Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: MUDA Scam | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ – ಕೋವಿಡ್ ಹಗರಣ ವರದಿಗೆ ಉತ್ತರ ಕೊಡ್ತೇವೆ: ಬೊಮ್ಮಾಯಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | MUDA Scam | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ – ಕೋವಿಡ್ ಹಗರಣ ವರದಿಗೆ ಉತ್ತರ ಕೊಡ್ತೇವೆ: ಬೊಮ್ಮಾಯಿ

Districts

MUDA Scam | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ – ಕೋವಿಡ್ ಹಗರಣ ವರದಿಗೆ ಉತ್ತರ ಕೊಡ್ತೇವೆ: ಬೊಮ್ಮಾಯಿ

Public TV
Last updated: September 1, 2024 7:58 pm
Public TV
Share
3 Min Read
Basavaraj Bommai 1 1
SHARE

ಬೆಂಗಳೂರು: ಮುಡಾ ಹಗರಣದ (Muda Scam) ವಿಚಾರ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಕೋರ್ಟ್ ಆದೇಶದ ಮೇಲೆ ಸಿದ್ದರಾಮಯ್ಯ (Siddaramaiah) ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಾರೆಯೋ ಇಲ್ಲವೋ ಅನ್ನೋದು ತೀರ್ಮಾನ ಆಗಲಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

DK SHIVAKUMAR SIDDARAMAIAH

ಮಂಡ್ಯದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಪ್ರಕರಣವನ್ನು ಪ್ರಾಷಿಕ್ಯೂಶನ್‌ಗೆ ಕೊಟ್ಟಿರುವುದು ಇದೇ ಮೊದಲ ಪ್ರಕರಣ ಅಲ್ಲ. ಹಲವಾರು ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ಆಗಿವೆ. ರಾಜ್ಯದಲ್ಲಿಯೂ ಆಗಿವೆ. ಇದೊಂದು ಸ್ಥಾಪಿತ ವ್ಯವಸ್ಥೆ ಆಗಿದೆ. ಹಲವಾರು ಸುಪ್ರೀಂ ಕೋರ್ಟ್ (Supreme Court) ತೀರ್ಪುಗಳು ಇವೆ. 2018 ರಲ್ಲಿ ಒಂದು ತಿದ್ದುಪಡಿ ಆಗಿದೆ. ಅದರ ಆಧಾರದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ. ಸಂವಿಧಾನದ ಕಲಂ 17/2 ತಿದ್ದುಪಡಿ ಆದ ನಂತರ ಏನು ಬದಲಾವಣೆ ಆಗಿದೆ ಎನ್ನುವುದನ್ನು ಇಲ್ಲಿ ಒಂದು ಗಮನಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಓಡಿಸುತ್ತಿದ್ದ ಹಳೇ ಬೈಕ್‌ಗೆ ಹೊಸ ರೂಪ – 1981 ರ ಮಾಡೆಲ್ ಎಝಡಿ ರೋಡ್ ಕಿಂಗ್ ಬೈಕ್

ಕಾಂಗ್ರೆಸ್ (Congress) ಮಿತ್ರರು ಯಾಕೆ ಅಷ್ಟೊಂದು ಆತಂಕಕ್ಕೆ ಒಳಗಾಗಿದ್ದಾರೊ ಗೊತ್ತಿಲ್ಲ. ರಾಜ್ಯಪಾಲರು ಒಂದು ತನಿಖೆ ನಡೆಸುವಂತೆ ಆದೇಶ ಮಾಡಿದ್ದಾರೆ. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಹಾಗೆ ಆಗಿರಲಿಲ್ಲ. ತನಿಖೆ ಅಂತ ಇರಲಿಲ್ಲ. ಪ್ರಾಶಿಕ್ಯೂಷನ್ ಮಾಡಿ ಅಂಥ ಹೇಳಿದ್ದರು. ಎಫ್‌ಐಆರ್ ಆಗಿ ತನಿಖೆಯಾಗಿ, ಚಾರ್ಜ್‌ ಶೀಟ್ ಆದ ನಂತರ ಪ್ರಾಶಿಕ್ಯೂಷನ್ ಮಾಡಲಾಗುತ್ತದೆ. ಅದು ಯಾವುದನ್ನೂ ಮಾಡದೇ ನೇರವಾಗಿ ಸೆಷನ್ಸ್ ಕೋರ್ಟ್‌ಗೆ ಸಮನ್ಸ್ ಮಾಡುವ ಅಧಿಕಾರ ನೀಡಲಾಗಿತ್ತು. ಅವತ್ತಿನ ಗೌರ್ನರ್ ಆದೇಶದ ಬಗ್ಗೆ ಹಲವಾರು ಕೋರ್ಟ್‌ಗಳಲ್ಲಿ ಟೀಕೆ ಟಿಪ್ಪಣಿ ಆಗಿ, ಆದೇಶಗಳೂ ಆಗಿವೆ. ಇವತ್ತು ರಾಜ್ಯಪಾಲರು ಕೇವಲ ತನಿಖೆ ನಡೆಸಲು ಹೇಳಿದ್ದಾರೆ. ಕೋರ್ಟ್‌ನಲ್ಲಿ ನಡೆಯುತ್ತಿದೆ, ಅಂತಿಮ ಘಟಕ್ಕೆ ಬಂದಿದೆ. ಏನಾಗುತ್ತದೆಯೋ ಕಾದು ನೋಡೋಣ ಅಂತ ಹೇಳಿದ್ದಾರೆ.

