– ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದ ಮಾಜಿ ಸಚಿವ
ಬೆಂಗಳೂರು: ರಾಜ್ಯಾಧ್ಯಕ್ಷ ವಿಜಯೇಂದ್ರರನ್ನ ಇಳಿಸಲು ಸಾಧ್ಯವಿಲ್ಲ ಅಂತ ಮಾಜಿ ಸಚಿವ ರೇಣುಕಾಚಾರ್ಯ (MP Renukacharya) ಬಿಜೆಪಿ ರೆಬಲ್ ಯತ್ನಾಳ್ (Basanagouda Patil Yatnal) ಟೀಂಗೆ ಸವಾಲ್ ಹಾಕಿದ್ದಾರೆ. ನಿನ್ನೆ ವಿಜಯೇಂದ್ರ ವಿರುದ್ಧ ಗೌಪ್ಯ ಸಭೆ ಮಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ವಿರುದ್ಧ ಶುಕ್ರವಾರ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನಿವಾಸದಲ್ಲಿ ಸಭೆ ಮಾಡಿ ಯತ್ನಾಳ್ ಟೀಂಗೆ ಎಚ್ಚರಿಕೆ ಕೊಟ್ರು.
Advertisement
ಸಭೆ ಬಳಿಕ ಮಾತನಾಡಿದ ರೇಣುಕಾಚಾರ್ಯ, ರಾಜ್ಯದ ಜನ ಮಾತಾಡ್ತಿದ್ದಾರೆ. ಮುಂದೆ ಬಿಜೆಪಿ (BJP) ಅಧಿಕಾರಕ್ಕೆ ಬರುತ್ತೆ ಅಂತ. ಆದರೆ ನಮ್ಮ ಪಕ್ಷದಲ್ಲಿ ವಿನಾಕಾರಣ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ವಿಜಯೇಂದ್ರರನ್ನ ಅಧ್ಯಕ್ಷರಾಗಿ ಮಾಡಿದ್ದು ವರಷ್ಠರು. ಯಾಕೆ ವಿಜಯೇಂದ್ರರನ್ನ ವಿರೋಧ ಮಾಡ್ತಿರೋದು. ರಾಜ್ಯದಲ್ಲಿ ಯಡಿಯೂರಪ್ಪ (BS Yediyurappa) ಪಕ್ಷ ಕಟ್ಟಿಬೆಳೆಸಿದರು. ಅಂತಹ ನಾಯಕರ ಬಗ್ಗೆ ಹಗುರವಾಗಿ ಮಾತಾಡೋದು ಸರಿಯಲ್ಲ ಅಂತ ಯತ್ನಾಳ್ ಟೀಂಗೆ ಎಚ್ಚರಿಕೆ ಕೊಟ್ರು. ಇದನ್ನೂ ಓದಿ: ಮಹಾಲಕ್ಷ್ಮಿ ಕೊಲೆ ಬಳಿಕ ಬೆಂಗಳೂರಿನಿಂದ ಒಡಿಶಾಗೆ ಬೈಕ್‌ನಲ್ಲೇ ಪ್ರಯಾಣ – ಮೂರು ದಿನ 1,550 ಕಿಮೀ ಬೈಕ್ ಓಡಿಸಿದ್ದ ಹಂತಕ!
Advertisement
Advertisement
ವಿಜಯೇಂದ್ರ (BY Vijayendra) ಅನುಭವ, ಸಂಘಟನೆ, ಅವರ ಉಪ ಚುನಾವಣೆ ಗೆಲುವು ಎಲ್ಲಾ ನೋಡಿದ ಮೇಲೆ ಹೈಕಮಾಂಡ್ ರಾಜ್ಯಾಧ್ಯಕ್ಷರಾಗಿ ಮಾಡ್ತು. ಯಾಕೆ ಅವರ ವಿರುದ್ಧ ಮಾತಾಡ್ತೀರಾ. ವಿಜಯೇಂದ್ರರನ್ನ ಯಾವುದೇ ಕಾರಣಕ್ಕೂ ಕೆಳಗೆ ಇಳಿಸಲು ಸಾಧ್ಯವಿಲ್ಲ. ವಿಜಯೇಂದ್ರ ರೆಡಿಮೇಡ್ ಫುಡ್ ಅಲ್ಲ. ರಾಜ್ಯದ ಅಧ್ಯಕ್ಷ ಆದ ಮೇಲೆ ಕಾಲಿಗೆ ಚಕ್ರಕಟ್ಟಿಕೊಂಡು ಪಕ್ಷ ಸಂಘಟನೆ ಮಾಡ್ತಿದ್ದೇವೆ. ಅವರು ಅಧ್ಯಕ್ಷ ಆದ ಮೇಲೆ ಪಕ್ಷಕ್ಕೆ ಬೂಸ್ಟ್ ಸಿಕ್ಕಿದೆ. ಇಷ್ಟು ದಿನ ಮಾತಾಡಬಾರದು ಅಂತ ಸುಮ್ಮನೆ ಇದ್ವಿ. ಇನ್ನು ಮುಂದೆ ಸುಮ್ಮನೆ ಇರೊಲ್ಲ ಅಂತ ರೆಬಲ್ ಟೀಂಗೆ ಎಚ್ಚರಿಕೆ ಕೊಟ್ರು. ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ
Advertisement
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ:
ವಿಜಯೇಂದ್ರ ಏನು ತಪ್ಪು ಮಾಡಿದ್ದಾರೆ ಹೇಳಿ? ಮುಡಾ ಪಾದಯಾತ್ರೆ ಯಶಸ್ವಿಯಾಗಿದೆ. ಪಾದಯಾತ್ರೆ ವಿಫಲವಾಗಬೇಕು ಅಂತ ಕೆಲವರು ಇದ್ದರು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಎಲ್ಲರು ಒಟ್ಟಾಗಿ ನಾವು ಹೋಗಬೇಕು. ಏನೇ ಇದ್ದರೂ ನಾಲ್ಕು ಗೋಡೆ ಮಧ್ಯೆ ಮಾತಾಡಿ. ನಾವು ಮೌನವಾಗಿ ಇರೋರು ನಮ್ಮ ದೌರ್ಬಲ್ಯವಲ್ಲ. ಹಿಂದೆಯೇ ನಾವೆಲ್ಲ ಸೇರುತ್ತೇವೆ ಅಂತ ಹೇಳಿದ್ವಿ. ಆದರೆ ಯಡಿಯೂರಪ್ಪ, ವಿಜಯೇಂದ್ರ ಬೇಡ ಅಂದಿದ್ದರು. ಈಗಲೂ ನಮಗೂ ಅವರು ಹೇಳಿಲ್ಲ. ಯತ್ನಾಳ್ ಇದನ್ನ ಬೇಕಾದ್ರೆ ಆರೋಪ ಮಾಡ್ತಾರೆ. ವಿಜಯೇಂದ್ರ ಅಧ್ಯಕ್ಷ ಆದ ಮೇಲೆ ಪಕ್ಷಕ್ಕೆ ಹಬ್ಬದ ವಾತಾವರಣ ಬಂದಿದೆ. ವಿಜಯೇಂದ್ರ ಯಾರ ಜೊತೆಗೂ ಮ್ಯಾಚ್ ಫಿಕ್ಸಿಂಗ್ ಇಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಮುಂದೆ 130-140 ಸ್ಥಾನದ ಗುರಿ ಇಟ್ಟುಕೊಂಡು ಕೆಲಸ ಮಾಡ್ತಿದ್ದಾರೆ. ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯವಿಲ್ಲ. ರಾಜ್ಯದ ಅಧ್ಯಕ್ಷರ ಜೊತೆ ನಾವು ಇರಬೇಕು ಅಂತ ತಿಳಿಸಿದರು.
ಮುಂದಿನ ಚುನಾವಣೆಯೂ ವಿಜಯೇಂದ್ರ ನಾಯಕತ್ವದಲ್ಲೇ:
ಒಂದು ವೇಳೆ ಯತ್ನಾಳ್ ಅಧ್ಯಕ್ಷ ಆಗಿದ್ದರೆ ನಾವು ಒಪ್ಪುತ್ತಿರಲಿಲ್ಲವಾ? ಮುಂದಿನ ಚುನಾವಣೆ ಕೂಡಾ ವಿಜಯೇಂದ್ರ ನಾಯಕತ್ವ ನಡೆಯಲಿದೆ. ಪಕ್ಷರ ಉಳಿವಿಗಾಗಿ ಮುಂದೆ ನಾವು ಸಭೆ ಮಾಡ್ತೀವಿ.ಪಕ್ಷದ ಪರವಾಗಿ ಮುಂದೆ ನಾವು ಸಭೆ ಸೇರುತ್ತೇವೆ.ಸಂಘ ಪರಿವಾರ, ಹೈಕಮಾಂಡ್ ಒಟ್ಟಾಗಿ ಹೋಗಿ ಅಂತ ಹೇಳಿದ್ದಾರೆ. ಆದರು ಇವರು ಹೀಗೆ ಮಾಡ್ತಿದ್ದಾರೆ. ನಾವು ಹೈಕಮಾಂಡ್ ಬಳಿ ಹೋಗ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ- ಮಣ್ಣಿನಡಿ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
ದಾವಣಗೆರೆ, ಚಿಕ್ಕೋಡಿ ಸೋಲಿಗೆ ಯಾರು ಕಾರಣ? ಮೈಸೂರಿನಲ್ಲಿ ಟಿಕೆಟ್ ಸಿಗದಕ್ಕೆ ವಿಜಯೇಂದ್ರ ಕಾರಣನಾ? ಯಡಿಯೂರಪ್ಪ ಅಧಿಕಾರ ಇದ್ದಾಗ ಇಂದ್ರ ಚಂದ್ರ ಅಂದರು. ಈಗ ಅವರ ವಿರುದ್ದ ಮಾತಾಡ್ತೀರಾ? ಶಾಸಕ ಬಿಪಿ ಹರೀಶ್ ರಾಜಕೀಯಗೆ ಜನ್ಮ ಕೊಟ್ಟಿದ್ದು ಯಡಿಯೂರಪ್ಪ. ಇದನ್ನ ಮರೆಯಬಾರದು ಅಂತ ಯತ್ನಾಳ್ ಟೀಂ ವಿರುದ್ದ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಎಷ್ಟು ಜನ ಇದ್ದೇವೆ, ಸಂಖ್ಯೆ ಎಷ್ಟು ಆದಷ್ಟು ಬೇಗ, ದಿನಾಂಕ ನಿಗದಿ ಮಾಡ್ತೀವಿ. ಹಾಲಿ, ಮಾಜಿ ಶಾಸಕರು ಸೇರುತ್ತೇವೆ. ವಿಜಯೇಂದ್ರ ಪಕ್ಷ ಸಂಘಟನೆ ಮಾಡ್ತಿದ್ದಾರೆ. ಕೆಲವರು ಪಾದಯಾತ್ರೆ ಯಶಸ್ವಿಯಾಗಬಾರದು, ಪಾದಯಾತ್ರೆಗೆ ಅಡತಡೆ ಮಾಡಿದ್ರು. ಸದಸ್ಯ ಅಭಿಯಾನ ಕಡಿಮೆ ಅಗಬೇಕು ಅಂತ ಮಾಡ್ತಿದ್ದಾರೆ. ಯಾರು ಭ್ರಷ್ಟಾಚಾರಿಗಳು ಅಂತ ಆತ್ಮಾವಲೋಕನ ಮಾಡಿ. ಬೇರೆ ಪಕ್ಷದಿಂದ ಬಂದವರು ಯಡಿಯೂರಪ್ಪ,ವಿಜಯೇಂದ್ರ ಬಗ್ಗೆ ಮಾತಾಡೋದಾ? ಅಂತ ಯತ್ನಾಳ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮಹಿಷ ದಸರಾದಿಂದ ಮೈಸೂರು ಹೆಸರೇ ಚೇಂಜ್ – ಮೈಸೂರು ಅಲ್ಲ, ‘ಮಹಿಷೂರು’ ಅಂತಾ ಬದಲಾವಣೆ
ವಿಜಯೇಂದ್ರ ಪರವಾಗಿ ನಾವು ನಿಲ್ಲುತ್ತೇವೆ:
ನಾವು ಸಭೆ ಸೇರುತ್ತೇವೆ. ವಿಜಯೇಂದ್ರ ಪರವಾಗಿ ನಾವು ನಿಲ್ಲುತ್ತೇವೆ. ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ್ದು.ಈಗ ದಾರಿಯಲ್ಲಿ ಮಾತಾಡೋರು ಯಾರು ಪಕ್ಷ ಕಟ್ಟಿಲ್ಲ. ಯಡಿಯೂರಪ್ಪರನ್ನ ಇಳಿಸಿ ಏನ್ ಆಯ್ತು ಗೊತ್ತು ತಾನೆ, ವಿಜಯೇಂದ್ರರನ್ನ ಇಳಿಸಿ ನೋಡಿ ನಾನು ಸವಾಲ್ ಹಾಕ್ತೀನಿ ಅಂತ ರೇಣುಕಾಚಾರ್ಯ ಸವಾಲ್ ಹಾಕಿದ್ರು. ಇಷ್ಟು ದಿನ ಮೌನವಾಗಿ ಇದ್ದೇವು. ಇನ್ನು ಮುಂದೆ ಸುಮ್ಮನೆ ಇರೊಲ್ಲ. ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಮಾತಾಡಿರೋದು ನೋವಾಗಿದೆ. ಅದರ ವಿರುದ್ದ ನಾವು ಮಾತಾಡ್ತೀವಿ. ನಾವು ಮಾಜಿ ಆಗಿರಬಹುದು. ಮುಂದೆ ಹಾಲಿ ಆಗ್ತೀವಿ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾವು ರಾಷ್ಟ್ರೀಯ ನಾಯಕರನ್ನು ಭೇಟಿ ಆಗ್ತೀವಿ. ನಾನು ಯಡಿಯೂರಪ್ಪ, ವಿಜಯೇಂದ್ರ ಪರ ಅಲ್ಲ. ನಾವು ಪಕ್ಷದ ಪರ. ರಾಜ್ಯದಲ್ಲಿ ಎರಡು ಬಾರಿ ಅಧಿಕಾರಕ್ಕೆ ತಂದಿದ್ದು ಯಡಿಯೂರಪ್ಪ. ಇದನ್ನ ಯಾರು ಮರೆಯಬಾರದು. ವಿಜಯೇಂದ್ರ ಅಧ್ಯಕ್ಷ ಆದ ಮೇಲೆ ಪಕ್ಷಕ್ಕೆ ಬೂಸ್ಟ್ ಬಂದಿದೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ಇಳಿಸಲು ಸಾಧ್ಯವಿಲ್ಲ ಅಂತ ತಿಳಿಸಿದರು.