Ramanagara | ಹತ್ಯೆಯಾದ ಅಪ್ರಾಪ್ತ ಬಾಲಕಿ ಮನೆಗೆ ಸಂಸದ ಡಾ.ಮಂಜುನಾಥ್ ಭೇಟಿ, ಸಾಂತ್ವನ

Public TV
1 Min Read
Bhadrapura Minor Girl Murder Dr Manjunath Visit

ರಾಮನಗರ: ಬಿಡದಿಯ (Bidadi) ಭದ್ರಾಪುರ (Bhadrapura) ಗ್ರಾಮದ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣ ಹಿನ್ನೆಲೆ ಇಂದು ಭದ್ರಾಪುರ ಗ್ರಾಮಕ್ಕೆ ಸಂಸದ ಡಾ.ಮಂಜುನಾಥ್ ಭೇಟಿ ನೀಡಿ ಮೃತ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮೃತ ಬಾಲಕಿ ತಾಯಿಗೆ ಧೈರ್ಯ ತುಂಬಿದ ಸಂಸದರು, ಘಟನೆ ಕುರಿತು ಪೊಲೀಸರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ವಿಕಲಚೇತನ ಬಾಲಕಿ ಹತ್ಯೆಗೆ ವಿಷಾದ ವ್ಯಕ್ತಪಡಿಸಿದ ಸಂಸದರು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಇದನ್ನೂ ಓದಿ: 13 ಎಟಿಎಂ ದೋಚಿದ್ದ ಖದೀಮನಿಗೆ ಪೊಲೀಸರಿಂದ ಗುಂಡೇಟು

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 14 ವರ್ಷದ ಬಾಲಕಿಯನ್ನ ಹತ್ಯೆ ಮಾಡಿರೋದು ವಿಕೃತಿ. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದು ಮರಣೋತ್ತರ ವರದಿ ಹಾಗೂ ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗವಾಗಬೇಕಿದೆ. ಈಗಾಗಲೇ ಎರಡು-ಮೂರು ತಂಡಗಳ ರಚನೆ ಮಾಡಿಕೊಂಡು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬಾಲಕಿ ಸಾವಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಗ್ರಾಮಕ್ಕೆ ಕೆಲ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅದನ್ನೂ ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ತಿಳಿಸಿದರು. ಇದನ್ನೂ ಓದಿ: ಆಂಧ್ರ ಪ್ರದೇಶ ಬಹುಕೋಟಿ ಅಬಕಾರಿ ಹಗರಣ – ಪ್ರಮುಖ ಆರೋಪಿ ಬಾಲಾಜಿ ಗೋವಿಂದಪ್ಪ ಎಸ್‌ಐಟಿ ವಶಕ್ಕೆ

Share This Article