ಬೆಂಗಳೂರು: ಮುಖ್ಯಮಂತ್ರಿಗಳೇ ಪಿಯುಸಿ ಫಲಿತಾಂಶವನ್ನು ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ. ಈಗ ನೀವು ಕ್ಷಮೆ ಕೇಳುವ ಸಮಯ ಬಂದಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಉಡುಪಿ ಶೇ.92.20, ದಕ್ಷಿಣ ಕನ್ನಡ ಶೇ.90.91, ಕೊಡಗು ಶೇ.83.31 ಫಲಿತಾಂಶ ದಾಖಲಿಸುವ ಮೂಲಕ ಅನುಕ್ರಮವಾಗಿ ಮೊದಲ ಮೂರು ಸ್ಥಾನವನ್ನು ಪಡೆದುಕೊಂಡಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಕಟೀಲ್ ಅವರು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪಿಯು ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ
Advertisement
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದ ಉಡುಪಿ – ದಕ್ಷಿಣ ಕನ್ನಡ
ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ
ಮುಖ್ಯಮಂತ್ರಿಯವರೇ..
ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ..
ಕ್ಷಮೆ ಕೇಳುವ ಸಮಯ ..
— Nalinkumar Kateel (@nalinkateel) April 15, 2019
Advertisement
ಟ್ವೀಟ್ ನಲ್ಲೇನಿದೆ?
ಉಡುಪಿ – ದಕ್ಷಿಣ ಕನ್ನಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮುಖ್ಯಮಂತ್ರಿಯವರೇ.. ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ. ಈಗ ನೀವು ಕ್ಷಮೆ ಕೇಳುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಸಿಎಂ ಹೇಳಿದ್ದೇನು?
ಸಿಎಂ ಕುಮಾರಸ್ವಾಮಿ ಅವರು, ಉಡುಪಿ, ಕಾರ್ಕಳ ಕಾಪು ಸೇರಿದಂತೆ ಕರಾವಳಿ ಭಾಗದ ಜನರಿಗೆ ತಿಳುವಳಿಕೆ ಇಲ್ಲ. ಅಲ್ಲಿಯ ಜನ ಬಿಜೆಪಿಗೆ ಮಾತ್ರ ವೋಟ್ ಹಾಕ್ತಾರೆ. ಬಿಜೆಪಿಯನ್ನು ಗೆಲ್ಲಿಸುವ ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದ ಜನರಿಗೆ ಶಾಲೆ ಕಾಲೇಜು ಕಟ್ಟಿಸಿಕೊಡಲು ಕುಮಾರಸ್ವಾಮಿ, ರೇವಣ್ಣನೇ ಬೇಕು ಎಂದು ಕಿಚಾಯಿಸಿದ್ದರು.
Advertisement
ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ದೇಶ-ವಿದೇಶಗಳಿಂದ ಈ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು.