ಮಂಡ್ಯ: ಜೆಡಿಎಸ್ ಪಕ್ಷವನ್ನು ನಂಬಿದ ಜನರಿಗೆ ಒಳ್ಳೆಯದಾಗಿಲ್ಲ. ಅಂತಹದರಲ್ಲಿ ಸ್ಥಾನಮಾನ ನಂಬಿ ಬಂದ ನಾಯಕರಿಗೆ ಒಳ್ಳೆಯದಾಗುತ್ತಾ ಎಂದು ಲಕ್ಷ್ಮೀ ಅಶ್ವಿನ್‍ಗೌಡ ಅವರಿಗೆ ಜೆಡಿಎಸ್ ಟಿಕೆಟ್ ಕೈತಪ್ಪಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ ಸಿದ್ದರಾಮಯ್ಯ ಅವರು ಬಿಜೆಪಿಗೆ ವಿದ್ಯುಕ್ತವಾಗಿ ಸೇರ್ಪಡೆಯಾಗಿ ಮೂರು ದಿನವಾಗಿರಬಹುದು. ಆದರೆ ಅವರು ವಿದ್ಯಾರ್ಥಿ ದೆಸೆಯಲ್ಲಿ ಎಬಿವಿಪಿಯ ಒಬ್ಬ ಸಕ್ರಿಯ ಕಾರ್ಯಕರ್ತರಾಗಿ ಕೆಲಸವನ್ನು ಮಾಡುತ್ತಿದ್ದರು. ಅವರ ತಂದೆ ಅವರು ಕೂಡ 1994 ರಲ್ಲಿ ಇದೇ ಮಂಡ್ಯದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಹಾಗಾಗಿ ಅವರು ನಮಗೆ ಹೊಸಬರಲ್ಲ. ಜೆಡಿಎಸ್ ಪಕ್ಷ ಇದುವರೆಗೂ ಜನರಿಗೆ ನ್ಯಾಯ ಕೊಟ್ಟಿಲ್ಲ. ವಾಜಪೇಯಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಡಬ್ಲಿಂಗ್ ಆಗಿತ್ತು. ಇದೀಗ 10 ಲೇನ್ ರಸ್ತೆಯಾಗುತ್ತಿದೆ ಎಂದು ಮೋದಿ ಸರ್ಕಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
Advertisement
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದು ಖಚಿತ, ಯಡಿಯೂರಪ್ಪ ಸೇರಿದಂತೆ ರಾಷ್ಟ್ರದ ನಾಯಕರು ಮಂಡ್ಯಕ್ಕೆ ಬಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಈ ಬಾರಿ ಕಂಡಿತ ಮಂಡ್ಯದಲ್ಲಿ ಕಮಲ ಅರಳಲಿದೆ ಎಂದು ಪ್ರತಾಪ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv