ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ (BJP) ನಾಯಕರು ಕಾಂಗ್ರೆಸ್‍ಗೆ (Congress) ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತರೇ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನಲಾಗುತ್ತದೆ. ಅದರಲ್ಲೂ ಯಡಿಯೂರಪ್ಪ ನವರ ಮಾನಸ ಪುತ್ರ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಸ್ವಪಕ್ಷದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮತ್ತೆ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ರೇಣುಕಾಚಾರ್ಯ (MP Renukacharya) ಹೊಸಾ ಬಾಂಬ್ ಹಾಕಿದ್ದಾರೆ.
ಎಂಪಿ ರೇಣುಕಾಚಾರ್ಯ ಬಿಜೆಪಿಯಲ್ಲಿ ತನ್ನದೇ ಆಗಿರುವ ವರ್ಚಸ್ಸು ಹೊಂದಿರುವ ವ್ಯಕ್ತಿ, ಒಂದಲ್ಲ ಒಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ರೇಣುಕಾಚಾರ್ಯ ಈಗ ಸ್ವಪಕ್ಷದ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಾ, ಬೆಂಕಿ ಚೆಂಡಾಗಿದ್ದಾರೆ. ದಾವಣಗೆರೆ ಹೊನ್ನಾಳಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎಂಪಿ ರೇಣುಕಾಚಾರ್ಯ, ಸೀದಾ ಅವರ ಕಣ್ಣು ದಾವಣಗೆರೆ ಲೋಕಾಸಭಾ ಚುನಾವಣೆಯ (Davanagere Loksabha Election) ಮೇಲೆ ಬಿದ್ದಿದ್ದು, ಶತಾಯಗತಾಯ ಟಿಕೆಟ್ ಪಡೆಯಲೇ ಬೇಕು ಎಂದು ಸರ್ಕಸ್ ಮಾಡುತ್ತಿದ್ದು, ಲೋಕಾಸಭಾ ಚುನಾವಣೆ ಇನ್ನು ಒಂದು ವರ್ಷ ಇರುವಾಗಲೇ ಕ್ಷೇತ್ರ ಸುತ್ತುವ ಕೆಲಸದ ಜೊತೆಗೆ ಪ್ರಮುಖನಾಯಕರ ಭೇಟಿಯನ್ನು ಕೂಡ ಮಾಡುತ್ತಾ ಬಂದಿದ್ದಾರೆ. ಆದರೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ತಾನು ಕೂಡ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದು. ರೇಣುಕಾಚಾರ್ಯಗೆ ಮತ್ತಷ್ಟು ಸುತ್ತಾಟ ಹೆಚ್ಚಾಗಿದೆ.
Advertisement
Advertisement
ಕೆಲ ದಿನಗಳಿಂದ ಕಾಂಗ್ರೆಸ್ ನಾಯಕರ ಭೇಟಿ ಮಾಡುತ್ತಿದ್ದು, ಇದರಿಂದ ದಾವಣಗೆರೆಯಿಂದ ಲೋಕಾಸಭಾ ಚುನಾವಣೆಗೆ ಎಂಪಿ ರೇಣುಕಾಚಾರ್ಯ ಸ್ಪರ್ಧೆ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಆದ್ರೆ ರೇಣುಕಾಚಾರ್ಯ ಮಾತ್ರ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ: ಗೆಹ್ಲೋಟ್
Advertisement
Advertisement
ಸ್ವಪಕ್ಷದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ರೇಣುಕಾಚಾರ್ಯ ನಮ್ಮ ಬಿಜೆಪಿ ಪಕ್ಷ ನಾವಿಕನಿಲ್ಲದ ಹಡಗಾಗಿದೆ.. ಚುನಾವಣೆ ಮುಗಿದು ಇಷ್ಟು ದಿನವಾದ್ರು ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ. ಅಲ್ಲದೆ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಯಡಿಯೂರಪ್ಪನವರನ್ನು ಕಡೆಗಣೆಸಿದ್ದಾರೆ ಅದರ ಶಾಪದಿಂದ ಈ ಸ್ಥಿತಿ ಬಂದಿದೆ. ಪಕ್ಷಕ್ಕೆ ಮೋದಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಯಡಿಯೂರಪ್ಪ ಕೂಡ ಅಷ್ಟೇ ಮುಖ್ಯ. ಅಲ್ಲದೆ ಕರ್ನಾಟಕ ರಾಜಕಾರಣವನ್ನು ಎಲ್ಲೋ ಕೂತು ಯಾರೋ ಕಂಟ್ರೋಲ್ ಮಾಡ್ತಾ ಇದ್ದಾರೆ ಅಂತ ಆರೋಪ ಮಾಡಿದ್ದಾರೆ.
ಒಟ್ಟಾರೆಯಾಗಿ ಎಂಪಿ ರೇಣುಕಾಚಾರ್ಯ ದಾವಣಗೆರೆಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದು, ರೇಣುಕಾಚಾರ್ಯರನ್ನು ಕಡೆಗಣಿಸಿದ ಹಿನ್ನಲೆ ಸ್ವಪಕ್ಷದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗಲಿದೆ ಎನ್ನುವುದು ಕಾದು ನೋಡಬೇಕಿದೆ
Web Stories