ಮೈಸೂರು: ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಆರೋಪಿಗಳಿಗೆ ಸ್ಟೇಷನ್ ಬೇಲ್ ನೀಡಿದ ವಿಚಾರವಾಗಿ ಮೈಸೂರಿನಲ್ಲಿ ಸಂಸದ ಪ್ರತಾಪ್‍ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಇದು ಬೇಲ್ ಕೊಟ್ಟವರು ಮಾಡಿದ ದೊಡ್ಡ ಅನಾಹುತ. ನಾನು ಇದನ್ನು ಖಂಡಿಸುತ್ತೇನೆ. ಏಕೆಂದರೆ ನಮ್ಮ ದೇಶದ ಅನ್ನ ತಿಂದು ನಮ್ಮ ದೇಶದಲ್ಲಿ ಓದಿ ಬೇರೆ ದೇಶಕ್ಕೆ ಜೈ ಎನ್ನುವವರನ್ನು ಇಷ್ಟು ಸುಲಭವಾಗಿ ಜಾಮೀನು ನೀಡಿದ್ದು ಮಹಾ ಅಪರಾಧ ಇದು. ಅವರು ಯಾಕೆ ಸ್ಟೇಷನ್ ಬೇಲ್ ನೀಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ದೇಶದ್ರೋಹ ಮಾಡಿದ ಆರೋಪಿಗಳನ್ನು ಇಷ್ಟು ಸುಲಭವಾಗಿ ಬಿಡುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿ ದೇಶದ್ರೋಹಿಗಳ ಬೆನ್ನಿಗೆ ನಿಂತಿದ್ಯಾ ಸರ್ಕಾರ?- ಪೊಲೀಸರಿಗೆ, ಬೊಮ್ಮಾಯಿಗೆ ‘ಪಬ್ಲಿಕ್’ ಪ್ರಶ್ನೆಗಳು
Advertisement
Advertisement
ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಹೇಳುವವರನ್ನು ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಾರೆ ಎಂದರೆ ಇದಕ್ಕಿಂತ ದುರಾದೃಷ್ಟಕರ ಸಂಗತಿ ಮತ್ತೊಂದು ಇಲ್ಲ. ಇದು ನಮ್ಮ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ಕಾಶ್ಮೀರ ವಿದ್ಯಾರ್ಥಿಗಳ ಮೇಲೆ ಹಲ್ಲೆ- ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ದೂರು ದಾಖಲು
Advertisement
ಅಲ್ಲದೆ ಗೃಹ ಸಚಿವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಮಂಗಳೂರಿನಲ್ಲಿ ನಡೆದ ಘಟನೆ ಸಂದರ್ಭದಲ್ಲೂ ತಮ್ಮ ಕಾರ್ಯದಕ್ಷತೆಯನ್ನು ತೋರಿಸಿದ್ದಾರೆ. ಈ ವಿಷಯದಲ್ಲಿ ಗೃಹ ಸಚಿವರು ಎಲ್ಲಾ ಸ್ಟೇಷನ್‍ಗೂ ಫೋನ್ ಮಾಡುವುದಕ್ಕೆ ಸಾಧ್ಯವಾಗಿರುವುದಿಲ್ಲ. ಈ ಪ್ರಕರಣದ ಬಗ್ಗೆ ಅವರು ಪರಿಶೀಲನೆ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.