ಮೈಸೂರು: ನ್ಯಾಯಾಲಯಗಳು ಧರ್ಮಗ್ರಂಥ ಆಧಾರಿತ ಮತಗಳ ಕನ್ನಡಕ ಹಾಕಿಕೊಂಡು ನಂಬಿಕೆ, ವಿಶ್ವಾಸ, ವಿಧಿ-ವಿಧಾನ, ಆಚಾರ-ವಿಚಾರಗಳ ಆಧಾರಿತವಾಗಿರುವಂತಹ ಹಿಂದೂ ಧರ್ಮವನ್ನು ನೋಡಿ ತೀರ್ಪು ಕೊಡಲು ಪ್ರಾರಂಭ ಆಗಿರುವುದರಿಂದ ಈ ಸಮಸ್ಯೆ ಆರಂಭವಾಗಿದೆ ಅಂತ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
Advertisement
ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಮಹಿಳೆಯ ಪ್ರವೇಶ ವಿಚಾರವಾಗಿ ಶಬರಿಮಲದ ನಿಳಕ್ಕಲ್ ಬಳಿ ನಡೆಯುತ್ತಿದ್ದ ಪ್ರತಿಭಟನೆ ಉಗ್ರ ರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬುಕ್ ಬೇಸ್ ಡ್ ರಿಲೀಜನ್ ಗಳಲ್ಲಿ ಅವರು ಒಂದೇ ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಒಂದೇ ಧರ್ಮದ ಗ್ರಂಥದಲ್ಲಿ ಅವರು ನಂಬಿಕೆ ಇಟ್ಟುಕೊಂಡಿದ್ದಾರೆ. ಅವರು ಭಾರತದಲ್ಲಿ ಅಥವಾ ಮೆಕ್ಕಾದಲ್ಲಿದ್ದರೂ ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದ್ರೆ ಹಿಂದೂ ಧರ್ಮ ಹಾಗಲ್ಲ. ಈ ಧರ್ಮಕ್ಕೆ ಯಾರು ಪ್ರವಾದಿ ಇಲ್ಲ. ವಿಶ್ವಾಸ, ಆಚಾರ-ವಿಚಾರ ಪರಂಪರಗತವಾಗಿ ನಡೆದುಕೊಂಡು ಬಂದಂತಹ ಒಂದು ಪದ್ಧತಿಗಳಲ್ಲಿ ಹಿಂದೂ ಧರ್ಮವಿದೆ. ಇದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸುಪ್ರೀಂ ಕೋರ್ಟ್ ಈ ರೀತಿ ತೀರ್ಪು ಕೊಟ್ಟಿರುವುದು ಬಹಳ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಿಂಸಾರೂಪಕ್ಕೆ ತಿರುಗಿದ ಶಬರಿಮಲೆ ಪ್ರತಿಭಟನೆ: ಗುಂಡಾಗಿರಿ ಪ್ರದರ್ಶಿಸಿದ ಪೊಲೀಸರು!
Advertisement
Advertisement
ಕೆಲವೊಂದು ದೇವಸ್ಥಾನದಲ್ಲಿ ಮುಟ್ಟನ್ನು ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ. ಇಂತಹ ಏಕೈಕ ಧರ್ಮ ನಮ್ಮ ಹಿಂದೂ ಧರ್ಮವಾಗಿದೆ. ನವರಾತ್ರಿ ಸಂದರ್ಭದಲ್ಲೂ ದುಡ್ಡಿಗೆ ಲಕ್ಷ್ಮೀ, ವಿದ್ಯೆಗೆ ಸರಸ್ವತಿ, ಶಕ್ತಿಗೆ ದುರ್ಗೆಯನ್ನು ಆರಾಧಿಸುತ್ತೇವೆ. ಬೇರೆ ಯಾವುದೇ ಧರ್ಮದಲ್ಲಿ ಕೂಡ ದೇವರನ್ನು ಸ್ತ್ರೀ ಸ್ವರೂಪಿಯಾಗಿ ಕಾಣುವುದಿಲ್ಲ. ನಮ್ಮ ಧರ್ಮದಲ್ಲಿ ಮಾತ್ರ ಕಾಣುತ್ತೇವೆ. ಈ ಮೂಲಕ ನಮ್ಮ ಧರ್ಮದಲ್ಲಿ ಸ್ತ್ರೀಯರಿಗೆ ಯಾವುದೇ ತಾರತಮ್ಯ ತೋರಿಲ್ಲ. ಸ್ತ್ರೀಯರಿಗೆ ಅತೀ ಹೆಚ್ಚು ಗೌರವ ಕೊಟ್ಟಿದೆ ಅನ್ನೋದು ದ್ಯೋತಕವಾಗಿದೆ. ಕೋರ್ಟ್ ಇದನ್ನು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ಕೊಟ್ಟ ತೀರ್ಪನ್ನು ಮರು ಪರಿಶೀಲಿಸಬೇಕು. ಈ ಮೂಲಕ ನಮ್ಮ ನಂಬಿಕೆಗೆ ಹೊಡೆತ ಕೊಡುವಂತಹ ಪ್ರಯತ್ನವನ್ನು ಯಾರೂ ಮಾಡಬಾರದು. 10 ರಿಂದ 50 ವಯೋಮಾನದ ಮಹಿಳೆಯರು ಶಬರಿಮಲೆಗೆ ಹೋಗುವಂತಹ ಪ್ರಯತ್ನವನ್ನು ಮಾಡಬಾರದು ಅಂತ ಹೇಳಿದ್ರು. ಇದನ್ನೂ ಓದಿ: ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೆ ವಿರೋಧ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ
Advertisement
ನಮ್ಮಲ್ಲಿ ಯಾರು ಹೆಣ್ಣು ಮಕ್ಕಳಿಗೆ ತಾರತಮ್ಯವನ್ನು ಮಾಡುತ್ತಿಲ್ಲ. ಅಯ್ಯಪ್ಪ ಸ್ವಾಮಿ ಒಬ್ಬ ಬ್ರಹ್ಮಚಾರಿ. ಅಯ್ಯಪ್ಪನ ದೇವಾಲಯ ಇಡೀ ಭಾರತದಾದ್ಯಂತ ಇದೆ. ಹೀಗಾಗಿ ಈ ದೇವಾಲಯಕ್ಕೆ ಯಾವಾಗ ಬೇಕಾದರೂ ಮಹಿಳೆಯರು ಹೋಗಬಹುದು. ಅದಕ್ಕೆ ಯಾರೂ ಕೂಡ ನಿಷೇಧ ಹೇರಿಲ್ಲ. ಆದರೆ ಶಬರಿ ಮಲೆಯಲ್ಲಿ ಆತ ತಪಸ್ಸು ಮಾಡುತ್ತಿದ್ದ ಜಾಗ. ಆತ ಬ್ರಹ್ಮಚಾರಿಯಾಗಿರೋದ್ರಿಂದ ಅಲ್ಲಿ ಮಾತ್ರ ಮಹಿಳೆಯರ ಪ್ರವೇಶ ನಿಷೇಧವಾಗಿದೆ. 10 ವರ್ಷ ವಯಸ್ಸಿನೊಳಗಿನವರು ಹಾಗೂ 50 ವರ್ಷ ನಂತರದ ವಯಸ್ಸಿನವರು ಇಲ್ಲಿಗೆ ಪ್ರವೇಶಿಸಲು ಅವಕಾಶವಿದೆ. ನಮ್ಮ ಭಾರತದಲ್ಲಿ ಮಹಿಳೆಯರಲ್ಲಿ ನಾವು ತಾಯ್ತನವನ್ನು ಕಾಣ್ತೀವಿ. ಅದಕ್ಕೋಸ್ಕರ ಅವರಿಗೆ ಅವಕಾಶವಿದೆ. ಆದ್ರೆ ಈ ಮುಟ್ಟಿಗೆ ಇದಕ್ಕೂ ಏನೂ ಸಂಬಂಧವಿಲ್ಲ ಅಂತ ತಿಳಿಸಿದ್ರು.
ನೂರಾರು ವರ್ಷಗಳಿಂದ ನಡೆದುಕೊಂಡು ಬಂಂತಹ ಪದ್ಧತಿ ಇದಾಗಿದ್ದು, ಅದಕ್ಕೆ ತೊಂದರೆ ಕೊಡಲು ಯಾರು ಪ್ರಯತ್ನಿಸಬಾರದು ಅಂತ ಅವರು ಮನವಿಮಾಡಿಕೊಂಡರು. ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕೂಡ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv