ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಉದಿತ್ ರಾಜ್ (Udit Raj) ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನ ಅಂಬೇಡ್ಕರ್‌ಗೆ ಹೋಲಿಕೆ ಮಾಡಿದ್ದಾರೆ. ಎಕ್ಸ್‌ನಲ್ಲಿ ಸಂದೇಶವೊಂದನ್ನ ಹಂಚಿಕೊಂಡಿದ್ದು, ರಾಹುಲ್ ಗಾಂಧಿ (Rahul Gandhi) ಒಬಿಸಿಗಳ ಪಾಲಿನ 2ನೇ ಅಂಬೇಡ್ಕರ್ ಅಂತ ಬಣ್ಣಿಸಿದ್ದಾರೆ.
ओबीसी को सोचना पड़ेगा इतिहास बार बार प्रगति के लिए मौका नहीं देता । ताल कटोरा स्टेडियम के सम्मेलन में जो बात राहुल गांधी ने कही उस पर चल पड़ें और साथ दें । अगर ऐसा करते हैं तो इनके लिए राहुल गांधी दूसरा अंबेडकर साबित होंगे ।
— Dr. Udit Raj (@Dr_Uditraj) July 26, 2025
ಉದಿತ್ ಎಕ್ಸ್ ನಲ್ಲಿ ಏನಿದೆ?
ಇತಿಹಾಸವು ಪದೇ ಪದೇ ಪ್ರಗತಿಗೆ ಅವಕಾಶ ನೀಡುವುದಿಲ್ಲ ಎಂಬುದನ್ನ ಒಬಿಸಿಗಳು ಯೋಚಿಸಬೇಕು. ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಹೇಳಿದ್ದನ್ನ ನಾವೆಲ್ಲ ಅನುಸರಿಸೋಣ ಹಾಗೂ ಬೆಂಬಲಿಸೋಣ. ಒಬಿಸಿ ಸಮುದಾಯದ (OBCs Community) ಸದಸ್ಯರು ರಾಹುಲ್ ಗಾಂಧಿ ಅವರನ್ನ ಬೆಂಬಲಿಸಿ ಅನುಸರಿಸಿದ್ರೆ ಅವರು ʻ2ನೇ ಅಂಬೇಡ್ಕರ್ʼ (Ambedkar) ಆಗಬಹುದು. ಅವರು ಹೇಳಿದ ಹಾಗೆ ಮಾಡಿದ್ರೆ 2ನೇ ಅಂಬೇಡ್ಕರ್ ಅಂತ ಸಾಬೀತುಮಾಡ್ತಾರೆ ಅಂತ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ: ಯತೀಂದ್ರ ಹೇಳಿಕೆಗೆ ವಿಪಕ್ಷ ನಾಯಕರು ಕೆಂಡ
कांग्रेस को अब दूसरा आंबेडकर खोजने की चिंता है।
लेकिन देश जानता है कि कांग्रेस ने डॉ. आंबेडकर के साथ कैसे विश्वासघात किया और बार-बार उनका अपमान किया, ये इतिहास में दर्ज है।
सवाल ये है — कांग्रेस दूसरा नेहरू क्यों नहीं खोज रही?
क्योंकि ये प्रयास डॉ. आंबेडकर की विरासत और महानता को… https://t.co/Xe99AZ6c7j
— Amit Malviya (@amitmalviya) July 26, 2025
ಕೆರಳಿ ಕೆಂಡವಾದ ಬಿಜೆಪಿ
ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಹೇಳಿಕೆಗೆ ಬಿಜೆಪಿ ಕೆರಳಿ ಕೆಂಡವಾಗಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ To ಮುಂಬೈ – ಮೆದುಳು ಜ್ವರದಿಂದ ಬಳಲುತ್ತಿದ್ದ ಯುವತಿಯ ಏರ್‌ಲಿಫ್ಟ್
ಅಂಬೇಡ್ಕರ್ ಅವರ ಪರಂಪರೆಯನ್ನು ಕುಂದಿಸಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ. ಕಾಂಗ್ರೆಸ್ ಈಗ ಮತ್ತೊಬ್ಬ ಅಂಬೇಡ್ಕರ್ ಅವರನ್ನ ಹುಡುಕುವ ಬಗ್ಗೆ ಚಿಂತಿತವಾಗಿದೆ. ಆದ್ರೆ ಈ ಹಿಂದೆ ಅಂಬೇಡ್ಕರ್‌ಗೆ ಕಾಂಗ್ರೆಸ್ ಹೇಗೆ ದ್ರೋಹ ಬಗೆದಿದೆ, ಪದೇ ಪದೇ ಅವಮಾನಿಸಿದೆ ಎಂಬುದನ್ನು ಇಡೀ ದೇಶ ಕಂಡಿದೆ. ಇದು ಇತಿಹಾಸದಲ್ಲಿಯೂ ಉಳಿದಿದೆ. ಇತಿಹಾಸ ವೈಫಲ್ಯಗಳನ್ನು ಎಂದಿಗೂ ಮುಚ್ಚಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.
ಮುಂದುವರಿದು… ಕಾಂಗ್ರೆಸ್ ಕಾಂಗ್ರೆಸ್ ಇನ್ನೊಬ್ಬ ನೆಹರೂ ರನ್ನ ಏಕೆ ಹುಡುಕುತ್ತಿಲ್ಲ? ಏಕೆಂದ್ರೆ ಅಂಬೇಡ್ಕರ್ ಅವರ ಪರಂಪರೆ ಮತ್ತು ಶ್ರೇಷ್ಠತೆಯನ್ನ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ 10 ವರ್ಷ ಸಿಎಂ ಆಗ್ಬಿಟ್ರೆ ತಾಯಿ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ: ಪ್ರತಾಪ್ ಸಿಂಹ ಕಿಡಿ