ಬೆಂಗಳೂರು: ಸಂಸದ ಡಾ. ಸುಧಾಕರ್ (Dr. Sudhakar) ಸತ್ಯ ಹರಿಶ್ಚಂದ್ರ ಅಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವರೇನು ಸತ್ಯ ಹರಿಶ್ಚಂದ್ರರಾ ಎಂದು ಪ್ರಶ್ನೆ ಮಾಡಿದ್ದ ಸಂಸದ ಸುಧಾಕರ್ ಅವರಿಗೆ ಪ್ರತಿಕ್ರಿಯಿಸುತ್ತಾ, 2013ರಲ್ಲಿ ಅಂಜಿನಪ್ಪ ಅವರಿಗೆ ಟಿಕೆಟ್ ತಪ್ಪಿಸಿ ನೀವು ಟಿಕೆಟ್ ತಗೊಂಡಿದ್ರಿ ಅಲ್ಲವಾ? ಅವತ್ತು ನೀವು ಸತ್ಯ ಹರಿಶ್ಚಂದ್ರ ಆಗಿದ್ರಾ? ಕುಮಾರಸ್ವಾಮಿ (Kumarswamy) ಅವರ ಸರ್ಕಾರ ಬೀಳಿಸೋದ್ರಲ್ಲಿ ನೀವು ಪ್ರಮುಖ ಪಾತ್ರವಾಗಿದ್ದೀರಿ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು – ಎರಡು ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಜಮೆಯಾಗದ ಸಂಬಳ
ಆಗ ಬಾಂಬೆ ಬಾಯ್ಸ್ ಸರ್ಕಾರ ಬೀಳಿಸಿದ್ರಲ್ಲವಾ ಅವತ್ತು ನೀವು ಸತ್ಯ ಹರಿಶ್ಚಂದ್ರ ಆಗಿದ್ರಾ? ನೀವು ಕಾಂಗ್ರೆಸ್ ಪಕ್ಷದಲ್ಲಿ ಇರುವವವರೆಗೂ ಕಾಂಗ್ರೆಸ್ ಒಳ್ಳೆ ಪಕ್ಷ. ಬಿಜೆಪಿಗೆ ಹೋದ ಕೂಡಲೇ ಕಾಂಗ್ರೆಸ್ ಹಾಗೇ ಹೀಗೆ ಎಂದು ಮಾತಾಡ್ತಿದ್ದಾರೆ. ನೀವು ಸಮಿತಿ ಮಾಡಿ ಒಂದೂವರೆ ವರ್ಷ ಆಗಿದೆ. ಆದರೆ ವರದಿ ವಿಳಂಬ ಆಯ್ತು ಎಂದು ನಾವು ಸರ್ಕಾರದ ಮೇಲೆ ಒತ್ತಡ ಹಾಕಿದ್ವಿ. ಅವರು ಕೊಡುವ ಸಮಯಕ್ಕೆ ಮಧ್ಯಂತರ ವರದಿ ಕೊಟ್ಡಿದ್ದಾರೆ. ಅದರಲ್ಲಿ ಎಫ್‌ಐಆರ್ ಹಾಕಿ ತನಿಖೆ ಮಾಡಿ ಅನ್ನೋದು ಇದೆ. ತಪ್ಪು ಮಾಡಿದ್ರೆ ತಪ್ಪೇ. ತಾತ್ಕಾಲಿಕವಾಗಿ ನೀವು ಬೇಕಿದ್ದರೆ ಸ್ವಲ್ಪ ದಿನ ತಳ್ಳಿಹಾಕಬಹುದು. ಯಾವತ್ತೋ ಒಂದು ದಿನ ನಿಮ್ಮ ಕುತ್ತಿಗೆಗೆ ಬರುತ್ತದೆ ಎನ್ನುವ ನಂಬಿಕೆ ನನಗೆ ಇದೆ ಅಂತ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಯಾರ ಮೇಲು ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತದೆ. ಸಿಎಂ, ಡಿಸಿಎಂ ಕ್ರಮವಹಿಸುತ್ತಾರೆ. ಕೋವಿಡ್ ಸಮಯದಲ್ಲಿ ತುಂಬಾ ನಿಯಮ ಉಲ್ಲಂಘನೆ ಮಾಡಿದ್ದಾರೆ. 