ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಮನೆಗೆ ಇಂದು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಹರ್ಷ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಸಂಘಟನೆಯ ಒಳ್ಳೆಯ ಕಾರ್ಯಕರ್ತ, ಕ್ರಿಯಾಶೀಲಾ ಯುವಕನಾಗಿದ್ದ. ಮತಾಂಧದರ ಧರ್ಮಾಂಧತೆಗೆ ತುತ್ತಾಗಿದ್ದಾನೆ. ನಮ್ಮ ಸಮಾಜದ ಭಾಂಧವರು ಅವರ ಕುಟುಂವದವರೊಂದಿಗೆ ಇದ್ದೇವೆ. ಅವರು ಒಂಟಿಯಲ್ಲ, ನಾವೆಲ್ಲರೂ ಅವರ ಜೊತೆಗೆ ಇದ್ದೇವೆ. ಹರ್ಷ ಇನ್ನೂ ಸಂಘಟನೆಯಲ್ಲಿ ಬೆಳೆದು, ದೊಡ್ಡ ಮಟ್ಟದಲ್ಲಿ ನಾಯಕನಾಗಿ ಬೆಳೆಯುವಂತಹ ಯುವಕನಾಗಿದ್ದ. ಅವನ ಸಾವು ವೈಯಕ್ತಿಕವಾಗಿ ನೋವು, ನಾಚಿಕೆ ಆಗಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?
ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಗೃಹ ಸಚಿವರನ್ನು ಬಲವಾಗಿ ಕೇಳುತ್ತೇನೆ. ನಾನು ಮೈಸೂರು ಕೊಡಗು ಸಂಸದನಾಗಿ ರಾಜು, ಕುಟ್ಟಪ್ಪ ಹತ್ಯೆಯ ನೋವನ್ನು ಹತ್ತಿರದಿಂದ ನೋಡಿದ್ದೇನೆ. ಹರ್ಷನದ್ದು ಕೊಲೆಯಲ್ಲ, ಮುಸಲ್ಮಾನರ ಧರ್ಮಾಂಧತೆಗೆ ಬಲಿಯಾದ ಹತ್ಯೆ. ಇದು ಕೊಲೆ ಅಂತಾ ಪರಿಗಣಿಸಿದರೆ, ಕೇವಲ ಆರು ತಿಂಗಳಿನಲ್ಲಿ ಜಾಮೀನು ಮೇಲೆ ಹೊರಗೆ ಬರುತ್ತಾರೆ. ರಾಜು ಹಾಗೂ ಕುಟ್ಟಪ್ಪ ಹತ್ಯೆಯಾದಾಗ ಕೆಎಫ್‍ಡಿ, ಪಿಎಫ್‍ಡಿ ಹಾಗೂ ಎಸ್‍ಡಿಪಿಐ ಕೈವಾಡವಿತ್ತು. ಅವರಲ್ಲಿ ಸಂಖ್ಯೆ ಜಾಸ್ತಿ ಇದೆ. ಯುಎಪಿಐ ಅಡಿಯಲ್ಲಿ ಕೇಸ್ ಹಾಕಬೇಕು. ಕೋಕಾ ಕೇಸ್ ಹಾಕಬೇಕು. 302 ಕೇಸ್ ಹಾಕಿದರೆ ನ್ಯಾಯ ಕೊಡಲು ಆಗುವುದಿಲ್ಲ. ಕೊಲೆಗಾರರಿಗೆ ಧರ್ಮ ಇಲ್ಲ ಅಂತಾದರೆ, ಧರ್ಮವನ್ನೇ ನೋಡಿ ಏಕೆ ಕೊಲೆ ಮಾಡ್ತಿದ್ದಾರೆ. ಧರ್ಮಾಧಾರಿತ ಕೊಲೆಗಳು ನಿಲ್ಲಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಹತ್ಯೆಯಾಗಿರುವ ಹರ್ಷ ಕುಟುಂಬಸ್ಥರಿಗೆ 10ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಸಾಂತ್ವನ
ಹರ್ಷ ಕೊಲೆಯಾಗಿ ಒಂದು ವಾರ ಆಯ್ತು. ಒಬ್ಬ ಕಾಂಗ್ರೆಸ್ ನಾಯಕ ಕೂಡ ಏಕೆ ಭೇಟಿ ನೀಡಿಲ್ಲ. ಏಕೆ ಭೇಟಿ ನೀಡಿ ಒಂದು ಸಾಂತ್ವನ ಹೇಳಲಿಲ್ಲ. ದನಗಳ್ಳರಿಗೆ ಹೋಗಿ ಸಾಂತ್ವನ ಹೇಳ್ತೀರಾ. ಕಾಂಗ್ರೆಸ್ ಅವರು ಸಾವಲ್ಲಿ ರಾಜಕಾರಣ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಿನಿಮಾ ನೋಡಲು ಸಮಯ ಇದೆ. ಕಾಂಗ್ರೆಸ್‍ನವರಿಗೆ ಹಿಂದೂ ಕಾರ್ಯಕರ್ತ ಕೊಲೆ ಆದರೆ ಏನು ಆಗಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಗೆ ಜಮೀರ್ ಅಹಮದ್ ವೈಸ್ ಕ್ಯಾಪ್ಟನ್, ಡಿಕೆಶಿ ಅವರಿಗೆ ನಲಪಾಡ್ ವೈಸ್ ಕ್ಯಾಪ್ಟನ್. ಅವರ ಸಮುದಾಯದವರಿಗೆ ಏನಾದ್ರೂ ಆದರೆ ಓಡಿ ಹೋಗ್ತಾರೆ. ಇಂತಹವರು ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ಬಂದಾಗೆ ಆಗುತ್ತದೆ. ಕಾಂಗ್ರೆಸ್ ನಾಯಕರ ಬಗ್ಗೆ ನಮ್ಮ ಹಿದೂ ಸಮಾಜದವರು ಎಚ್ಚರಿಕೆ ವಹಿಸಬೇಕು. ಮೈಸೂರಿನಲ್ಲಿ ರಾಜು ಕೊಲೆಯಾದಾಗ ಸಹ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಕೇವಲ ಬಾಡೂಟ, ಸಭೆ ಸಮಾರಂಭ ಅಂತಾ ಓಡಾಡಿಕೊಂಡು ಇದ್ದರು ಎಂದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಹಿಂದೆ ಗೃಹ ಸಚಿವರಾಗಿದ್ದವರು. ಬೆಂಗಳೂರು, ಮಂಗಳೂರು ಘಟನೆ ಬಗ್ಗೆ ಹತ್ತಿರದಿಂದ ನೋಡಿ ತಿಳಿದುಕೊಂಡಿದ್ದಾರೆ. ಹೀಗಾಗಿ ಇಂತಹ ಪ್ರಕರಣದ ವಿರುದ್ಧ ಸಿಎಂ ಕಠಿಣ ನಿಲುವು ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.