ಮೈಸೂರು: ಸಂಸದ ಪ್ರತಾಪದ ಸಿಂಹ ಅಭಿಮಾನಿಯೊಬ್ಬರು ನಟ ಪ್ರಕಾಶ್ ರೈ ಗೆ 9 ರೂಪಾಯಿ ಡಿಡಿ ಕಳುಹಿಸಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ನಟ ಪ್ರಕಾಶ್ ರೈ 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿರುವುದಕ್ಕೆ ಅಭಿಮಾನಿ ಸಂದೇಶ್ ಎಂಬವರು ಈ ಡಿಡಿಯನ್ನು ಕಳುಹಿಸಿದ್ದಾರೆ. ತಮಿಳು ಚಿತ್ರರಂಗದ ನಿರ್ಮಾಪಕರ ಸಂಘದ ಉಪಾಧ್ಯಕ್ಷರ ಕಚೇರಿ ವಿಳಾಸಕ್ಕೆ ಡಿಡಿ ಕಳುಹಿಸಲಾಗಿದೆ. ಪ್ರಕಾಶ್ ರೈ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಆಗಿರೋ ಕಾರಣ ಈ ವಿಳಾಸಕ್ಕೆ ಡಿಡಿ ಕಳುಹಿಸಲಾಗಿದೆ. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪ್ರಕಾಶ್ ರೈ
Advertisement
Advertisement
ನೀವು ಒಂದು ರುಪಾಯಿ ಕೇಳಿದ್ದೀರಿ. ನಾನು ನಿಮಗೆ 9 ರೂಪಾಯಿ ಕಳುಹಿಸಿದ್ದೇನೆ ತೆಗೆದುಕೊಳ್ಳಿ. ನಿಮ್ಮ ಮೌಲ್ಯ 1 ರೂಪಾಯಿ ಅಷ್ಟೆ ಅಂತಾ ನೀವೇ ಹೇಳಿದ್ದೀರಿ. ಆದರೆ, ನಾನು ಅದನ್ನು ಸ್ಪಲ್ಪ ಹೆಚ್ಚು ಮಾಡಿ 9 ರೂಪಾಯಿ ಕಳುಹಿಸಿದ್ದೇನೆ ಎಂದು ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಇದನ್ನೂ ಓದಿ: ನಾನು ಪ್ರಕಾಶ್ ರೈ ಅವರನ್ನ ತುಂಬು ಹೃದಯದಿಂದ ಅಭಿನಂದಿಸುತ್ತೇನೆ- ನಟರಿಗೆ ಪ್ರತಾಪ್ ಸಿಂಹ ತಿರುಗೇಟು
Advertisement
ಮಾನನಷ್ಟ ಹೂಡಿದ್ದು ಯಾಕೆ?
ಅಕ್ಟೋಬರ್ 2 ರಂದು ಪ್ರತಾಪ್ ಸಿಂಹ ವೆಬ್ಸೈಟ್ ಒಂದರಲ್ಲಿ ಬಂದಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. “ಮಗನ ಸಾವಿನ ದು:ಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವನು ಮೋದಿ? ಯೋಗಿಗೆ ಹೇಳುವಷ್ಟು ಯೋಗ್ಯತೆಯಿರುವವನಾ?” ಎನ್ನುವ ಹೆಡ್ಲೈನ್ ಈ ಸುದ್ದಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಕಾಶ್ ರೈ ಅವರು 1 ರೂ. ಪರಿಹಾರ ಕೋರಿ ಮೈಸೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.