ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ವಿಶೇಷ ತನಿಖಾ ತಂಡ (SIT) ಅರೆಸ್ಟ್ ವಾರೆಂಟ್ ಅನ್ನು ಪಡೆದಿದ್ದಾಗಿದೆ. ಈಗ ಎಸ್‍ಐಟಿ ಮುಂದೆ ಇರೋದು ಪಾಸ್‍ಪೋರ್ಟ್ ರದ್ದು ಮಾಡೋದು.
ಹೌದು, ಈಗಾಗಲೇ ಎಸ್‍ಐಟಿ ಪಾಸ್‍ಪೋರ್ಟ್ ರದ್ದಿಗೆ ಕೇಂದ್ರ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದೆ. ತತಕ್ಷಣವೇ ಪ್ರಜ್ವಲ್ ಹೊಂದಿರೋ ರಾಜತಾಂತ್ರಿಕ ಪಾಸ್‍ಪೋರ್ಟ್ ರದ್ದು ಮಾಡುವಂತೆ ಮನವಿ ಮಾಡಿದೆ.
Advertisement
Advertisement
ಸೋಮವಾರ ಇಡೀ ದಿನ ಕಾನೂನು ತಜ್ಞರ ಜೊತೆಯಲ್ಲಿ ಚರ್ಚೆ ನಡೆಸಿದ ಎಸ್‍ಐಟಿ ಅಧಿಕಾರಿಗಳು ರಾಜತಾಂತ್ರಿಕ ಪಾಸ್‍ಪೋರ್ಟ್ ಅನ್ನು ಹೇಗೆ ರದ್ದು ಮಾಡೋದಕ್ಕೆ ಪತ್ರ ಬರೆಯಬೇಕೆಂದು ಚರ್ಚೆ ನಡೆಸಿದ್ರು. ಬಳಿಕ ಪ್ರಜ್ವಲ್ ವಿರುದ್ಧ ಹೊರಡಿಸಿರೋ ಕೋರ್ಟ್ ಹೊರಡಿಸಿರೋ ಆದೇಶದ ಮಾಹಿತಿ ಲುಕೌಟ್ ನೋಟಿಸ್, ಬ್ಲೂಕಾರ್ನರ್ ನೋಟಿಸ್ ಜೊತೆಯಲ್ಲಿ ಪ್ರಜ್ವಲ್ ವಿರುದ್ಧ ದಾಖಲಾಗಿರೋ ದೂರು ಎಲ್ಲ ಮಾಹಿತಿಯನ್ನು ಲಗತ್ತಿಸಿದೆ.
Advertisement
ನಿನ್ನೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಹೆಚ್‍ಡಿಕೆ ಮುಂದಿನ 48 ಗಂಟೆಯಲ್ಲಿ ವಾಪಸ್ ಆಗುವಂತೆ ಮನವಿ ಮಾಡಿಕೊಂಡಿದ್ದರು. ಸದ್ಯ ಎಸ್‍ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್‍ಗಾಗಿ ಕಾದು ಕುಳಿತಿದ್ದಾರೆ. ಈ ಮೂಲಕ ಪ್ರಜ್ವಲ್ ವಾಪಸ್ಸಾದ್ರೆ ಏರ್‌ಪೋರ್ಟ್‌ನಲ್ಲೇ ಬಂಧಿಸಲು ಸಿದ್ಧತೆ ಬಡೆಸಲಾಗಿದೆ.