ಚಿತ್ರದುರ್ಗ: ಕರ್ನಾಟಕ ರಾಜ್ಯಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಏನು! ಯಾಕೆ ಈ ಜಯಂತಿ ಮಾಡ್ತಿದ್ದಾರೆ ಅನ್ನೋದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಟಿಪ್ಪು ವಿರೋಧಿ ವಿಚಾರ ಸಂಕೀರ್ಣದಲ್ಲಿ ಭಾಗವಹಿಸದಂತೆ ನಿಷೇಧಾಜ್ಞೆ ಜಾರಿ ಮಾಡಿದ್ದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ ಸಂಸದರಿಗೆ ಸುದ್ದಿಗೋಷ್ಟಿ ನಡೆಸದಂತೆ ತಡೆಯಲು ಬಂದ ಪೊಲೀಸರು ಹಾಗು ಪ್ರತಾಪ್ ಸಿಂಹ ನಡುವೇ ತೀವ್ರ ವಾಗ್ವಾದ ನಡೆಯಿತು.
ಇದನ್ನೂ ಓದಿ: ಟಿಪ್ಪು ಜಯಂತಿಗೆ ಇನ್ನೆರಡು ದಿನ ಬಾಕಿಯಿರುವಾಗ್ಲೇ ಕೋಟೆನಾಡಲ್ಲಿ ಹೈ ಅಲರ್ಟ್
ಕೊನೆಗೆ ಸಂಸದರ ಒತ್ತಾಯಕ್ಕೆ ಮಣಿದ ಪೊಲೀಸರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲು ಅನುಮತಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕು ದಿನಗಳ ನಿಷೇದಾಜ್ಞೆ ಹೊರಡಿಸಿರೋ ಡಿಸಿ ಹಾಗು ಎಸ್ಪಿಗೆ ನೋಟೀಸ್ ಜಾರಿ ಮಾಡಿರೋ ಜಿಲ್ಲಾ ಸತ್ರ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ಅಲ್ಲದೇ ಟಿಪ್ಪು ಇತಿಹಾಸದಲ್ಲಿರೋ ಟಿಪ್ಪುವಿನ ಸತ್ಯಾಂಶವನ್ನು ಸಮಾಜಕ್ಕೆ ತಿಳಿಸಿ, ಜಾಗೃತಿ ಮೂಡಿಸೊದೇ ನಮ್ಮ ಉದ್ದೇಶವಾಗಿದೆ ಅಂದ್ರು.
ಇದನ್ನೂ ಓದಿ: ಟಿಪ್ಪು ಖಡ್ಗ ಖರೀದಿಸಿ ಮಲ್ಯ ಬಿಸಿನೆಸ್ ಬಿದ್ಹೋಯ್ತು, ಸಿಎಂ ಅಧಿಕಾರ ಸುಟ್ಟುಕೊಳ್ಳೋದು ನಿಶ್ಚಿತ- ಪ್ರತಾಪ್ ಸಿಂಹ
ವಿವಿಧ ದಾರ್ಶನಿಕರ ಜಯಂತಿ ಮಾಡುವ ಸರ್ಕಾರದ ಕಾರ್ಯಕ್ಕೆ ನಾವೆಂದೂ ಅಡ್ಡಿಪಡಿಸಿಲ್ಲ. ಆದ್ರೆ ಕಾಡನ್ನೇ ಕೊಳ್ಳೆ ಹೊಡೆದ ಕಾಡುಗಳ್ಳ ವೀರಪ್ಪನ್ ಜಯಂತಿಯನ್ನ ಅರಣ್ಯ ಇಲಾಖೆ ಮಾಡಿದಂತೆ ಭಾಸವಾಗುವ ಈ ಟಿಪ್ಪು ಜಯಂತಿಯನ್ನು ಕನ್ನಡ ಸಂಸ್ಕೃತಿ ಇಲಾಖೆ ಮಾಡ್ತಿದೆ ಅಂತ ವ್ಯಂಗ್ಯವಾಡಿದ್ರು.
ಇದನ್ನೂ ಓದಿ: ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ ವೀರಮರಣ ಹೇಗೆ ಆಗುತ್ತೆ: ರಾಷ್ಟ್ರಪತಿಗಳಿಗೆ ಪ್ರತಾಪ್ ಸಿಂಹ ಪ್ರಶ್ನೆ
ಕನ್ನಡವನ್ನು ಬದಲಿಸಿ ಆಡಳಿತ ಭಾಷೆಯನ್ನಾಗಿ ಪರ್ಷಿಯನ್ ಭಾಷೆ ತಂದ ಟಿಪ್ಪು ಜಯಂತಿ ಮಾಡಲು ಹೊರಟಿರೋ ಈ ಸರ್ಕಾರ ರಾಜ್ಯಕ್ಕೆ ಮಾಡುತ್ತಿರೋ ದೊಡ್ಡ ದ್ರೋಹ ಇದಾಗಿದೆ ಅಂತ ಅವರು ಆರೋಪಿಸಿದ್ರು.