ವೇದಿಕೆಯಲ್ಲೇ ಹಾಲಿ Vs ಮಾಜಿ ಸಂಸದರ ಮುನಿಸು ಬಹಿರಂಗ!

Public TV
1 Min Read
MYS PRATAP SIMHA VIJAYSHANKAR

ಮೈಸೂರು: ಹಾಲಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಇಬ್ಬರೂ ಅಕ್ಕ-ಪಕ್ಕದಲ್ಲಿಯೇ ಕುಳಿತಿದಿದ್ದರೂ ಒಬ್ಬರಿಗೊಬ್ಬರು ಮಾತನಾಡಿಸದೇ ತಮ್ಮ ಮುನಿಸನ್ನು ವೇದಿಕೆಯಲ್ಲೇ ಬಹಿರಂಗಪಡಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಗೆ ನಗರದಲ್ಲಿ ಗೌರವ ಸಮರ್ಪಣೆ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಮೈಸೂರು ಹಾಲಿ ಸಂಸದ ಪ್ರತಾಪ್ ಸಿಂಹ ಹಾಗೂ ಪ್ರಮುಖ ವ್ಯಕ್ತಿಗಳು ಆಗಮಿಸಿದ್ದರು.vlcsnap 2018 11 02 13h53m31s954

ಇದೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಪ್ರತಾಪ್ ಸಿಂಹ ಅವರ ಅಕ್ಕ-ಪಕ್ಕದಲ್ಲಿಯೇ ಕುಳಿತುಕೊಂಡಿದ್ದರು. ಆದರೆ ಇಬ್ಬರೂ ಸಹ ಒಬ್ಬರ ಮುಖ ಮತ್ತೊಬ್ಬರು ನೋಡಲಿಲ್ಲ. ಪ್ರತಾಪ ಸಿಂಹ ಶಾಸಕ ನಾಗೇಂದ್ರ ಜೊತೆ ಮಾತನಾಡಿದರೂ, ಪಕ್ಕದಲ್ಲೇ ಇದ್ದ ತನ್ನ ಹಳೆಯ ಸ್ನೇಹಿತ ವಿಜಯಶಂಕರ್ ಕಡೆಗೆ ನೋಡಲಿಲ್ಲ.

ಈ ವೇಳೆ ಸಾ.ರಾ.ಮಹೇಶ್ ಆಗಮಿಸುತ್ತಿದ್ದಂತೆ ಶಾಸಕ ನಾಗೇಂದ್ರ ಬೇರೆ ಕುರ್ಚಿಗೆ ತೆರಳಿದರೆ, ಇತ್ತ ಪ್ರತಾಪ್ ಸಿಂಹ ಕೂಡ ಮತ್ತೊಂದು ಖುರ್ಚಿಯಲ್ಲಿ ಆಸೀನರಾದರು. ಮಹೇಶ್ ಆಸೀನರದ ಎಡ ಹಾಗೂ ಬಲದಲ್ಲಿ ಹಾಲಿ ಹಾಗೂ ಮಾಜಿ ಸಂಸದರು ಕುಳಿತು ತಮ್ಮ ಮುನಿಸನ್ನು ಬಹಿರಂಗ ವೇದಿಕೆಯಯಲ್ಲೇ ಪ್ರದರ್ಶಿಸಿದರು.

vlcsnap 2018 11 02 13h56m03s051

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *