ಬಾಗಲಕೋಟೆ: ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುವ ಸ್ಥಿತಿಗೆ ಬಂದಿದೆ. ಇದೇ ರೀತಿ ಹಿಂದೂ-ಮುಸ್ಲಿಮರಿಗೆ ಧೋರಣೆ ಮುಂದುವರಿಸಿ, ಜಾತಿ-ಜಾತಿಗಳ ಮಧ್ಯೆ ಬೆಂಕಿ ಹಚ್ಚಿದ್ರೆ, ಉತ್ತರ ಪ್ರದೇಶದ ಪರಿಸ್ಥಿತಿಯನ್ನು ರಾಜ್ಯದ ಸಿಎಂ ಸಿದ್ದು ಕಾಣಲಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ನೀತಿ ಅನುಸರಿಸುತ್ತಿರೋ ಸಿಎಂ ಮುಸ್ಲಿಮರ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿ, ಹಿಂದೂಗಳ ಹನುಮ ಹಾಗೂ ದತ್ತ ಜಯಂತಿಗೆ ಅಡ್ಡಿ ಮಾಡ್ತಿರೋದ್ಯಾಕೆ ಎಂದು ಪ್ರಶ್ನೆ ಮಾಡಿದ್ರು. ಸಿಎಂ ಕಾನೂನನ್ನು ಮುರಿಸುವ ಪ್ರಯತ್ನ ಮಾಡ್ತಿದ್ದಾರೆಂದು ಆರೋಪಿಸಿದ್ರು.
Advertisement
Advertisement
ವೀರಶೈವ ಹಾಗೂ ಲಿಂಗಾಯತರನ್ನು ಬೇರ್ಪಡಿಸಿ, ಸಾಧು ಸಂತರನ್ನ ಬೇರೆ ಮಾಡಿ, ಈ ಸಾಧು ಯಾವ ಜಾತಿ ಎಂದು ಮುಖ ನೋಡಿ ಸ್ವಾಮೀಜಿಗಳಿಗೆ ನಮಸ್ಕಾರ ಮಾಡುವ ಸ್ಥಿತಿಗೆ ಸಿಎಂ ತಂದಿದ್ದಾರೆ. ಮುಖ್ಯಮಂತ್ರಿಯವರು ನಾಡಿನ ಹಿಂದೂಗಳ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ರು.
Advertisement
ಇನ್ನು ಯೋಗೀಶ್‍ಗೌಡ ಹತ್ಯೆ ಪ್ರಕರಣದ ತನಿಖೆ ಅನುಮಾನಾಸ್ಪದ ರೀತಿಯಲ್ಲಿ ನಡೆಯುತ್ತಿದೆ. ಕೊಲೆಗಡುಕರನ್ನ ಸಿಎಂ ರಕ್ಷಣೆ ಮಾಡ್ತಿರೋದ್ಯಾಕೆ? ರಾಜ್ಯದ ಜನರ ಮುಂದೆ ಸಿಎಂ ಸತ್ಯ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ರು. ಗೌರಿ ಲಂಕೇಶ್ ಹತ್ಯೆ ಮಾಡಿರುವವರ ಸುಳಿವಿದ್ದರೂ ಗೃಹ ಸಚಿವರು ಪ್ರಕಟ ಮಾಡ್ತಿಲ್ಲ ಅಂತ ಅವರು ಹೇಳಿದ್ರು.
Advertisement
ಬಿಜೆಪಿ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಸಣ್ಣ ಪುಟ್ಟ ಗೊಂದಲಗಳಾಗಿರೋದು ನಿಜ. ಪಕ್ಷ ಬೆಳೆಯುತ್ತಿರೋದ್ರಿಂದ ಅಲ್ಲಲ್ಲಿ ಅಶಿಸ್ತು ಗೊಂದಲಗಳಾಗಿವೆ. ಅವುಗಳನ್ನೆಲ್ಲ ಬಗೆಹರಿಸಿಕೊಂಡು ಮುನ್ನಡೆಯುತ್ತೇವೆ. ಇದು ಪಕ್ಷ ಅಧಿಕಾರಕ್ಕೆ ಬರೋ ಮುನ್ಸೂಚನೆ ಎಂದು ಹೇಳಿದ್ರು.
ಬಿಎಸ್‍ವೈ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿಸುತ್ತೇವೆ. ಚುನಾವಣೆ ವೇಳೆ ಯಾತ್ರೆ ಮಾಡೋದು ಸಹಜ. ಜೆಡಿಎಸ್ ಹಾಗೂ ಕಾಂಗ್ರೆಸ್‍ನವರೂ ಯಾತ್ರೆ ಮಾಡಲಿ. ಆದ್ರೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಉಡಾಫೆ ಉತ್ತರ ನೀಡ್ತಿದ್ದಾರೆ ಎಂದು ಟೀಕಿಸಿದ್ರು.
https://www.youtube.com/watch?v=f0lk2O1Ndno