Connect with us

Bengaluru City

ಬಿಜೆಪಿ ಸಂಸದನಿಗೆ ಹಳೆಯ ಟ್ವೀಟ್‍ಗಳ ಕಾಟ- ಪ್ರತಾಪ್ ಸಿಂಹಗೆ ಟ್ಯಾಗ್ ಮಾಡಿ ಕಾಂಗ್ರೆಸ್ ಟ್ರೋಲ್

Published

on

ಬೆಂಗಳೂರು: ನಟ ಪ್ರಕಾಶ್ ರೈ ವಿರುದ್ಧ ಟ್ವಿಟ್ಟರ್‍ನಲ್ಲಿ ಕಾಲೆಳೆದು ಮಾನನಷ್ಟ ಮೊಕದ್ದಮೆ ನೋಟಿಸ್ ಪಡೆದಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈಗ ಅವರ ಹಳೆಯ ಟ್ವೀಟ್‍ಗಳು ಕಾಡ ತೊಡಗಿವೆ.

2012ರ ಅವಧಿಯಲ್ಲಿ ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ, ಕೇಂದ್ರ ಸಚಿವರಾದ ಅನಂತ್ ಕುಮಾರ್, ರಾಜ್‍ನಾಥ್ ಸಿಂಗ್, ಸುಷ್ಮಾ ಸ್ವರಾಜ್, ಈಗಿನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿರುದ್ಧ ಮಾಡಿದ್ದ ಟ್ವೀಟ್‍ಗಳೇ ತಿರುಗುಬಾಣವಾಗಿದೆ.

ಆರ್ ಎಸ್‍ಎಸ್, ಈಗಿನ ಕರ್ನಾಟಕ ಬಿಜೆಪಿಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಬಿಜೆಪಿ ಪ್ರಮುಖ ವಿರುದ್ಧ ಮಾಡಲಾಗಿದ್ದ ಟ್ವೀಟ್‍ಗಳನ್ನೇ ಬಳಸಿ ಈಗ ಟ್ರೋಲ್ ಮಾಡಲಾಗ್ತಿದೆ. ಟ್ರೋಲ್‍ಗೆ ಬೇಸತ್ತು ಪ್ರತಾಪ್ ಸಿಂಹ ಅವರು ಇದೀಗ ಹಳೇಯ ಟ್ವೀಟ್‍ಗಳನ್ನು ಡಿಲೀಟ್ ಮಾಡುತ್ತಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಜನ ಬರೆಯುತ್ತಿದ್ದಾರೆ.

ಪ್ರತಾಪ್ ಸಿಂಹ ಮಾಡಿದ್ದ ಟ್ವೀಟ್‍ಗಳು:

– ಯೂಸ್ ಲೆಸ್ ಅನಂತ್ ಕುಮಾರ್, ನಾಯ್ಡು, ಸುಷ್ಮಾಗೆ ಅವ್ರ ಜಾಗ ತೋರಿಸೋದಕ್ಕೆ ಬಿಜೆಪಿಗೆ ಇದು ಸಕಾಲ. ಉನ್ನತ ಹುದ್ದೆ ಖಂಡೂರಿ, ಜೇಟ್ಲಿ, ಪರಿಕ್ಕರ್ ಮತ್ತು ಮೋದಿಯನ್ನು ತರ್ಬೇಕು.

– ಅಡ್ವಾಣಿ ಪ್ರಾಮಾಣಿಕ ನಿಜ, ವಿಷದ ಹಾವು ಅನಂತ್ ಕುಮಾರ್‍ರನ್ನು ಬೆಳೆಸಿದ್ದು ಯಾರು..? ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ಹೋಲಿಕೆ ಮಾಡಿ ಸುಷ್ಮಾ ಸ್ವರಾಜ್ ರನ್ನು ಮೋದಿ ವಿರುದ್ಧ ಎತ್ತಿ ಕಟ್ತಿರೋರು ಯಾರು..?

– ನನಗೆ ಈ ಹೆಸರನ್ನು ಸೇರಿಸಲು ಮರೆತು ಹೋಯ್ತು. ರಾಜ್‍ನಾಥ್ ಸಿಂಗ್‍ರನ್ನೂ ಬಿಜೆಪಿ ಎಸೆದು ಬಿಡಬೇಕು.

– ಆರ್‍ಎಸ್‍ಎಸ್ ಬಗ್ಗೆ ಇದನ್ನು ಹೇಳುವುದಕ್ಕೆ ನನಗೆ ಬೇಸರವಾಗುತ್ತಿದೆ, ಬಿಜೆಪಿ ಮತ್ತು ರಾಷ್ಟ್ರದ ಎರಡರ ಪ್ರಜ್ಞೆಯನ್ನು ಕಾಯಬೇಕಾದ ಆರ್ ಎಸ್ ಎಸ್ ನಿತಿನ್ ಗಡ್ಕರಿಯನ್ನು ಬೆಂಬಲಿಸುವ ಮೂಲಕ ಭ್ರಷ್ಟಾಚಾರದ ಕಾವಲುಗಾರನಾಗಿ ಕುಸಿದಿದೆ.

– ಯೆಡ್ಡಿ ವಿರುದ್ಧ ಗುಂಪುಗಾರಿಕೆ ಮಾಡೋ ಮೂಲಕ ಪಕ್ಷವನ್ನು ದುರ್ಬಲಗೊಳಿಸಿದ್ದಕ್ಕೆ ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ಲಾಲ್ ಕೃಷ್ಣ ಅಡ್ವಾಣಿಗೆ ಥ್ಯಾಂಕ್ಸ್ ಹೇಳ್ಬೇಕು.

– ಸುಷ್ಮಾ ಸ್ವರಾಜ್ ಒಬ್ಬರು ಗುಳ್ಳೆ ನರಿ.

– ಈ ಜಿವಿಲ್ ರಾವ್ ಯಾರು..? ತನ್ನ ಮೂರ್ಖತನ ಪ್ರದರ್ಶಿಸ್ಲಿಕ್ಕೆ ಟಿವಿ ಚರ್ಚೆಗೆ ಅವ್ರನ್ನು ಕಳಿಸಿಕೊಟ್ಟಿದ್ದು ಯಾರು..? ಜಾವ್ಡೇಕರ್, ಜಿವಿಎಲ್‍ಗೆ ಬಲವಂತದ ವಿ ಆರ್ ಎಸ್ ಕೊಡ್ಬೇಕು.

– ವಾದ್ರಾ ಬಗ್ಗೆ ಬಿಜೆಪಿ ಯಾಕೆ ಚರ್ಚೆ ಮಾಡ್ತಿಲ್ಲ..? ಬಿಜೆಪಿಯವರು ಹೆದರಿರೋದು ಯಾರಿಗೆ..? ಗಣಿ ಹಗರಣದಿಂದ ಸುಷ್ಮಾ ಎಷ್ಟು ತಿಂದಿದ್ದಾರೆ..?

Click to comment

Leave a Reply

Your email address will not be published. Required fields are marked *