ದಾವಣಗೆರೆ: 15 ದುರಂಹಕಾರಿ ಸಚಿವರನ್ನು ವಜಾ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಶಾಸಕ ರೇಣುಕಾಚಾರ್ಯ ದೂರು ನೀಡಿದ್ದಾರೆ.
ಸ್ವಪಕ್ಷದ ಸಚಿವರ ವಿರುದ್ಧವೇ ಗುಡುಗಿದ ರೇಣುಕಾಚಾರ್ಯರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದು, 15 ದುರಹಂಕಾರಿ ಸಚಿವರ ವಿರುದ್ಧ ನಾನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ. ನಾವು ಕರೆ ಮಾಡಿದರೆ ನಮ್ಮ ಕರೆಯನ್ನ ಅವರು ಸ್ವೀಕರಿಸುವುದಿಲ್ಲ. ಅವರಿಗೆ ಅಭಿವೃದ್ಧಿ ಕೆಲಸಕ್ಕೆ ಪತ್ರ ಕೊಟ್ಟರೆ ಅವರ ಆಪ್ತ ಕಾರ್ಯದರ್ಶಿ ಪರೀಶಿಲಿಸಿ ಎಂದು ಅಧಿಕಾರಿಗಳಿಗೆ ಹೇಳುತ್ತಾರೆ. ಇದು ಶಾಸಕರಿಗೆ ಮಾಡುತ್ತಿರುವ ಅವಮಾನವಾಗಿದೆ. ಅದಕ್ಕೆ 15 ಸಚಿವರನ್ನ ಕ್ಯಾಬಿನೆಟ್‍ನಿಂದ ವಜಾ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ನಾನು ಲಾರ್ಡ್ ಶಿವ ಅಲ್ಲ, ನಾನು ನಿಮ್ಮ ಶಿವಣ್ಣ ಮಾತ್ರ: ಹ್ಯಾಟ್ರಿಕ್ ಹೀರೋ ಹೀಗಂದಿದ್ಯಾಕೆ..?
Advertisement
Advertisement
ನಾನು 15 ಸಚಿವರು ವಿರುದ್ಧ ಲಿಖಿತ ದೂರು ನೀಡಿಲ್ಲ. ಕರೆ ಮಾಡಿ ಸಚಿವರ ವರ್ತನೆ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ನಾಲ್ಕು ದಿನದಲ್ಲಿ ಸಚಿವರ ಸಭೆ ಕರೆಯುತ್ತೇನೆ ಅಂತ ಹೇಳಿದ್ದಾರೆ. ಅಂತಹ ದುರಂಹಕಾರಿ ಸಚಿವರು ಕ್ಯಾಬಿನೆಟ್‍ನಲ್ಲಿರೋದು ಬೇಡ. ಅವರನ್ನ ಸಂಪುಟದಿಂದ ವಜಾ ಮಾಡಬೇಕು ಎಂದು ಗುಡುಗಿದ್ದಾರೆ.
Advertisement
Advertisement
ನಾನು ಸಚಿವರೊಬ್ಬರಿಗೆ ಕರೆ ಮಾಡಿದೆ. ಅವರು ಫೋನ್ ರಿಸೀವ್ ಮಾಡಿಲ್ಲ. ಅವರ ಆಪ್ತ ಕಾರ್ಯದರ್ಶಿಗೆ ಮಾಡಿದರೆ ಕೋವಿಡ್ ಬಂದಿದೆ ಎಂದು ಹೇಳಿದ್ದಾರೆ. ಆದರೆ ಅದೇ ಸಚಿವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದಾರೆ. ಇದು ನನಗೆ ಸಾಕಷ್ಟು ಬೇಸರ ತಂದಿರುವ ವಿಚಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಪಶುಪಾಲನೆ, ಪಶುವೈದ್ಯಕೀಯ ಇಲಾಖೆ ಮಾಡಬೇಕಿದೆ: ಪ್ರೀತಂಗೌಡ
ನಾನು ರಾಜ್ಯಾಧ್ಯಕ್ಷರ ಜೊತೆ ಇದನ್ನು ಹೇಳಿದ್ದೇನೆ. ದುರಹಂಕಾರಿ ಸಚಿವರ ಹೆಸರುಗಳನ್ನು ಹೇಳಿದ್ದೇನೆ. ಈ ರೀತಿಯ ಸಚಿವರಿಂದ ಪಕ್ಷಕ್ಕೆ, ಸಂಘಟನೆಗೆ ಮುಜುಗರವಾಗುತ್ತದೆ ಎಂದು ಹೇಳಿದ್ದೇನೆ. ಇನ್ನು ನಾಲ್ಕು ದಿನಗಳಲ್ಲಿ ರಾಜ್ಯಾಧ್ಯಕ್ಷರು ಅವರನ್ನು ಕರೆಸಿ ಮಾತನಾಡುತ್ತಾರೆ ಎಂದು ತಿಳಿಸಿದರು.