ನವದೆಹಲಿ: ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧವೇ ಟ್ವೀಟ್ ಮಾಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ನಾಯಕ ಮೊಯ್ಲಿ ಅವರು ಸುಮ್ ಸುಮ್ನೆ ಏನೂ ಮಾತನಾಡುವುದಿಲ್ಲ. ಸಾಕಷ್ಟು ಯೋಚಿಸಿ ಅಳೆದು ತೂಗಿ ಮಾತನಾಡುತ್ತಾರೆ. ಸಾಕಷ್ಟು ಹತಾಸೆಯಿಂದ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಿಂದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ದರೋಡೆ ಗೊತ್ತಾಗುತ್ತಿದೆ ಅಂತ ಹೇಳಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪ ನಿಜವಾಗಿದೆ. ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಾಕ್ಷಿ ಕೇಳಿದ್ರು. ಸಿಎಂಗೆ ಮೊಯ್ಲಿ ಅವರೇ ಉತ್ತರ ಕೊಟ್ಟಿದ್ದಾರೆ. ಮೊಯ್ಲಿ ಅವರ ಮೇಲೆ ಒತ್ತಡ ಹೇರಿದ ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದಾರೆ. ನಿರ್ಭೀತಿಯಿಂದ ಟ್ವೀಟ್ ಮಾಡಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ; ವೀರಪ್ಪ ಮೊಯ್ಲಿ ಟ್ವೀಟ್ 10% ಕಮಿಷನ್ ಸರ್ಕಾರದ ಆರೋಪಕ್ಕೆ ಸಾಕ್ಷಿ : ಬಿಎಸ್‍ವೈ
Advertisement
Advertisement
Advertisement
ಇದೇ ವೇಳೆ ಕಾವೇರಿ ಸಭೆ ಮುಂದೂಡಿಕೆ ವಿಚಾರದ ಕುರಿತು ಮಾತನಾಡಿದ ಅವರು, ಸರಕಾರ ಏಕಾಏಕಿ ಸಭೆ ರದ್ದು ಮಾಡಿದೆ. ಮೊಯ್ಲಿ ಹೇಳಿಕೆಯಿಂದ ಮುಜುಗರ ತಪ್ಪಿಸಲು ಸಭೆ ಮುಂದೂಡಿಕೆ ಮಾಡಲಾಗಿದೆ. ಸಿಎಂಗೆ ಭಯ ಇಲ್ಲದೇ ಇದ್ದರೆ ಸಭೆ ನಡೆಸಬೇಕಿತ್ತು. ಸಭೆ ಮುಂದೂಡುವ ತುರ್ತು ಅರ್ನಿವಾರ್ಯತೇ ಏನಿತ್ತು ಎಂದು ಸಂಸದರು ಪ್ರಶ್ನಿಸಿದ್ರು.
ಮೊಯ್ಲಿ ಟ್ವೀಟ್ ನಲ್ಲೇನಿತ್ತು?: `ಕಾಂಟ್ರಾಕ್ಟರ್‍ಗಳ ಕೈಲಿ ಕಾಂಗ್ರೆಸ್ ಟಿಕೆಟ್’ ಅಂತ ಬರೆದು ಕಾಂಗ್ರೆಸ್‍ನಲ್ಲಿ ಹಣದ ಹೊಂದಾಣಿಕೆಯಿಂದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಿದೆ ಅಂತ ಪಕ್ಷದ ವಿರುದ್ಧ ನೇರವಾಗಿ ಮೊಯ್ಲಿ ತಮ್ಮ ಟ್ವೀಟ್ ನಲ್ಲಿ ಆರೋಪ ಮಾಡಿದ್ದರು. ಈ ಟ್ವೀಟನ್ನು ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿಯ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದರು. ಮೊಯ್ಲಿ ಟ್ವೀಟ್ ಮಾಡಿದ್ದ ಬೆನ್ನಲ್ಲೇ ಮಗ ಹರ್ಷ ಮೊಯ್ಲಿ ಅವರು ಕೂಡ ಅದೇ ಟ್ವೀಟನ್ನು ತಮ್ಮ ಖಾತೆಯಲ್ಲೂ ರಿಟ್ವೀಟ್ ಮಾಡಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದ ಬೆನ್ನಲ್ಲೇ ಇದೀಗ ಟ್ವೀಟ್ ಡಿಲೀಟ್ ಮಾಡಿದ್ದಾರೆ.