ರಾಯಚೂರು: ಕೊಪ್ಪಳ (Koppal) ಲೋಕಸಭಾ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಸಂಸದ ಸಂಗಣ್ಣ ಕರಡಿ (Sanganna Karadi) ಕಾರ್ಯಕರ್ತರ ಎದುರು ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ.
ರಾಯಚೂರಿನ (Raichur) ಸಿಂಧನೂರಿನಲ್ಲಿ ನೂತನ ರೈಲು ಆರಂಭ ಕಾರ್ಯಕ್ರಮದಲ್ಲಿ ಭಾವುಕರಾದ ಸಂಗಣ್ಣ ಕರಡಿ ಕಾರ್ಯಕರ್ತರ ಎದುರು ಕಣ್ಣೀರಿಟ್ಟರು. ವೇದಿಕೆಯ ಮೇಲೂ ಭಾವುಕರಾಗಿ ನಿವೃತ್ತಿ ಬಗ್ಗೆ ಭಾಷಣ ಮಾಡಿದರು. ಇದನ್ನೂ ಓದಿ: ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ
Advertisement
Advertisement
ಸಿಂಧನೂರಿಗೆ ರೈಲು ಬಂದಿರುವುದು ಎಲ್ಲರಿಗೂ ಖುಷಿಯಾಗಿದೆ. ಕಾರ್ಯಕರ್ತರಿಗೆ ಸಂಗಣ್ಣನವರು ನಮ್ಮನ್ನ ಬಿಟ್ಟರು ಎನ್ನುವ ಭಾವನೆ ಮೂಡುತ್ತಿದೆ. ಆ ಒಂದು ಕೊರಗಿಗೆ ನಾನು ಭಾವುಕನಾಗಿ ಮಾತನಾಡಿದ್ದೇನೆ. ಅದನ್ನು ಬಿಟ್ಟರೆ ಏನಿಲ್ಲ. ನಮ್ಮಲ್ಲಿ ಸ್ಥಳೀಯವಾಗಿ ಬಹಳ ಜನ ನಾಯಕರಿದ್ದಾರೆ ಅವರು ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಮುಂಬರುವ ಚುನಾವಣೆಯಲ್ಲಿ ಮೋದಿ ಸರ್ಕಾರ ಸೋಲಿಸಲು ನಿರ್ಧರಿಸಿದೆ: ಎಸ್.ಆರ್ ಹೀರೆಮಠ
Advertisement
Advertisement
ಯಾರಿಗೆ ಹೃದಯ ಇರುತ್ತೆ ಅವರಿಗೆ ಭಾವುಕತೆ ಬರುತ್ತೆ. ನಾನು ಕಾರ್ಯಕರ್ತರನ್ನು ನೋಡಿ ಭಾವುಕನಾಗಿದ್ದೇನೆ, ಅಧಿಕಾರ ಹೋಗುತ್ತೆ ಅಂತಲ್ಲಾ. ನನಗೆ ಟಿಕೆಟ್ ಕೊಡದಿರುವುದಕ್ಕೆ ಕಾರಣ ಇರಬಹುದು, ಅದು ವರಿಷ್ಠರಿಗೆ ಗೊತ್ತು. ಯುವಕರಿಗೆ ಕೊಡಬೇಕು ಅನ್ನೋ ಕಾರಣಾನೂ ಇರಬಹುದು. ಆದರೆ ನನಗೆ ಕೆಲಸದ ಅಭಾವ ಇದೆ. ನನಗೆ ಯಾವ ಶಾಪ್ ಇಲ್ಲಾ ಬ್ಯುಸಿನೆಸ್ ಇಲ್ಲಾ. ತೋಟದಲ್ಲಿನ ಮಾವು ಸಹ ಒಣಗಿಹೋಗಿ ನಷ್ಟವಾಗಿದೆ ಎಂದು ಭಾವುಕರಾದರು. ಇದನ್ನೂ ಓದಿ: ಬಿಎಸ್‌ವೈ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಿಐಡಿಗೆ ವರ್ಗಾವಣೆ