ಮೈಸೂರು: ಶಾಸಕ ರಾಮದಾಸ್ ವರ್ಸಸ್ ಸಂಸದ ಪ್ರತಾಪಸಿಂಹ ಫೈಟ್‍ಗೆ ಕೊನೇ ಕೌನ್ಸಿಲ್ ಸಭೆ ಬಲಿಯಾಗಿದೆ. ಅಲ್ಲದೆ ಮೇಯರ್ ಸುನಂದಾ ಪಾಲನೇತ್ರ ಕಣ್ಣೀರು ಹಾಕಿದ್ದಾರೆ.
ಕೇಂದ್ರ ಸರ್ಕಾರದ ಮನೆಗಳಿಗೆ ನೇರ ಗ್ಯಾಸ್ ಪೈಪ್‍ಲೈನ್ ಮತ್ತು ಕೇಬಲ್ ಅಳವಡಿಕೆಗೆ ಶಾಸಕ ರಾಮದಾಸ್ ವಿರೋಧಿಸಿದ್ದಾರೆ. ಕೆ.ಆರ್. ಕ್ಷೇತ್ರದಲ್ಲಿ ಉತ್ತಮ ರಸ್ತೆ ಮಾಡಿದ್ದೇವೆ. ಈಗ ಅದನ್ನು ಅಗೆದು ಅನಿಲ ಪೈಪ್‍ಲೈನ್ ಹಾಕುವುದು ಬೇಡ. ಜನರ ಹಿತದೃಷ್ಟಿಯಿಂದ ಗ್ಯಾಸ್ ಪೈಪ್‍ಲೈನ್‍ಗೆ ಅನುಮತಿ ಕೊಡಬಾರದು ಅಂತ ಮೈಸೂರು ಪಾಲಿಕೆ ಆಯುಕ್ತರಿಗೆ ರಾಮದಾಸ್ ಪತ್ರ ಬರೆದಿದ್ದರು.
Advertisement
Advertisement
ಇದಕ್ಕೆ ಕೆಂಡಾಮಂಡಲ ಆಗಿರೋ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್-ಜೆಡಿಎಸ್‍ನವರೇ ವಿರೋಧಿಸಿಲ್ಲ. ನಮ್ಮದೇ ಶಾಸಕರು ವಿರೋಧಿಸ್ತಾರೆ. ರಾಮದಾಸ್ ಮೋದಿಗಿಂತ ಸೀನಿಯರ್ರಾ..? ಬುದ್ದಿವಂತರು, ಜ್ಞಾನಿಗಳಾ..? ಬ್ಯಾನರ್‍ನಲ್ಲಿ ಮೋದಿ ಫೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಆಗಲ್ಲ. ಇದ್ಯಾವುದಕ್ಕೂ ನಾನು ಕೇರ್ ಮಾಡಲ್ಲ. ಯೋಜನೆಯನ್ನು ಪೂರ್ತಿ ಮಾಡುತ್ತೇನೆ ಅಂತ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕಾಗೆ ಕಾಟಕ್ಕೆ ಚಿತ್ರದುರ್ಗದ ಓಬಳಾಪುರ ಜನ ಸುಸ್ತು..!
Advertisement
Advertisement
ಅಲ್ಲದೆ ಕೆಲಸ ಕಾರ್ಯ ಬಿಟ್ಟು ಸಭೆಗೆ ಬಂದರೆ ಏಕಾಏಕಿ ಮೀಟಿಂಗ್ ಕ್ಯಾನ್ಸಲ್ ಮಾಡ್ತೀರಾ ಅಂತ ಮೇಯರ್‍ಗೆ ಗದರಿದ್ದಾರೆ. ಇದರಿಂದ ಕಣ್ಣೀರು ಹಾಕಿದ ಮೇಯರ್ ಸುನಂದಾ, ಕಾಂಗ್ರೆಸ್-ಜೆಡಿಎಸ್ ಸದಸ್ಯರು ಗೈರಾದ ಕಾರಣ ಕೋರಂ ಅಭಾವ ಆಗಿ ಸಭೆಯನ್ನು ಮುಂದೂಡಿದೆ. ಸದಸ್ಯರನ್ನು ಕೌನ್ಸಿಲ್‍ಗೆ ಬರಬೇಡಿ ಎಂದು ಯಾರು ಹೇಳಿದ್ದಾರೋ ಗೊತ್ತಿಲ್ಲ. ಇದು ನನಗೆ ಮಾಡಿದ ಅಪಮಾನವಲ್ಲ, ಮೇಯರ್ ಹುದ್ದೆಗೆ ಅಪಮಾನ ಅಂತ ಹೇಳಿದ್ದಾರೆ. ಇದನ್ನೂ ಓದಿ: ಲಂಚ ಕೊಡೋಕೆ ಹಣ ಇರ್ಲಿಲ್ಲ – ಅಮ್ಮನ ಹೊಟ್ಟೆಯಲ್ಲೇ ಮಗು ಸತ್ತೋಯ್ತು..!