– ನಕಲಿ ದಾಖಲೆ ಸೃಷ್ಟಿಸಿ ವಿವಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ ಪರಮಾಪ್ತರು
ಬೆಂಗಳೂರು: ಬೀದರ್ ನಲ್ಲಿರುವ ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸಂಸದ ಪ್ರಹ್ಲಾದ್ ಜೋಶಿಯವರ ಪರಮಾಪ್ತರು ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದುಕೊಂಡಿದ್ದ ವಿಷಯ ಈಗ ಬಯಲಾಗಿದೆ.
ಧಾರವಾಡದ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿರುವ ಈರೇಶ್ ಅಂಚಟಗೇರಿ ಹಾಗೂ ಟಿ ಮುಕುಂದ ವರ್ಮ ಸುಳ್ಳು ಪ್ರಮಾಣ ಪತ್ರ ಕೊಟ್ಟು ವಿವಿಯಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಇವರಿಬ್ಬರೂ ಸಹ ಪ್ರಹ್ಲಾದ್ ಜೋಷಿಯವರ ಬಲಗೈ ಬಂಟರಾಗಿದ್ದಾರೆ.
Advertisement
Advertisement
ವಿವಿಯಲ್ಲಿ ಪ್ರಗತಿಪರ ಮೀನುಗಾರರು, ರೈತರು ಹಾಗೂ ಶಿಕ್ಷಣ ತಜ್ಞರು ಸದಸ್ಯರಾಗಲು ಅವಕಾಶ ಇದೆ. ಆದರೆ ಇಬ್ಬರೂ ಒಂದು ಬಾರಿ ಪ್ರಗತಿಪರ ರೈತ ಹಾಗೂ ಇನ್ನೊಂದು ಬಾರಿ ಶಿಕ್ಷಣ ತಜ್ಞ ಎಂದು ಹೇಳಿ ಎರಡು ಬಾರಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ಪ್ರಹ್ಲಾದ್ ಜೋಷಿಯವರ ಪ್ರಭಾವದ ಮೂಲಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ರಾಜ್ಯಪಾಲರೂ ಅಂಕಿತ ಹಾಕಿದ್ದರೆನ್ನುವ ಆರೋಪವು ಕೇಳಿ ಬರುತ್ತಿದೆ.
Advertisement
ವಿವಿ ನಿಯಮಗಳ ಪ್ರಕಾರ ಒಂದು ಬಾರಿ ಮಾತ್ರ ಬೋರ್ಡ್ ಮೆಂಬರ್ ಆಗಿ ಆಯ್ಕೆಯಾಗಬಹುದು. ಆದರೆ ಜೋಷಿ ಆಪ್ತರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ವಿವಿಯ ಬೋರ್ಡ್ ಸದಸ್ಯ ಸ್ಥಾನಗಳು ಕೇವಲ ಪ್ರಗತಿಪರ ರೈತರು, ಮೀನುಗಾರರು ಹಾಗೂ ಶಿಕ್ಷಣ ತಜ್ಞರಿಗೆ ಮೀಸಲಿದೆ. ಆದರೆ ಇವರಿಬ್ಬರೂ ರಾಜಕೀಯ ಪ್ರಭಾರ ಬೀರಿ ತಮ್ಮ ವಶ ಮಾಡಿಕೊಂಡಿದ್ದಾರೆ. ಸದ್ಯ ಜೋಷಿ ಆಪ್ತರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ವಿವಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎಸ್.ಈಶ್ವರಪ್ಪ, ಅರ್ಹರಿಗೆ ಸಿಗಬೇಕಾದ ಹುದ್ದೆಗಳು ಪುಡಾರಿಗಳು, ರಾಜಕೀಯ ಪ್ರಭಾವಿಗಳಿಗೆ ಸಿಗುತ್ತಿವೆ. ರಾಜಕೀಯ ಪ್ರಭಾವ ಬೀರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡೆರಡು ಬಾರಿ ಸದಸ್ಯರಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv