ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ (MP Renukacharya) ರ ಸಹೋದರನ ಮಗ ನಾಪತ್ತೆಯಾಗಿದ್ದು, ಭಾರೀ ಅನುಮಾನ ಹುಟ್ಟಿದೆ.
ರೇಣುಕಾಚಾರ್ಯರ ಸಹೋದರನ ಮಗ ಚಂದ್ರು ಅಲಿಯಾಸ್ ಚಂದ್ರಶೇಖರ್ (Chandrashekhar) ನಾಪತ್ತೆಯಾದವರು. ಇದರಿಂದ ಇಡೀ ಕುಟುಂಬಕ್ಕೆ ಆಘಾತವಾಗಿದ್ದು, ಅಣ್ಣನ ಮಗನ ಹುಡುಕಾಟದಲ್ಲಿ ಶಾಸಕ ರೇಣುಕಾಚಾರ್ಯ ಇದ್ದಾರೆ. ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟ ಗಾಡಿಯಲ್ಲಿ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗ (Shivamogga) ದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು. ಆದರೆ ಇದ್ದಕ್ಕಿದಂತೆ ಭಾನುವಾರ ನಾಪತ್ತೆಯಾದವರು ಇನ್ನೂ ಪತ್ತೆಯಾಗಿಲ್ಲವಂತೆ.
Advertisement
Advertisement
ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿಯಲ್ಲಿ ನಿನ್ನೆ ಫೋನ್ ಸ್ವಿಚ್ಛ್ ಆಫ್ ಆಗಿದ್ದು, ಕುಟುಂಬಸ್ಥರಲ್ಲಿ ಭಯವನ್ನುಂಟು ಮಾಡಿದೆ. ಫೋನ್ ಸ್ವಿಚ್ಛ್ ಆಫ್ ಆದ ಬಳಿಕ ಅಂದಿನಿಂದ ನಾಪತ್ತೆಯಾಗಿದ್ದು ಇದುವರೆಗೂ ಸಿಕ್ಕಿಲ್ಲವಂತೆ. ಹೊನ್ನಾಳಿ ಪೊಲೀಸರು ಹಾಗೂ ಚಂದ್ರು ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದು, ರೇಣುಕಾಚಾರ್ಯ ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗೆ 5 ವರ್ಷ ಜೈಲು
Advertisement
Advertisement
ರೇಣುಕಾಚಾರ್ಯ ಸಹೋದರ ಎಂ.ಪಿ ರಮೇಶ್ (MP Ramesh) ಆತಂಕದಲ್ಲಿದ್ದಾರೆ. ಚಂದ್ರಶೇಖರ್ ತಾಯಿ ಉಮಾ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷೆಯಾಗಿದ್ದು, ತಂದೆ ರಮೇಶ್ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿದ್ದರು. ಯಾವಾಗಲೂ ಕೂಡ ಎಂಪಿ ರೇಣುಕಾಚಾರ್ಯ ಜೊತೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಕಳೆದ ಎರಡು ದಿನಗಳಿಂದ ಕಾಣೆಯಾದ ಚಂದ್ರಶೇಖರ್ ರೇಣುಕಾಚಾರ್ಯ ಜೊತೆ ಸಕ್ರಿಯವಾಗಿ ಹೊನ್ನಾಳಿ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದರು. ದೊಡ್ಡಪ್ಪನಿಗೆ ಬೆನ್ನೆಲುಬಾಗಿದ್ದ ಚಂದ್ರಶೇಖರ್‍ಗಾಗಿ ಹುಡುಕಾಟ ನಡೆಸಲಾಗಿದೆ.
ಒಟ್ಟಿನಲ್ಲಿ ಯಾವಾಗಲೂ ಎಲ್ಲಿ ಹೋದರು ಕೂಡ ಸ್ನೇಹಿತರೊಂದಿಗೆ ಹೋಗುತ್ತಿದ್ದ ಚಂದ್ರು, ಈ ಬಾರಿ ಒಬ್ಬನೇ ಹೋಗಿರುವುದು ಕೂಡ ಮತ್ತಷ್ಟು ಆತಂಕ ಮನೆ ಮಾಡಿದೆ. ಚಿಂತೆಗೀಡಾದ ಚಂದ್ರು ಪೋಷಕರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.