ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ನಾಯಿಮರಿ ಗಿಫ್ಟ್ ಕೊಟ್ಟಿದ್ದಾರೆ.
‘ವೋಟ್ ಚೋರಿ’ (ಮತಗಳ್ಳತನ) ವಿರೋಧಿ ಅಭಿಯಾನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಖರ್ಗೆಯವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ: ಸೆ.9ಕ್ಕೆ ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ – ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ
ಭೇಟಿ ಸಂದರ್ಭದಲ್ಲಿ ಖರ್ಗೆ (Mallikarjun Kharge) ಕುಟುಂಬಕ್ಕೆ ಮುದ್ದಾದ ನಾಯಿಮರಿಯನ್ನು ಗಿಫ್ಟ್ ಆಗಿ ರಾಹುಲ್ ಗಾಂಧಿ ನೀಡಿದ್ದಾರೆ. ಖರ್ಗೆ ಕುಟುಂಬದ ಮಕ್ಕಳು ನಾಯಿಮರಿ ಜೊತೆ ಆಟವಾಡಿದರು.
ಆಗಸ್ಟ್ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಇದನ್ನೂ ಓದಿ: 800 ವರ್ಷ ಹಳೆಯ ಸೂಗೂರೇಶ್ವರ ದೇವಸ್ಥಾನಕ್ಕೆ ತಟ್ಟದ ಗ್ರಹಣ ದೋಷ – ವಿಶಿಷ್ಟ ವಾಸ್ತುಶಿಲ್ಪವೇ ಇಲ್ಲಿ ಶ್ರೀರಕ್ಷೆ