ದಾವಣಗೆರೆ: ನಾವು ಆಪರೇಷನ್ ಕಮಲವನ್ನು ಬಲವಂತವಾಗಿ ಮಾಡಿಲ್ಲ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ಪಕ್ಷದ ಕುರಿತು ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಬಗ್ಗೆ ವೈರಾಗ್ಯದ ಮಾತುಗಳನ್ನಾಡಿಲ್ಲ. ನಾವು ಆಪರೇಷನ್ ಕಮಲವನ್ನು ಬಲವಂತವಾಗಿ ಮಾಡಿಲ್ಲ. ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಬೆಲೆ ಸಿಗದಿದ್ದಾಗ ಪಕ್ಷ ಬಿಟ್ಟಿದ್ದಾರೆ. ಸರ್ಕಾರದ ರಚನೆಗೆ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ಜೆಡಿಎಸ್, ಕಾಂಗ್ರೆಸ್ ನಿಂದ ಬಂದವರು ಸೇರಿ ನಮ್ಮ ಪಕ್ಷ ರಚನೆಯಾಯಿತು. ಪದೇ ಪದೇ ಅವರೇ ಸಚಿವರು ಆಗುತ್ತಿದ್ದಾರೆ. ಹೊಸ ಮುಖಗಳಿಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜಭವನದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದ ರಾಜ್ಯಪಾಲರು
Advertisement
Advertisement
ನಾವು ರೆಸಾರ್ಟ್, ನಾಲ್ಕು ಗೋಡೆ ಮಧ್ಯ ಮಾತನಾಡುವುದಿಲ್ಲ. ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ. ನಾನು ಪಕ್ಷ ಅಧಿಕಾರಕ್ಕೆ ಬರಲು ಅಮಾಲಿ ಕೆಲಸ ಮಾಡಿದ್ದೇನೆ. ನಾನು, ಮಾಜಿ ಸಿಎಂ ಯಡಿಯೂರಪ್ಪ ಹಲವು ಸೇರಿ ಪಕ್ಷ ಸಂಘಟನೆಗೆ ಅಮಾಲಿ ಕೆಲಸ ಮಾಡಿದ್ದೇವೆ. ಮಕ್ಕಳಿಗೆ ಕಾರು ಕೊಡಿಸುವ ಹಾಗೇ ನನಗೂ ಕಾರು ಕೊಟ್ಟಿದ್ದಾರೆ ಸುತ್ತಾಡುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
ಹಣ ಬಿಡುಗಡೆ ಮಾಡಲು ಆಗುತ್ತಿಲ್ಲ, ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಅಭಿವೃದ್ದಿಗಾಗಿ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ. ಆದರೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿದ್ದಕ್ಕೆ ಬೇಸರವಾಗಿದೆ ಎಂದು ತಿಳಿಸಿದರು.
Advertisement
ನಾನು ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲ. ಪಕ್ಷದ ವರೀಷ್ಠರ ಜೊತೆ ಮಾತನಾಡುತ್ತೇನೆ. ಕಾಂಗ್ರೆಸ್ ಅವರು ಸ್ವಾರ್ಥಕ್ಕಾಗಿ, ಅಧಿಕಾರಕ್ಕೆ ಬರುವುದಕ್ಕೆ ಪಾದಯಾತ್ರೆ ಮಾಡಿದರು. ಯಾವುದೇ ನೀರಿಗಾಗಿ, ಜನರ ಮೇಲೆ ಕಾಳಜಿಗಾಗಿ ಪಾದಯಾತ್ರೆ ಮಾಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತವಾಗಿ, ಸಂತೋಷವಾಗಿದ್ದಾರೆ: ಸಯ್ಯದ್ ಸಯೀದ್
ಬಂಡಾಯದ ಪ್ರಶ್ನೆ ಇಲ್ಲ. ನನ್ನ ಮೇಲೆ ಕಪ್ಪು ಚುಕ್ಕಿ ಇದೆ. ಅದಕ್ಕೆ ನಾನು ಮತ್ತೆ ತಪ್ಪು ಮಾಡೋದಿಲ್ಲ. ಹಿಂದೆ ರೆಸಾರ್ಟ್ ರಾಜಕೀಯ ಮಾಡಿ ತಪ್ಪು ಮಾಡಿದ್ದೇನೆ, ಈಗ ಅದನ್ನು ಮಾಡುವುದಿಲ್ಲ. ಮೂರು ಅವಧಿಯಲ್ಲಿ ಸಚಿವರಾಗಿದ್ದವರಿಗೆ ಮತ್ತೆ ಮಣೆಹಾಕಿದ್ದಾರೆ. ಅವರು ರಾಜೀನಾಮೆ ನೀಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಮನವಿ ಮಾಡಿದರು. ಈಗ ಕಾಂಗ್ರೆಸ್ 2023ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಭ್ರಮೆಯಲ್ಲಿ ಇದ್ದವೆ ಎಂದು ಟೀಕಿಸಿದರು.