ವಿಜಯೇಂದ್ರರನ್ನ ಕೆಳಗಿಳಿಸಿದರೆ ಬಿಜೆಪಿಗೆ 10 ಸೀಟೂ ಬರಲ್ಲ: ರೇಣುಕಾಚಾರ್ಯ

Public TV
1 Min Read
MP RENUKACHARYA

– ವಿಜಯೇಂದ್ರರನ್ನ ಟೀಕಿಸಿದ್ರೆ ಮೋದಿಯನ್ನ ಟೀಕಿಸಿದಂತೆ
– ಫೆ.12 ವಿಜಯೇಂದ್ರ ಬೆಂಬಲಿಗರಿಂದ ಹೈವೋಲ್ಟೇಜ್ ಮೀಟಿಂಗ್

ಬೆಂಗಳೂರು: ನಮ್ಮ ಒಳಜಗಳದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ 10 ಸೀಟೂ ಬರಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (MP Renukacharya) ಗುಡುಗಿದರು.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿನ ಬೆಳವಣಿಗೆ ನೋಡಿ ಜನ ಉಗೀತಿದ್ದಾರೆ, ಕಾರ್ಯಕರ್ತರಿಗೆ ನೋವಾಗಿದೆ. ನಾವು ಸೈಲೆಂಟ್ ಇದ್ವಿ, ಯಡಿಯೂರಪ್ಪ, ವಿಜಯೇಂದ್ರ ಮಾತಾಡಬೇಡಿ ಅಂದಿದ್ರು. ಆದ್ರೆ ನಮಗೆ ನೋವಾಗಿದೆ. ಹೀಗಾಗಿ ಇಂದು ತುರ್ತು ಸಭೆ ನಡೆಸಬೇಕಾಯಿತು ಅಂತ ಹೇಳಿದ್ದಾರೆ.

Vijayendra yatnal

ಕಳೆದ 3-4 ತಿಂಗಳಿಂದ ಜೆ.ಪಿ ನಡ್ಡಾ (JP Nadda), ಅಮಿತ್ ಶಾ ಭೇಟಿ ಮಾಡಲಾಗ್ತಿಲ್ಲ, ಯತ್ನಾಳ್ ತಂಡ ಭೇಟಿ ಮಾಡಿದ್ದೀವಿ ಅಂತ ಸುಳ್ಳು ಹೇಳಿಕೊಂಡು ಸ್ಟೋರಿಗಳನ್ನು ಪ್ಲಾಂಟ್ ಮಾಡಿಸ್ತಿದ್ದಾರೆ. ಭೇಟಿಯಾದ ಫೋಟೋ ಕೊಡಿ ಅಂದ್ರೆ ಇಲ್ಲ ತೆಗೀಬೇಡಿ ಅಂದಿದ್ದಾರೆ ಅಂತ ಹೇಳ್ತೀರಿ ಎಂದು ಅಸಮಾಧಾನ ಹೊರಹಾಕಿದ್ದರೆ.

ವಿಜಯೇಂದ್ರರನ್ನ ನೀವು ಕುಗ್ಗಿಸಲು ಆಗಲ್ಲ. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿ ಪಕ್ಷ ಕಟ್ಟಿದ್ರು. ಅದೇ ರೀತಿ ವಿಜಯೇಂದ್ರ ನಾಡಿನ ಯುವಕರ ಕಣ್ಮಣಿ ಆಗಿದ್ದಾರೆ. ಅಂಥವರ ಬಗ್ಗೆ ಮಾತಾಡ್ತೀರ? ಮುಂದಿನ ವಾರ ನಾವು ಮತ್ತೆ ಸಭೆ ಮಾಡ್ತೀವಿ. 100ಕ್ಕೂ ಹೆಚ್ಚು ಜನ ಸೇರಿ ದೊಡ್ಡ ಸಭೆ ಮಾಡ್ತೀವಿ. ಪಕ್ಷ ಕಟ್ಟೋ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಅನ್ನೋದು ನಿಜ. ವಿಜಯೇಂದ್ರರನ್ನ ಟೀಕೆ ಮಾಡೋದು ಮೋದಿ, ಅಮಿತ್ ಶಾ ನಡ್ಡಾರನ್ನ ಟೀಕೆ ಮಾಡಿದಂತೆ ಎಂದು ನುಡಿದಿದ್ದಾರೆ.

ನಮ್ಮ ಒಳಜಗಳದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ವಿಜಯೇಂದ್ರರನ್ನು ಕೆಳಗಿಳಿಸಿದರೆ ಬಿಜೆಪಿಗೆ ಹತ್ತು ಸೀಟೂ ಬರಲ್ಲ. ಹೈಕಮಾಂಡ್ ವಿಜಯೇಂದ್ರರನ್ನ ಕೆಳಗಿಳಿಸಲ್ಲ, ಅವರೇ ಮುಂದುವರೀತಾರೆ ಅನ್ನೋ ವಿಶ್ವಾಸ ಇದೆ. ಇದೇ ಗುಡ್ ನ್ಯೂಸ್ ಎಂದು ಹೇಳಿದ್ದಾರೆ.

Share This Article