ಬೆಂಗಳೂರು: ಪ್ರಧಾನಿ ಮೋದಿ ಸರ್ಕಾರದ ಕೊನೆಯ ಬಜೆಟ್ ಇಂದು ಮಂಡನೆಯಾಗಿದ್ದು, ಇಂತಹ ಬಜೆಟ್ ಗೋಸ್ಕರ ಜನ ಎಷ್ಟೋ ವರ್ಷಗಳಿಂದ ಕಾದಿದ್ದರು. ಇದನ್ನು ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಕೊಡಬೇಕೆಂಬ ಉದ್ದೇಶ ಇದ್ದರೂ ಕೂಡ ಈ ಹಿಂದೆ 10 ವರ್ಷಗಳ ಕಾಲ ಯುಪಿಎದವರು ಲೂಟಿ ಹೊಡೆದು ಖಜಾನೆಯನ್ನು ಬರಿದು ಮಾಡಿ ಹೋಗಿದ್ದರಿಂದಾಗಿ ಅದನ್ನು ಸರಿಪಡಿಸಲು 4 ವರ್ಷ ಬೇಕಾಯಿತು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಖಜಾನೆಯನ್ನು ಸರಿಪಡಿಸಿ, ಜಿಎಸ್‍ಟಿ ತಂದು, ನೋಟು ನಿಷೇಧ ಮಾಡಿ, ತೆರಿಗೆಯಲ್ಲಿ ಸುಧಾರಣೆಗಳನ್ನು ತಂದು, ಬ್ಯಾಂಕ್ ಗಳಲ್ಲಿ ಎನ್ ಪಿಎ(ಕಾರ್ಯನಿರ್ವಹಿಸದ) ಮಾಡುತ್ತಿದ್ದರೋ ಅವರನ್ನು ಕೂಡ ಹಿಡಿದುಕೊಂಡು ಬಂದು 3 ಲಕ್ಷ ರೂ. ಕಕ್ಕಿಸಿ, ಇಂದು ದೇಶ ಅರ್ಥ ವ್ಯವಸ್ಥೆಯನ್ನು ಸರಿಸ್ಥಿತಿಗೆ ತಂದು ರೈತರಿಗೆ, ತೆರಿಗೆದಾರರಿಗೆ, ಮಧ್ಯಮವರ್ಗದವರಿಗೆ, ದೀನ ದಲಿತರಿಗೆ ಹೀಗೆ ಎಲ್ಲರಿಗೂ ಕೂಡ ಏಕಕಾಲಕ್ಕೆ ನ್ಯಾಯಕೊಡುವಂತಹ ಬಜೆಟ್ಟನ್ನು ಇಂದು ಮಂಡಿಸಿದ್ದಾರೆ ಅಂದ್ರು.
Advertisement
Advertisement
ಅದರಲ್ಲೂ ವಿಶೇಷವಾಗಿ ಸಣ್ಣ ಹಿಡುವಳಿದಾರರಿಗೆ ಸಾಲಮನ್ನಾ ಮಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರಿದ ಕೆಲಸವನ್ನು ಎಲ್ಲರೂ ಮಾಡಿಕೊಂಡು ಬಂದಿದ್ದರು. ಆದ್ರೆ ಅವರ ಆದಾಯ ಯಾವತ್ತೂ ಸುಸ್ಥಿತಿಯಲ್ಲಿರಬೇಕು ಅನ್ನೋ ದೃಷ್ಟಿಯಲ್ಲಿಟ್ಟುಕೊಂಡು ಒಂದೆಡೆ ಗೊಬ್ಬರ ಬೆಲೆಯಲ್ಲಿ ಕಡಿತಗೊಳಿಸಿರುವ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ತರುವ ಜೊತೆಗೆ 2 ಹೆಕ್ಟೇರ್ ಗಿಂತ ಕಡಿಮೆ ಹಿಡುವಳಿ ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಅವರ ಅಕೌಂಟ್ ಗೆ ನೇರವಾಗಿ ನೀಡುವಂತಹ ಒಂದು ಯೋಜನೆ ತಂದಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ ಎಂದು ಅವರು ಹೇಳಿದ್ರು.
Advertisement
Major allocations proposed under the Union Budget 2019-2020. #Budget2019 #BudgetForNewIndia pic.twitter.com/btCfZ75tHs
— Pratap Simha (@mepratap) February 1, 2019
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv