ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಸೇರಿದಂತೆ ಹಲವು ಗಣ್ಯರು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ (R Dhruvanarayana) ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಧ್ರುವನಾರಾಯಣ್ ಅವರನ್ನ ನೆನೆದು ಭಾವುಕರಾದರು. ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣೀರಿಟ್ಟರು. ಇದನ್ನೂ ಓದಿ: ಮಹಿಳೆಯರ ಮನ ಗೆಲ್ಲಲು ಹೊರಟ ಬಿಜೆಪಿ – ಕಮಲ್ ಮಿತ್ರ ಹೆಸರಿನಲ್ಲಿ ಹೊಸ ಅಭಿಯಾನ
Advertisement
Advertisement
`ಧ್ರುವನಾರಾಯಣ್ ಸಾಹೇಬ್ರ ನಿಧನ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯಿತು. ಪಕ್ಷ, ರಾಜಕಾರಣ ಬೇರೆ ಇರಬಹುದು. ಆದರೆ ಅವರ ವ್ಯಕ್ತಿತ್ವ ಎಲ್ಲರ ಮನಸ್ಸನ್ನು ಗೆಲ್ಲುವಂತಹದ್ದು. ನಾನು ಮೊದಲ ಬಾರಿ ಸಂಸದನಾಗಿ ಆಯ್ಕೆಯಾದಾಗ ಅನುಭವವಿರಲಿಲ್ಲ. ಹೇಗೆ ಸಭೆ ಮಾಡಬೇಕು? ದಿಶಾ (DISHA) ಮೀಟಿಂಗ್, ಫೈಲ್ ಫಾಲೋ ಅಪ್ ಹೇಗೆ ಮಾಡಬೇಕು? ಯೋಜನೆಗಳನ್ನ ಯಾವ ರೀತಿ ತರಬೇಕೆಂದು ನನಗೆ ಮಾರ್ಗದರ್ಶನ ನೀಡಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: Infosys ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ
Advertisement
Advertisement
ಇತ್ತೀಚೆಗೆ ಸಿಕ್ಕಾಗ ಪ್ರತಾಪ್ ಒಳ್ಳೆಯ ಕೆಲಸ ಮಾಡ್ತಿದ್ದೀಯಾ ಎಂದು ಬೆನ್ನು ತಟ್ಟಿದ್ದರು. ಚಾಮರಾಜನಗರದಂತಹ ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಧ್ರುವನಾರಾಯಣ್ ಅವರ ಕೊಡುಗೆ ಅಪಾರವಾಗಿದೆ. ಗುಂಡ್ಲುಪೇಟೆ-ಕೇರಳಕ್ಕೆ ಹೋಗುವ ರಸ್ತೆ ಧ್ರುವನಾರಾಯಣ್ ಅವರ ಕೊಡುಗೆ. ಅವರು ಸದಾ ಜನರ ಬಗ್ಗೆಯೇ ಯೋಚಿಸುತ್ತಿದ್ದರು. ಈ ದುರಂತ ಅಂತ್ಯ ತುಂಬಲಾರದ ನಷ್ಟ. ನಾವು ಒಳ್ಳೆಯ ವ್ಯಕ್ತಿಯನ್ನ ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದರು.