ನಾನು ಸಂಸದ ಹೇಗೋ, ಹಾಗೇ ಮಗಳಿಗೆ ತಂದೆಯೂ ಹೌದು: ಪ್ರತಾಪ್ ಸಿಂಹ

Public TV
1 Min Read
MYS PRATAP SIMHA

-ಟಿಪ್ಪು ಪ್ರತಿಭಟನೆಯಿಂದ ದೂರ ಉಳಿದಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟ ಸಂಸದ

ಮೈಸೂರು: ನಾನು ಸಂಸದ ಹೇಗೋ ಹಾಗೆಯೇ ಒಬ್ಬ ಮಗಳಿಗೆ ತಂದೆ. ಹೀಗಾಗಿ ಮಗಳ ಆಸೆಯನ್ನು ಈಡೇರಿಸಲು ಟಿಪ್ಪು ಜಯಂತಿ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲವೆಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಗಳು ದೀಪಾವಳಿ ರಜೆಗೆ ಅಜ್ಜಿ ಮನೆಗೆ ಹೋಗಬೇಕು ಅಂತಾ ಆಸೆ ಪಟ್ಟಿದ್ದಳು. ಹೀಗಾಗಿ ಪತ್ನಿ – ಮಗಳನ್ನು ಕರೆದು ಕೊಂಡು ಊರಿಗೆ ಹೋಗಿದ್ದೆ. ಇದರಿಂದಾಗಿ ಟಿಪ್ಪು ಜಯಂತಿ ವಿರೋಧ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಲಿಲ್ಲ. ನಾನು ಮೈಸೂರಿನ ಸಂಸದ ಹೇಗೋ ಹಾಗೇ ನಾನು ನನ್ನ ಪತ್ನಿಗೆ ಪತಿ. ಮಗಳಿಗೆ ಅಪ್ಪ ಕೂಡ. ಅವರ ಆಸೆ ಈಡೇರಿಸೋ ಜವಾಬ್ದಾರಿ ನನಗೆ ಇದೆ ಎಂದರು.

BJP TIPPU

ಬಿಜೆಪಿ ಸಂಘಟನೆ ಜೊತೆ ಉಂಟಾಗಿದ್ದೆ ಎನ್ನಲಾಗುತ್ತಿದ್ದ ಅಸಮಾಧಾನದ ಬಗ್ಗೆ ಪ್ರಶ್ನೆಗೆ ನಾನು ಬಿಜೆಪಿ ಸಂಘಟನೆಯ ಒಂದು ಭಾಗ. ಸಂಘಟನೆ ಜೊತೆ ನನಗೆ ಯಾವ ಸಮಸ್ಯೆ ಇಲ್ಲ. ನಾನು ಟಿಪಿಕಲ್ ರಾಜಕಾರಣಿ ಅಲ್ಲ. ಹಾಗೇ ಕುರ್ಚಿಗೆ ಅಂಟಿಕೊಂಡ ರಾಜಕಾರಣಿಯೂ ಅಲ್ಲ. ಬಿಜೆಪಿ ಟಿಕೆಟ್ ಸಿಕ್ಕ ಮೇಲೆ ನಾನು ಬಿಜೆಪಿ ಸೇರಿದ್ದು, ಅದು ನನ್ನ ವೈಯಕ್ತಿಕ ಶಕ್ತಿ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಜಯಂತಿ ವಿಚಾರ ನನಗೆ ರಾಜಕೀಯ ವಸ್ತುವಲ್ಲ. ಅದು ಸೈದ್ಧಾಂತಿಕ ಹೋರಾಟದ ವಿಚಾರ. ಇದರ ನಿಲುವಿನಲ್ಲಿ ಯಾವ ಬದಲಾವಣೆಗಳು ಯಾವತ್ತಿಗೂ ಆಗಲ್ಲ. ದಸರಾ ಸಂದರ್ಭದಲ್ಲಿ ನಾನು ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಬಳಿ ಮಾತನಾಡಿದ್ದೇ, ಅಲ್ಲದೇ ಸಿಎಂ ಹಾಗೂ ಡಿಸಿಎಂ ಪರಮೇಶ್ವರ್ ಟಿಪ್ಪು ಜಯಂತಿಯ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ಹೇಳಿದರು.

HDK DCM

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *