ಮೈಸೂರು: ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಗ್ಗೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಕಾಂಗ್ರೆಸ್‍ಗೆ ಏಕೆ ಈ ಮಟ್ಟದ ಉರಿ ಅಂತ ನಮಗೆ ಗೊತ್ತಾಗುತ್ತಿಲ್ಲ. ಮಠಕ್ಕೆ ಹೋದ ಪ್ರಧಾನಿಯನ್ನ ಸಿದ್ದರಾಮಯ್ಯ ಅವರು ಟೀಕಿಸುತ್ತಾರೆ. ಪ್ರಧಾನಿ ವಿಭೂತಿಯನ್ನ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ವ್ಯಂಗ್ಯ ಮಾಡುತ್ತಾರೆ. ಕಾಲಭೈರವೇಶ್ವರ ಜಾಗದಲ್ಲಿ ಡಿಕೆಶಿ ಏಸು ಪ್ರತಿಮೆ ನಿರ್ಮಾಣ ಮಾಡುತ್ತೀನಿ ಅಂತಾರೆ. ಇದನ್ನ ನೋಡಿದರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್‍ಗೆ ಮತ್ಸರ ಉಂಟಾಗಿರಬೇಕು ಎಂದು ಗರಂ ಆದರು. ಇದನ್ನೂ ಓದಿ: ಸಿದ್ದಗಂಗಾ ಪವಿತ್ರ ನೆಲ ನಿಮ್ಮನ್ನು ಕ್ಷಮಿಸದು: ಮೋದಿ ಭಾಷಣಕ್ಕೆ ಸಿದ್ದರಾಮಯ್ಯ ಕಿಡಿ
ಯಾಕಾಗಿ ಇಷ್ಟು ಮತ್ಸರ, ಯಾಕೇ ಇಷ್ಟು ಉರಿ ಎಂದು ವ್ಯಂಗ್ಯದಿಂದ ಪ್ರಶ್ನಿಸಿದರು. ದೇಶದ ಜಲ್ವಂತ ಸಮಸ್ಯೆ ಬಗ್ಗೆ ಭವಿಷ್ಯದ ಪ್ರಜೆಗಳಿಗೆ ಪ್ರಧಾನಿ ತಿಳುವಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿದೆ. ಯಾಕೇ ಇಷ್ಟು ಉರಿದುಕೊಂಡು ಟ್ವೀಟ್ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರಿಗೆ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.