ಭೋಪಾಲ್: 40 ಅಡಿ ಆಳದ ಬೋರ್ ವೆಲ್ ಗೆ ಸಿಲುಕಿದ್ದ 4 ವರ್ಷದ ಹುಡುಗ 35 ಗಂಟೆಗಳ ನಂತರ ಬದುಕಿ ಬಂದಿರುವ ಘಟನೆ ಮಧ್ಯ ಪ್ರದೇಶದ ದಿವಾಸ್ ಜಿಲ್ಲೆಯಲ್ಲಿ ನಡೆದಿದೆ.
ರೋಷನ್ ಬೋರ್ ವೆಲ್ ಗೆ ಬಿದ್ದು ಬದುಕಿ ಬಂದ ಬಾಲಕ. ಈತ ಶನಿವಾರ ಬೆಳಗ್ಗೆ ಜಿಲ್ಲೆಯ ಉಮಾರಿಯಾ ಗ್ರಾಮದಲ್ಲಿ ಆಟವಾಡುತ್ತಿದ್ದನು. ಈ ವೇಳೆ ಸುಮಾರು 11 ಗಂಟೆಗೆ ರೋಷನ್ ಆಕಸ್ಮಿಕವಾಗಿ ತೆರೆದ ಬೋರ್ ವೆಲ್ ಗೆ ಬಿದ್ದಿದ್ದಾನೆ. ತಕ್ಷಣ ಬಾಲಕ ಬೋರ್ ವೆಲ್ ಗೆ ಬಿದ್ದಿರುವ ಮಾಹಿತಿಯನ್ನು ಸೇನಾ ಪಡೆಗೆ ಮಾಹಿತಿ ತಿಳಿಸಲಾಗಿದೆ.
Advertisement
Advertisement
ಮಾಹಿತಿ ತಿಳಿದ ಸೇನಾ ತಂಡ ಸ್ಥಳಕ್ಕೆ ದೌಡಾಯಿಸಿದೆ. ನಂತರ ಸಿಬ್ಬಂದಿ ರಕ್ಷಣಾ ಕಾರ್ಯಚರಣೆಯನ್ನು ಆರಂಭಿಸಿದ್ದಾರೆ. ಆ ಬೋರ್ ವೆಲ್ ಸುಮಾರು 150 ಅಡಿ ಆಳವಿದ್ದು, ರೋಷನ್ ಸುಮಾರು 40 ಅಡಿ ಆಳಕ್ಕೆ ಸಿಲುಕಿದ್ದ ಮಾಹಿತಿ ದೊರೆತಿದೆ. ನಂತರ ಬಾಲಕನಿಗೆ ಪೈಪ್ ಮೂಲಕ ಆಮ್ಲಜನಕ ಒದಗಿಸಲಾಗಿತ್ತು.
Advertisement
ಬಾಲಕನಿಗೆ ಪೈಪ್ ಮೂಲಕವೇ ಹಾಲು ಮತ್ತು ನೀರನ್ನು ನೀಡಲಾಯಿತು. ಪೋಷಕರು ಕಾರ್ಯಚರಣೆ ಮುಗಿಯುವರೆಗೂ ಮಗನ ಜೊತೆ ಮಾತನಾಡುತ್ತಿದ್ದರು. ಬಾಲಕನು ಕೂಡ ಅವರ ಮಾತಿಗೆ ಪ್ರತಿಕ್ರಿಯೆ ನಿಡುತ್ತಿದ್ದನು.
Advertisement
ರಕ್ಷಣಾ ಪಡೆ ಮೊದಲಿಗೆ ಒಂದು ಅನ್ಯ ಮಾರ್ಗ ಅಗೆದು ಆ ಸುರಂಗದ ಮೂಲಕ ಕೊಳವೆ ಬಾವಿಯನ್ನು ಸಂಪರ್ಕಿಸಿ ಬಾಲಕನನ್ನು ಮೇಲೆ ತಳ್ಳುವ ಯೋಚನೆಯನ್ನು ಮಾಡಿದ್ದರು.
ಸುರಂಗ ಮಾರ್ಗ ಅಗೆದಿದ್ದು, ಆದರೆ ಶೀಘ್ರದಲ್ಲೇ ಬಾಲಕನನ್ನು ಪಾರು ಮಾಡಬೇಕಾಗುತ್ತದೆ. ಇಲ್ಲದ್ದಿದ್ದರೆ ಬಾಲಕನ ಜೀವಕ್ಕೆ ಅಪಾಯವಿದೆ ಎಂದು ಸೇನಾ ಪಡೆ ತಿಳಿದುಕೊಂಡು ತಕ್ಷಣ ಹಗ್ಗವನ್ನು ಕೊಳವೆಯೊಳಗೆ ಇಳಿಸಿದ್ದಾರೆ. ಬಾಲಕನಿಗೆ ತನ್ನ ತೋಳಿನ ಸುತ್ತಿಕೊಳ್ಳಲು ತಿಳಿಸಲಾಗಿದ್ದು, ಹುಡುಗ ನಾವು ಹೇಳಿದ ಸೂಚನೆಗಳನ್ನು ಅನುಸರಿಸಿ, ನಂತರ ಯಶಸ್ವಿಯಾಗಿ ಹೊರಬಂದನು ಎಂದು ಎಸ್ ಪಿ ಹೇಳಿದ್ದಾರೆ.
ಬಾಲಕ ಬೋರ್ ವೆಲ್ ನಿಂದ ಹೊರ ಬಂದ ತಕ್ಷಣ ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯಕ್ಕೆ ಹುಡುಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಎಲ್ಲ ಕಾರ್ಯಚರಣೆ ನಡೆಯಲು ಸುಮಾರು 35 ಗಂಟೆಗಳ ಸಮಯವಾಗಿದ್ದು, ಭಾನುವಾರ ರಾತ್ರಿ 10.45 ರ ವೇಳೆಗೆ ಬಾಲಕನನ್ನು ರಕ್ಷಿಸಲಾಗಿದೆ ಎಂದು ದೆವಾಸ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅನ್ಸುಮನ್ ಸಿಂಗ್ ಹೇಳಿದ್ದಾರೆ.