ಮೈಸೂರು: ಉಡುಪಿಯ ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿರುವ ನಾದ ಬ್ರಹ್ಮ ಹಂಸಲೇಖ ವಿರುದ್ಧ ಇದೀಗ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪೇಜಾವರ ಶ್ರೀಗಳು ಮಾಂಸ ತಿನ್ನುತ್ತಿದ್ರಾ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜನಾಭಿಪ್ರಾಯದ ವಿರುದ್ಧ ಮಾತಾನಾಡಿ ನಂತರ ಕ್ಷಮೆಯಾಚಿಸುವ ಛಾಳಿ ಹೆಚ್ಚಾಗಿದೆ. ಹಂಸಲೇಖ ಅವರು ಪರಿಜ್ಞಾನದಿಂದ ಪೇಜಾವರರ ಶ್ರೀಗಳ ಬಗ್ಗೆ ಮಾತಾಡಬೇಕಿತ್ತು. ಪೇಜಾವರ ಶ್ರೀಗಳು ಬೇರೆ ರೀತಿಯ ಸ್ವಾಮೀಜಿಗಳಂತಲ್ಲ. ಕರ್ಮಠ ವ್ಯವಸ್ಥೆಯನ್ನು ಮೀರಿ ಸಮಾನತೆ ಸಾರಿದವರು ಪೇಜಾವರ ಶ್ರೀ ಎಂದರು.
Advertisement
Advertisement
ಸಾಧು ಸಂತರ ಆಹಾರ ಪದ್ಧತಿ ಸಸ್ಯಹಾರ. ಮನಸ್ಸಿನ ತಾರತಮ್ಯ ತೆಗೆದು ಹಾಕಲು ಶ್ರೀಗಳು ಹೋಗಿದ್ದರೇ ಹೊರತು ಆಹಾರ ಪದ್ಧತಿಯ ಸಮಾನತೆಗೆ ಅಲ್ಲ. ನಿಮ್ಮ ಮನೆಗೆ ಮುಸ್ಲಿಂ ಸ್ನೇಹಿತರನ್ನು ಕರೆಯಿರಿ. ಅವರಿಗೆ ಹಂದಿ ಮಾಂಸದ ಊಟ ಹಾಕಿ. ಅವರು ತಿನ್ನುತ್ತಾರಾ ನೋಡಿ. ಮುಸ್ಲಿಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದು ನಿಷೇಧ. ಅದಕ್ಕೆ ಅವರು ತಿನ್ನುವುದಿಲ್ಲ. ಆಗ ಅದನ್ನು ತಪ್ಪು ಎನ್ನುತ್ತೀರಾ ಎಂದು ಸಂಸದರು ಪ್ರಶ್ನಿಸಿದರು. ಇದನ್ನೂ ಓದಿ: ಗುರುಗಳ ಮೇಲಿನ ಅಭಿಮಾನದಿಂದ ಯಾರಾದ್ರೂ ಪ್ರತಿಭಟಿಸಿದ್ರೆ ಅದು ಅವರ ವೈಯಕ್ತಿಕ ವಿಚಾರ: ಪೇಜಾವರಶ್ರೀ
Advertisement
Advertisement
ಪ್ರಗತಿಪರ ಅನ್ನಿಸಿಕೊಳ್ಳುವ ಗೀಳಿಗೆ ಬಿದ್ದು, ಪ್ರಚಾರಕ್ಕಾಗಿ ಹೀಗೆ ಮಾತಾಡುತ್ತಿದ್ದಾರೆ. ಹಂಸಲೇಖ ಅವರು ಬಾಯಿ ತಪ್ಪಿನಿಂದ ಈ ರೀತಿ ಹೇಳಿದ್ದಾರೆ ಎಂದು ಅನ್ನಿಸುವುದಿಲ್ಲ. ಪ್ರಚಾರದ ಗೀಳಿಗೆ ಬಿದ್ದಾಗ ಅಸಂಬದ್ಧ ಮಾತು ಬರುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ
ಹಂಸಲೇಖ ಹೇಳಿದ್ದೇನು..?
ಮೈಸೂರಿನ ಮಾನಸಗಂಗೋತ್ರಿಯಲ್ಲಿಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭವೊಂದರ ಕಾರ್ಯಕ್ರಮದಲ್ಲಿ ಮಾತಾಡಿದ್ದ ಹಂಸಲೇಖ, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ ಎಂದು ಹೇಳಿದ್ದರು.