ಚಿಕ್ಕಮಗಳೂರು: ಸ್ವಾತಂತ್ರ್ಯ ಬಂದಾಗಿನಿಂದ ಬಸ್ಸನ್ನು ಕಾಣದ ಕುಗ್ರಾಮವು 75ನೇ ಸ್ವಾಂತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಬಸ್ಸನ್ನು ಕಂಡಿದ್ದು, ಶಾಸಕ ಎಂ.ಪಿ. ಕುಮಾರಸ್ವಾಮಿ ಚಾಲನೆ ನೀಡಿದರು.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಹೆಗ್ಗುಡ್ಲು, ಮತ್ತಿಕಟ್ಟೆ, ದೊಡ್ಡನಂದಿ ಸೇರಿದಂತೆ ನಾಲ್ಕೈದು ಗ್ರಾಮಗಳಿಗೆ ಬಸ್ ಸೌಲಭ್ಯವೇ ಇರಲಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಆಧುನಿಕತೆ ಇಷ್ಟೆಲ್ಲಾ ಮುಂದುವರಿದರೂ, ಸರ್ಕಾರ ಲಕ್ಷ, ಕೋಟಿಗಟ್ಟಲೇ ಬಜೆಟ್ ಮಂಡಿಸಿದರೂ ಈ ಹಳ್ಳಿಗಳು ಬಸ್‍ನ್ನೇ ನೋಡಿರಲಿಲ್ಲ.
Advertisement
Advertisement
ಈ ಭಾಗದಲ್ಲಿ ಸುಮಾರು 250ಕ್ಕೂ ಹೆಚ್ಚು ಕುಟುಂಗಳು ವಾಸಿಸುತ್ತಿದ್ದಾರೆ. ಬಹುತೇಕ ಬಡಕುಟುಂಬಗಳಾಗಿವೆ. ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡು ಬದುಕು ದೂಡುತ್ತಿರುವ ಕುಟುಂಬಗಳೇ ಹೆಚ್ಚು. ಇಲ್ಲಿನ ಜನ ಬಣಕಲ್ ಹೋಬಳಿಗೆ ಬರಲು ಸುಮಾರು 5-7 ಕಿ.ಮೀ. ನಡೆದೇ ಬರಬೇಕಿತ್ತು. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಕೂಡ 5-7 ಕಿ.ಮೀ. ನಡೆದೇ ಬರಬೇಕಿತ್ತು. ಇದೀಗ ಸ್ಥಳೀಯರ ದಶಕಗಳ ಮನವಿ ಮೇರೆಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಈ ಗ್ರಾಮಗಳಿಗೆ ಬಸ್ಸನ ಅನುಕೂಲ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ 4 ದಿನ ಆರೆಂಜ್ ಅಲರ್ಟ್ – ಹೊಸಕೋಟೆ, ಸಂಪಾಜೆಯಲ್ಲಿ ಭಾರೀ ಮಳೆ
Advertisement
ದಿನಕ್ಕೆ ಎರಡು ಬಾರಿ ಓಡಾಡುವ ಬಸ್ಸು ಬೆಳಗ್ಗೆ-ಸಂಜೆ ಈ ಹಳ್ಳಿಗಳಿಗೆ ಹೋಗಿ ಬರಲಿದೆ. ಈ ಬಸ್ ಸ್ಥಳೀಯರೊಂದೇ ಅಲ್ಲದೇ ಹೆಚ್ಚಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ. ಈ ಹಳ್ಳಿಗಳಿಗೆ ರಸ್ತೆ ಕೂಡ ಸರಿ ಇರಲಿಲ್ಲ. ಇದೀಗ ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಕೂಡ ನಿರ್ಮಾಣವಾಗಿ, ಹಳ್ಳಿಗಳಿಗೆ ಬಸ್ ಸೌಲಭ್ಯ ಸಿಕ್ಕಿರುವುದರಿಂದ ಹಳ್ಳಿಗರು ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಆ.4ರವರೆಗೆ ಇಡಿ ವಶಕ್ಕೆ ಸಂಜಯ್ ರಾವತ್
Advertisement
ಇಂದು ಬಸ್ಸನ್ನು ಉದ್ಘಾಟಿಸಿದ ಶಾಸಕ ಕುಮಾರಸ್ವಾಮಿ ಅದೇ ಬಸ್ಸಿನಲ್ಲಿ ಮತ್ತಿಕಟ್ಟೆ ಗ್ರಾಮದಿಂದ ಬಣಕಲ್‍ವರೆಗೂ ಸ್ಥಳೀಯರ ಜೊತೆಯೇ ಸಂಚರಿಸಿದ್ದಾರೆ. ಇಷ್ಟು ವರ್ಷಗಳ ಹೋರಾಟ-ಮನವಿಗೆ ಈಗಲಾದರೂ ಬಸ್ಸಿನ ಸೌಲಭ್ಯ ಕಲ್ಪಿಸಿದೆ ಎಂದು ಸರ್ಕಾರ ಹಾಗೂ ಶಾಸಕರಿಗೆ ಇಲ್ಲಿನ ಜನ ಅಭಿನಂದನೆ ಸಲ್ಲಿಸಿದ್ದಾರೆ.