ಮೈಸೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಒಂದು ರೂಪಾಯಿ ಮಾನಹಾನಿ ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ ಇಂದು ರೈಗೆ ಸಿಂಹ ತಿರುಗೇಟು ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಪ್ರಕಾಶ್ ರೈ ಅವರನ್ನ ತುಂಬು ಹೃದಯದಿಂದ ಅಭಿನಂದಿಸುತ್ತೇನೆ. ಸಮಾಜದಲ್ಲಿ ಅವರ ಮಾನ ಮರ್ಯಾದೆಗೆ ಇರುವ ಮೌಲ್ಯ 1 ರೂ. ಅಷ್ಟೇ ಅನ್ನುವುದನ್ನು ಅವರು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಅವರನ್ನ ನಾನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಸಮಾಜದಲ್ಲಿ ಅವರ ನಡವಳಿಕೆಗೆ 3 ಕಾಸಿನ ಬೆಲೆ ಇದೆ. ಆದರೆ, ಅವರೇ ತಮ್ಮ ಮೌಲ್ಯವನ್ನು ನ್ಯಾಯಾಲಯದ ಮುಂದೆ 1 ರೂ.ಗೆ ಜಾಸ್ತಿ ಮಾಡಿಕೊಂಡಿದ್ದಾರೆ. ಅವರು ಸಾಧ್ಯವಾದ್ರೆ 3 ಕಾಸಿಗೆ ಮಾನಹಾನಿ ಕೇಸು ದಾಖಲಿಸಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಪ್ರಕಾಶ್ ರೈ
Advertisement
ಪ್ರಕಾಶ್ ರೈ ನಿಜ ಜೀವನದಲ್ಲೂ ಖಳನಾಯಕರಾಗಿದ್ದಾರೆ. ಅವರ ನಿಲುವುಗಳಲ್ಲಿ ದ್ವಂದ್ವ ಇದೆ. ಅವರು ಮೊದಲು ಪ್ರಕಾಶ್ ರಾಜ್ ಹೆಸರಿನಲ್ಲಿ ನನಗೆ ನೋಟಿಸ್ ನೀಡಿದ್ದರು. ಈಗ ಮೈಸೂರಿಗೆ ಬಂದು ಪ್ರಕಾಶ್ ರೈ ಹೆಸರಿನಲ್ಲಿ ಕೇಸು ಹಾಕಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ಅವರದು ಎರಡೆರಡು ಮನಸ್ಥಿತಿ ಇದೆ ಅಂತ ಎಂದು ಟೀಕಿಸಿದರು. ಇದನ್ನೂ ಓದಿ: ನಾನು ಹೇಳಿಕೆ ನೀಡಲ್ಲ, ಹೋರಾಡೋ ವ್ಯಕ್ತಿ: ಪ್ರತಾಪ್ ಸಿಂಹ ವಿರುದ್ಧ ರೈ ಕಿಡಿ
Advertisement
ಚುನಾವಣೆಗೆ ನಿಲ್ಲಿ: ಪ್ರಕಾಶ್ ರೈ ಅವರೇ ನಿಮಗೆ ಅಷ್ಟೂ ಆಸಕ್ತಿ ಇದ್ರೆ 28 ಕ್ಷೇತ್ರಗಳಲ್ಲಿ ಎಲ್ಲಾದ್ರೂ ಚುನಾವಣೆಗೆ ನಿಲ್ಲಿ. 28 ಕ್ಷೇತ್ರದಲ್ಲೂ ನಿಮ್ಮನ್ನು ಸೋಲಿಸಿ ಕಳುಹಿಸುತ್ತೇವೆ. ಇಂಥವರಿಗೆ ಓಟು ಹಾಕಬೇಡಿ ಅಂತೀರಲ್ಲ. ಅದನ್ನು ಜನರು ನಿರ್ಧಾರ ಮಾಡ್ತಾರೆ. ನೀವು ಓಟು ಹಾಕಬೇಡಿ ಅಂತ ಹೇಳಿದ ತಕ್ಷಣ ನಿಮ್ಮ ಮಾತನ್ನ ಯಾರು ಕೇಳಲ್ಲ ಎಂದರು. ಇದನ್ನೂ ಓದಿ: ಅಪ್ರಸ್ತುತ ವ್ಯಕ್ತಿಗಳ ಬಗ್ಗೆ ಮಾತನಾಡಲ್ಲ: ಪ್ರತಾಪ್ ಸಿಂಹ
ಪ್ರಕಾಶ್ ರೈ ಅವರನ್ನು ನನ್ನ ಎದುರಿಗೆ ಚುನಾವಣೆಗೆ ನಿಲ್ಲಿ ಅಂತಾ ಕೇಳೋಲ್ಲ. ಅವರು ಮೊದಲು ಗ್ರಾಮ ಪಂಚಾಯತ್ ಗೆದ್ದು ಬರಲಿ. ನನ್ನ ಎದುರಿಗೆ ಸಂಸದರ ಚುನಾವಣೆಗೆ ನಿಲ್ಲುವ ದೊಡ್ಡ ಕೆಲಸಕ್ಕೆ ಅವರನ್ನು ಕರೆಯಲ್ಲ. ಅವರ ಯೋಗ್ಯತೆ ಏನು ಅಂತ ಅವರೇ ನ್ಯಾಯಾಲಯದಲ್ಲಿ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ತಮ್ಮ ದಂಧೆಗಾಗಿ, ಹಣಕ್ಕಾಗಿ ತಮಿಳುನಾಡಿನಲ್ಲಿ ರೈ, ಇಲ್ಲಿ ರಾಜ್: ಪ್ರತಾಪ್ ಸಿಂಹ