ಭೋಪಾಲ್: ಮಾಜಿ ಗೆಳೆಯ (Ex- Boyfriend) ಹಾಗೂ ಪ್ರಿಯತಮ (Lover) ಒಟ್ಟಿಗೆ ಏಕಾಏಕಿ ಮನೆಗೆ ಬಂದಿದ್ದರಿಂದ ದಾರಿ ಕಾಣದೆ ಯುವತಿ ಬಾವಿಗೆ ಹಾರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಯುವತಿ ಮನೆಗೆ ಬಂದ ಇಬ್ಬರೂ ಸಂಬಂಧದ ಬಗ್ಗೆ ನಿಜ ಹೇಳುವಂತೆ ಗಲಾಟೆ ಮಾಡಲು ಆರಂಭಿಸಿದ್ದಾರೆ. ಅಲ್ಲದೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಇಬ್ಬರೂ ಯುವತಿಗೆ ಥಳಿಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದರಿಂದ ನೊಂದ ಯುವತಿ ಬಾವಿಗೆ ಹಾರಿದ್ದಾಳೆ.
Advertisement
Advertisement
ಕೋಲು, ದೊಣ್ಣೆಗಳಿಂದ ಐದು ಮಂದಿ ಯುವತಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಆಕೆಯ ಮೇಲೆ ದೌರ್ಜನ್ಯವೆಸಗಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅದರಲ್ಲೂ ಇಬ್ಬರೂ ಆಕೆಯನ್ನು ಹಿಡಿದುಕೊಂಡು ಥಳಿಸಲು ಆರಂಭಿಸಿದ್ದಾರೆ. ಈ ವೇಳೆ ಯುವತಿ ಅವರ ಕೈಯಿಂದ ತಪ್ಪಿಸಿಕೊಂಡು ಹೋಗಿ ಬಾವಿಗೆ ಬಿದ್ದಿದ್ದಾಳೆ.
Advertisement
Advertisement
ಇತ್ತ ಯುವತಿ ಬಾವಿಗೆ ಹಾರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಆಕೆಯನ್ನು ಬಾವಿಯಿಂದ ಮೇಲೆತ್ತುವ ಕೆಲಸ ಮಾಡಿದ್ದಾರೆ. ಬಳಿಕ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯು (ICU) ವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: 6 ವರ್ಷದ ಪ್ರೀತಿಗೆ ಬಿತ್ತು ಬ್ರೇಕ್- ನೇಣಿಗೆ ಶರಣಾದ ಯುವಕ
ಇತ್ತ ಗ್ರಾಮಸ್ಥರು ಕೂಡಲೇ ಮನೆಗೆ ತೆರಳಿ ಇಬ್ಬರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಯುವಕರಿಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾಜಿ ಗೆಯನ ಜೊತೆ ಮಾತು ಬಿಟ್ಟಿರುವುದೇ ಘಟನೆಗೆ ಕಾರಣ ಎಂದು ಓರ್ವ ತಪ್ಪೊಪ್ಪಿಕೊಂಡಿದ್ದಾನೆ.
ಪ್ರಸ್ತುತ ಇರುವ ಗೆಳೆಯನನ್ನು ಭೇಟಿಯಾಗಿರುವ ಮಾಜಿ ಗೆಳೆಯ ನಿರ್ಧರಿಸಿಯೇ ಇಬ್ಬರೂ ಒಟ್ಟಿಗೆ ಯುವತಿ ಮನೆಗೆ ಬಂದಿದ್ದಾರೆ. ಘಟನೆಯ ಬಳಿಕ ಯುವತಿ ತಂದೆ ಇಬ್ಬರು ಯುವಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಇಬ್ಬರನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k