– ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ಘಟನೆ ಖಂಡನೀಯ
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ (Muniratna) ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣವನ್ನು ಸಂಸದ ಡಾ. ಸಿ.ಎನ್.ಮಂಜುನಾಥ್ (C.N.Manjunath) ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಮುನಿರತ್ನ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಅವರು, ಇದ್ದಕ್ಕಿದ್ದಂತೆ ನನ್ನ ತಲೆ ಮೇಲೆ ಜೋರಾದ ಪೆಟ್ಟು ಬಿತ್ತು. ತಲೆಯಲ್ಲಿ ಉರಿ ಆಯ್ತು, ಕೂದಲು ಕೂಡ ಕಿತ್ತು ಬಂತು. ತಲೆ ಸುತ್ತು ಮತ್ತು ವಾಂತಿ ಬಂದಂತೆ ಆಗ್ತಿದೆ ಎಂದು ಶಾಸಕ ಮುನಿರತ್ನ ಅವರು ಹೇಳಿದ್ದಾರೆಂದು ತಿಳಿಸಿದರು. ಇದನ್ನೂ ಓದಿ: ಗೂಂಡಾಗಳಿಂದ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ: ಮುನಿರತ್ನಗೆ ಡಿಕೆಸು ತಿರುಗೇಟು
ಯಾವಾಗ್ಲು ಅಷ್ಟೆ, ತಲೆಗೆ ಪೆಟ್ಟು ಬಿದ್ದಂತಹ ಸಂದರ್ಭದಲ್ಲಿ ವಾಂತಿ ಬಂದಂತಾದರೆ ಸಿ.ಟಿ ಸ್ಕ್ಯಾನ್ ಮಾಡಿಸಬೇಕಾಗುತ್ತದೆ. ಅಕಸ್ಮಾತ್ ಮಿದುಳು ಒಳಗಡೆ ಏನಾದರು ತೊಂದರೆ ಆಗಿದ್ಯಾ ಅನ್ನೋದನ್ನು ತಿಳಿದುಕೊಳ್ಳಬೇಕಾಗುತ್ತದೆ. ವೈದ್ಯರ ಜೊತೆ ಮಾತನಾಡಿದ್ದೇನೆ. ಅವರು ವೈದ್ಯಕೀಯ ಪರೀಕ್ಷೆ ಮಾಡ್ತಾರೆ. ತಲೆಗೆ ಪೆಟ್ಟು ಬಿದ್ದ ಜಾಗದಲ್ಲಿ ಸ್ವಲ್ಪ ಕೂದಲು ಬರ್ನಿಂಗ್ ಆಗಿದೆ ಎಂದು ತಿಳಿಸಿದರು.
ತಾವು ಸಂಸದರಾದ ಮೇಲೆ ಮುನಿರತ್ನ ಅವರು ಟಾರ್ಗೆಟ್ ಆಗ್ತಿದ್ದಾರೆ ಎನಿಸುತ್ತಾ ಎಂಬ ಪ್ರಶ್ನೆ ಕುರಿತು ಮಾತನಾಡಿ, ಕಳೆದ 6 ತಿಂಗಳಿಂದ ಆಗುತ್ತಿರುವ ಘಟನೆಗಳನ್ನು ಗಮನಿಸಿದರೆ ನನಗೂ ಹಾಗೆ ಅನಿಸುತ್ತಿದೆ ಎಂದರು. ಇದನ್ನೂ ಓದಿ: ಕುಸುಮಾರನ್ನು ಶಾಸಕಿಯನ್ನಾಗಿ ಮಾಡಲು ನನ್ನ ಕೊಲೆಗೆ ಸಂಚು, ಆಸೀಡ್ ದಾಳಿ : ಮುನಿರತ್ನ
ಈ ರೀತಿಯ ವ್ಯವಸ್ಥೆ ಆಗಬಾರದು. ಈ ಬಾರಿ 75ನೇ ವರ್ಷದ ಸಂವಿಧಾನ ದಿನಾಚರಣೆ ಮಾಡಿದ್ದೇವೆ. ಸಂವಿಧಾನಕ್ಕೆ ನಾವು ಬೆಲೆ ಕೊಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಚುನಾವಣೆಯಲ್ಲಿ ಒಬ್ಬರು ಗೆಲ್ಲೋದು ಅಥವಾ ಸೋಲುವುದು ಸ್ವಾಭಾವಿಕ. ಆದರೆ, ನಿರಂತರವಾಗಿ ಹೀಗೆ ಮಾಡುವುದು ಖಂಡನೀಯ ಎಂದು ಮುನಿರತ್ನ ಅವರ ಮೇಲಿನ ದಾಳಿಗೆ ಅಸಮಾಧಾನ ವ್ಯಕ್ತಪಡಿಸಿದರು.