500 ಮಾಸ್ಕ್ ಯಾವ ಮೆಡಿಕಲ್ ಸ್ಟೋರ್‌ನಲ್ಲಿ ಸಿಗುತ್ತದೆ ಎಂದು ನನಗೆ ಈಗಲೂ ಗೊತ್ತಿಲ್ಲ. ಅದು ಹೇಗೆ ಇರುತ್ತದೆ ಎಂದು ನೋಡಬೇಕು. ಸಂಸದರೇ 500 ರೂಪಾಯಿ ಮಾಸ್ಕ್, ವೆಂಟಿಲೇಟರ್ಸ್, ಇವೆಲ್ಲ ಏನು? ಎಂದು ಕರ್ನಾಟಕದ ಜನತೆಗೆ ಹೇಳೋಕೆ ಇಷ್ಟ ಪಡ್ತೀನಿ. ಕೋವಿಡ್‌ನಲ್ಲಿ ಅಕ್ರಮ ಮಾಡಿರುವವರಿಗೆ ಕಾನೂನಿನಲ್ಲಿ ಯಾವಾಗ ಶಿಕ್ಷೆ ಆಗುತ್ತದೆ ಗೊತ್ತಿಲ್ಲ. ಜನತಾ ನ್ಯಾಯಾಲಯದಲ್ಲಿ ಕೋವಿಡ್ (Covid) ಕಳ್ಳರಿಗೆ 14 ತಿಂಗಳ ಹಿಂದೆ ಅವರನ್ನು ಸೋಲಿಸಿದ್ದೇವೆ. ಅದಕ್ಕೆ ನಾನೇ ನಿದರ್ಶನ ಎಂದು ಕಿಡಿಕಾರಿದರು.ಇದನ್ನೂ ಓದಿ: ಮತ್ತೆ ಸಿನಿಮಾಗೆ ದೀಪಿಕಾ ದಾಸ್ ಕಮ್‌ಬ್ಯಾಕ್- ‘ಪಾರು ಪಾರ್ವತಿ’ ಸಿನಿಮಾದಲ್ಲಿ ನಟಿ
ಸುಧಾಕರ್ 5 ವರ್ಷ ಕಾಂಗ್ರೆಸ್ ಎಂಎಲ್‌ಎ (MLA) ಆಗಿದ್ದರು. ಆಗ ಬಚ್ಚೇಗೌಡರು (Bachegowda) ಸಂಸದರು ಆಗಿದ್ದರು. ಅವತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ 30 ಸಾವಿರ ಲೀಡ್ ಇತ್ತು. ನಾನು ಕಾಂಗ್ರೆಸ್ ಎಂಎಲ್‌ಎ ಆಗಿದ್ದೇನೆ. ಈಗ ಲೀಡ್ 19 ಸಾವಿರಕ್ಕೆ ತಡೆದಿದ್ದೇನೆ. ಎಂಪಿಯಲ್ಲಿ ಮತ ಹಾಕೋದು ಬೇರೆ ಇತ್ತು. 8 ವಿಧಾನಸಭೆ ಕ್ಷೇತ್ರ. ಸಾವಿರಾರು ದುಡ್ಡು ಖರ್ಚು ಮಾಡಿದ್ದರಂತೆ. ನೋಡೋಣ ಏನ್ ಆಗುತ್ತದೆ. ಕೋವಿಡ್‌ನಲ್ಲಿ ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗುತ್ತದೆ. ಅಕ್ರಮ ಮಾಡಿರುವವರಿಗೆ ನಮ್ಮ ಸರ್ಕಾರ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.