆಡಿಯೋ ವೈರಲ್ ಆಗುತ್ತಿದ್ದು, ಇದೀಗ ತೀವ್ರ ಅನುಮಾನಕ್ಕೆ ಕಾರಣವಾಗಿದೆ.

JDS copy

ಆಡಿಯೋದಲ್ಲೇನಿದೆ?:
ಶಿವರಾಮೇಗೌಡ: ಹೇಳಿ ರಮೇಶಣ್ಣ..
ರಮೇಶ್: ಅಣ್ಣಾ ನಾವು ಯಾವಾಗ್ಲಿಂದ ಬರಬೇಕು ಅಣ್ಣಾ ಕ್ಯಾನ್ ವಾಸ್‍ಗೆ
ಶಿವರಾಮೇಗೌಡ: ಯಾರು ಮಾತಾಡ್ತಿರೋದು
ರಮೇಶ್: ಅಣ್ಣಾ ನಾನು ರಮೇಶ್
ಶಿವರಾಮೇಗೌಡ: ನಮ್ ಡಾನು..
ರಮೇಶ್: ಹೂಂ ಅಣ್ಣಾ..
ಶಿವರಾಮೇಗೌಡ: ನಾಳೆಯಿಂದಲೇ..

MND SHIVARAMEGOWDA

ರಮೇಶ್: ಅಣ್ಣಾ ಬೆಂಗಳೂರಿನಿಂದ ಎಲ್ಲರನ್ನೂ ಕರೆದುಕೊಂಡು ಬರಬೇಕಲ್ಲಾ ಹೆಂಗ್ ಮಾಡೋದು ವ್ಯವಸ್ಥೆ..?
ಶಿವರಾಮೇಗೌಡ: ಎಲ್ಲರಿಗೂ 500 ರೂಪಾಯಿ ಕೊಡ್ತೇವೆ.. ತಲೆಗೆ 500 ರೂ. ಕೊಡ್ತೀನಿ ಕರೆದುಕೊಂಡು ಬಾ..
ರಮೇಶ್: ಎಲ್ಲರನ್ನೂ ಕರೆದುಕೊಂಡು ಬರ್ಲಾ..?
ಶಿವರಾಮೇಗೌಡ: ಹೂಂ.. ಎಲ್ಲಾ ಬರಬೇಕು..
ರಮೇಶ್: ಅಣ್ಣಾ ಬರ್ತಾರಣ್ಣ.. ಗಂಗನಹಳ್ಳಿ, ಕೆಂಕನಹಳ್ಳಿಯಿಂದ ಸುಮಾರು ಜನ ಇದ್ದಾರೆ, ಎಲ್ಲರೂ ಬರ್ತಾರಣ್ಣ..
ರಮೇಶ್: ಬಸ್ ವ್ಯವಸ್ಥೆ ನಾವೇ ಮಾಡ್ಕೋಬೇಕಣ್ಣಾ..?

ಶಿವರಾಮೇಗೌಡ: ನೀವೇ ಮಾಡಿಕೊಂಡು ಬನ್ನಿ..ದುಡ್ಡು ಕೊಡ್ತೀನಿ..
ರಮೇಶ್: ಸರಿ ಅಣ್ಣಾ.. ಬೆಳಗ್ಗೆ..
ಶಿವರಾಮೇಗೌಡ: ಒಂದು ತಲೆಗೆ 500ರೂಪಾಯಿ, ಎಲ್ಲನೂ ಅಪ್ಪಾಜಿಗೌಡ್ರಿಗೆ ಜವಾಬ್ದಾರಿ ಕೊಟ್ಟಿದ್ದೀನಿ..
ರಮೇಶ್: ಅಪ್ಪಾಜಿ ಗೌಡ್ರಿಗಾ ಅಣ್ಣಾ.. ಆಯ್ತಣ್ಣ.. ಸರಿ ಅಣ್ಣ..

Share This Article
Leave a Comment

Leave a Reply

Your email address will not be published. Required fields are marked *