ಮೈಸೂರು: ಸಿದ್ದರಾಮಯ್ಯ (Siddaramaiah) ಅವರು ಎಳಸು ಎಂದಿದ್ದಕ್ಕೆ ಬೇಸರವಿಲ್ಲ. ನಾನು ಯಾವಾಗ ತೀಕ್ಷ್ಣವಾಗಿ ಪ್ರಶ್ನೆ ಕೇಳ್ತೀನೋ ಆಗ ನನ್ನನ್ನ ಚೈಲ್ಡ್, ಎಳಸು ಅಂತಾರೆ. ನಾನು ಎಳಸು ಇರಬಹುದು, ಚೈಲ್ಡ್ ಅಂತಾನೆ ಭಾವಿಸಿ, ಚೈಲ್ಡ್ ಆಗಿಯೆ ಪ್ರಶ್ನೆ ಕೇಳುತ್ತಿದ್ದೇನೆ. ಉಚಿತ ಗ್ಯಾರಂಟಿಗೆ (Congress Guarantee) 59 ಸಾವಿರ ಕೋಟಿ ರೂ. ಎಲ್ಲಿಂದ ತರುತ್ತೀರಿ? ಅದನ್ನು ಹೇಳಿ ಸಾಕು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ತಿವಿದಿದ್ದಾರೆ.
Advertisement
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಎಳಸು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರ ನಿಘಂಟಿನಲ್ಲಿ ಪ್ರಬುದ್ಧತೆ ವ್ಯಾಖ್ಯಾನದಂತೆ ನಾನು ಇಲ್ಲ. ನಾನು ಯಾವಾಗ ತೀಕ್ಷ್ಣವಾಗಿ ಪ್ರಶ್ನೆ ಕೇಳ್ತೀನೋ ಆಗ ಸಿದ್ದರಾಮಯ್ಯ ಅವರು ನನ್ನನ್ನ ಚೈಲ್ಡ್, ಎಳಸು ಅಂತಾರೆ. ಸಿದ್ದರಾಮಯ್ಯ ಅವರೇ ನೀವು ಮೇಧಾವಿಗಳು ವಿಶ್ವದ ಪ್ರಸಿದ್ಧ ಅರ್ಥಿಕ ತಜ್ಞರು. 59 ಸಾವಿರ ಕೋಟಿ ರೂ. ಎಲ್ಲಿಂದ ತರುತ್ತೀರಿ? ಅನ್ನೋದನ್ನ ಹೇಳಿ ನಮಗೆ ಜ್ಞಾನ ತುಂಬಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಅಡ್ಜಸ್ಟ್‌ಮೆಂಟ್ ರಾಜಕಾರಣ: ಸ್ವಪಕ್ಷೀಯರ ವಿರುದ್ಧವೇ ಪ್ರತಾಪ್ ಸಿಂಹ ಅಸಮಾಧಾನ
Advertisement
ನಿಮ್ಮ ಪ್ರಕಾರ ಪ್ರಬುದ್ಧತೆ ಅಂದರೆ ಏನು?
ನಿಮ್ಮ ಪ್ರಕಾರ ಪ್ರಬುದ್ಧತೆ ಅಂದರೆ ಏನು? ತಮ್ಮ ರಾಜಕೀಯ ಲಾಭಕ್ಕಾಗಿ 2013 ರಲ್ಲಿ ಜಿ. ಪರಮೇಶ್ವರ್ ಸೋಲಿಸಿದ್ದೇ ಪ್ರಬುದ್ಧತೆ ಅನ್ನೋದಾದ್ರೆ ನನಗೆ ಅಂತಹ ಪ್ರಬುದ್ಧತೆ ಬೇಡ. ಮಗ, ಮೊಮ್ಮಗನ ರಾಜಕೀಯ ಗಟ್ಟಿಗೊಳ್ಳಿಸಬೇಕು ಅನ್ನೋದು ಪ್ರಬುದ್ಧತೆ ಅನ್ನೋದಾದರೆ ಆ ಪ್ರಬುದ್ಧತೆಯೂ ನನಗೆ ಬೇಡ. ರಾಜಕೀಯವಾಗಿ ಬೆಳೆಸಿದ ದೇವೇಗೌಡರನ್ನ ಏಕವಚನದಲ್ಲಿ ನಿಂದಿಸುವುದು, ಹಿರಿಯನ್ನು ತುಚ್ಛವಾಗಿ ಕಾಣುವುದು, ಗೆಲ್ಲಲ್ಲ ಹೊಂದಾಣಿಕೆ ಮಾಡಿಕೊಳ್ಳುತ್ತೀನಿ ಅನ್ನೋದು, ಗ್ಯಾರಂಟಿ ಮೂಲಕ ಜನರನ್ನು ದಾರಿ ತಪ್ಪಿಸಿ ನಂತರ ಜನರಿಗೆ ಬರೆ ಎಳೆಯವುದು, ಡಿಕೆ ಶಿವಕುಮಾರ್ ಅವರ ಮೇಲೆ ಎಂ.ಬಿ ಪಾಟೀಲ್ ರನ್ನ ಛೂ ಬಿಟ್ಟು, ಡಿಕೆಶಿಯವರನ್ನ ತುಳಿಯೋಕೆ ಯತ್ನಿಸೋದು ಇವೆಲ್ಲವೂ ಪ್ರಬುದ್ಧತೆ ಅನ್ನೋದಾದ್ರೆ ಅದು ಬೇಡ ನನಗೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಐಷಾರಾಮಿ ಕಾರು ಹೊಂದಿರುವವರು ಎಚ್ಚರ – ಮೈಸೂರಿನಲ್ಲಿ ಸಕ್ರಿಯವಾಗಿದೆ ಹೈಟೆಕ್ ಕಳ್ಳರ ಗ್ಯಾಂಗ್
Advertisement
Advertisement
ಇನ್ನಷ್ಟು ಆಕ್ರಮಣ ನೋಡುವುದಿದೆ:
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಿರೋ ಕಾರಣ ಕೆಲವರಿಗೆ ಧೈರ್ಯ ಬಂದಿದೆ. ಹೀಗಾಗಿ ಅಕ್ರಮಣ ಗಲಾಟೆ. ಮುಂದೆ ಬಹಳಷ್ಟು ನೋಡುವುದಿದೆ. ಹೆಚ್.ಡಿ ದೇವೇಗೌಡರು ಸಿದ್ದರಾಮಯ್ಯಗೆ ರಾಜಕೀಯ ಅಸ್ಥಿತ್ವ ಕೊಟ್ಟರು. ಆದ್ರೆ ಅವರಿಗೆ ಉಪಕಾರ ಸ್ಮರಣೆ ಇಲ್ಲ. ವರುಣಾದಲ್ಲಿ ನಿಮಗೆ ಯಾರು ಯಾರು ಸಹಾಯ ಮಾಡಿದರು. ಯಾರು ಯಾರಿಗೆ ಫೋನ್ ಮಾಡಿದ್ದಿರಾ? ನಟ ಸುದೀಪ್ ಪ್ರಚಾರಕ್ಕೆ ಬಾರದ ರೀತಿ ಹೇಗೆ ತಡೆದಿರಿ? ಶ್ರೀರಾಮುಲು ಕಾರ್ಯಕ್ರಮ ಆಗದಂತೆ ಹೇಗೆ ನೋಡಿಕೊಂಡ್ರಿ? ಯಾರು ತೀಕ್ಷ್ಣವಾಗಿ ಹೇಳಿಕೆ ಕೊಡದ ಹಾಗೇ ಹೇಗೆ ಮ್ಯಾನೇಜೆ ಮಾಡಿದ್ರಿ? ಎಲ್ಲವೂ ಗೊತ್ತಿದೆ. ಇದೆಲ್ಲವೂ ಮೊನ್ನೆ ಮೊನ್ನೆ ಆದ ಉಪಕಾರ. ಕನಿಷ್ಠ ಈ ಉಪಕಾರಗಳ ಸ್ಮರಣೆಯಾದರೂ ಮಾಡಿಕೊಳ್ಳಿ. ನಿಮಗೆ ರಾಜಕೀಯ ಅಸ್ತಿತ್ವ ಕೊಟ್ಟ ಹೆಚ್.ಡಿ ದೇವೇಗೌಡರನ್ನ ನೀವು ಸ್ಮರಣೆ ಮಾಡಲ್ಲ, ವರುಣಾದಲ್ಲಿ ಸಹಾಯ ಮಾಡಿದವರ ಉಪಕಾರವನ್ನಾದರೂ ಸ್ಮರಣೆ ಮಾಡಿ ಉಳಿದಿದ್ದು ಆಮೇಲೆ ಹೇಳ್ತೀನಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಜೀವನವಿಡೀ ಕಾಂಗ್ರೆಸ್ ಪಕ್ಷವನ್ನ ಬೈದುಕೊಂಡೇ ಬಂದಿದ್ದರು. ಸಾವರ್ಕರ್ ಪಾಠ ತೆಗೆದು ನೆಹರು ಪಠ್ಯ ಹಾಕಿದ್ದೀರಲ್ಲ. 1923 ರಲ್ಲಿ ನೆಹರು ಅವರು ಪಂಜಾಬ್ ಜೈಲಿನಲ್ಲಿದ್ದಾಗ ಕ್ಷಮಾಪಣೆ ಪತ್ರ ಬರೆದು ಜೈಲಿಂದ ಬಿಡುಗಡೆ ಆಗುತ್ತಾರೆ. ಕ್ಷಮಾಪಣೆ ಪತ್ರ ಬರೆದು ಹೊರಬಂದ ನೆಹರು ಪಠ್ಯವನ್ನೇಕೆ ಸೇರಿಸಿದ್ದೀರಿ? ಇತಿಹಾಸಕ್ಕೆ ದೋಖಾ ಬಗೆಯುತ್ತಿದ್ದೀರಾ? ಜನಕ್ಕೆ ನಿಮ್ಮ ನಿಜ ಬಣ್ಣ ಬಹಳ ಬೇಗ ಗೊತ್ತಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.