Siddaramaiah Covid Report

ಕಾಂಗ್ರೆಸ್‌ನವರು ಬಿಜೆಪಿ ನಾಯಕರ (BJP Leaders) ವಿರುದ್ಧ ಪ್ರಾಶಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಈಗಾಗಲೇ ರಾಜ್ಯಪಾಲರು ಉತ್ತರ ಕೊಟ್ಟಿದ್ದಾರೆ. ಕೆಲವು ಮಾಹಿತಿ ಕೇಳಿದ್ದೇನೆ ಎಂದು ಹೇಳಿದ್ದಾರೆ. ಅದು ಏನೇ ಇರಲಿ, ಆ ಪ್ರಕರಣಗಳಿಗೂ, ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ತಳಕು ಹಾಕುವ ಕೆಲಸ ಮಾಡಬಾರದು. ಇದು ರಾಜ್ಯದ ಮುಖ್ಯಸ್ಥನ ಮೇಲೆ ಇರುವ ಪ್ರಕರಣ ಆಗಿರುವುದರಿಂದ ಹೆಚ್ಚಿನ ಆದ್ಯತೆ ದೊರೆಯುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: SSLC ವಿದ್ಯಾರ್ಥಿನಿಗೆ ತನ್ನ ಬೆತ್ತಲೆ ಫೋಟೋ ಕಳಿಸಿ ಕಿರುಕುಳ – ಕಾಮುಕ ಶಿಕ್ಷಕನ ವಿರುದ್ಧ ಕೇಸ್‌

ಮುಖ್ಯಮಂತ್ರಿ ಸಿದ್ದರಾಮ್ಯಯ ರಾಜೀನಾಮೆ ಕೊಡುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋರ್ಟ್‌ನ ತೀರ್ಮಾನದ ಮೇಲೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ತೀರ್ಮಾನ ಆಗಲಿದೆ. ರಾಜಕೀಯವಾಗಿ ಏನೇ ವಿಶ್ಲೇಷಣೆ ಮಾಡಿದರೂ, ಪ್ರಕರಣ ಕೋರ್ಟ್‌ಗೆ ಹೋಗಿರುವುದರಿಂದ ಕೋರ್ಟ್ ಆದೇಶದ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ. ಇನ್ನೂ ರಾಜ್ಯ ಸರ್ಕಾರ ಅಸ್ಥಿರಗೊಳಿಸಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಯಾವುದೇ ರೀತಿಯ ಆಧಾರ ಇಲ್ಲದೇ, ತಮ್ಮನ್ನು ತಾವು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಾಜಕೀಯ ಆರೋಪ ಬಂದಾಗ ಈ ರೀತಿ ಮಾಡುವುದು ಸಹಜ. ಇದೇನು ಹೊಸದಲ್ಲ. ಹಳೆಯ ತಂತ್ರಗಳು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

ಕೋವಿಡ್ ಅಕ್ರಮ ಆರೋಪದ ವರದಿಗೆ ಉತ್ತರ ಕೊಡ್ತೇವೆ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೊವಿಡ್ ಹಗರಣ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಕೋವಿಡ್‌ ವಿಚಾರದಲ್ಲಿ ತನಿಖೆ ನಡೆಸಲು ಆಯೋಗ ರಚನೆ ಮಾಡಿದ್ದರು. ಆ ಆಯೋಗ ಸಿಎಂಗೆ ವರದಿ ಸಲ್ಲಿಸಿದೆ. ಅದರಲ್ಲಿ ಏನಿದೆಯೋ ಗೊತ್ತಿಲ್ಲ. ಎಲ್ಲವೂ ಹೊರಗೆ ಬರಲಿ ಅದಕ್ಕೆ ಉತ್ತರ ಕೊಡುತ್ತೇವೆ. ನಮ್ಮ ಕಾಲದ ಹಗರಣದ ಕುರಿತು ತನಿಖೆ ನಡೆಸಲು ಯಾವುದು ಎಂಬ ಅಡ್ಡಿಯಿಲ್ಲ. ಯಾರು ರಾಜಕೀಯವಾಗಿ ಆರೋಪ ಮಾಡಿ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಅವರಿಗೂ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಚನ್ನಪಟ್ಟಣ ಟಿಕೆಟ್‌ ವರಿಷ್ಠರ ತೀರ್ಮಾನ:
ಚನ್ನಪಟ್ಟಣ ಉಪಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣ ಉಪ ಚುನಾವಣೆ ಕುರಿತು ಮಾಜಿ ಮುಖ್ಯಮಂತಿ ಹಾಗೂ ಕೇಂದ್ರ ಸಚಿವ ಹೆಚ್‌ಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಅವರು ತಮ್ಮ ಪಕ್ಷದ ಪಮುಖರ ಜೊತೆಗೆ ಚರ್ಚೆ ಮಾಡುತ್ತಾರೆ. ಹಾಗೂ ಎನ್‌ಡಿಎ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಬಿಜೆಪಿ ವರಿಷ್ಠರು ಹಾಗೂ ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ 2ನೇ ದಿನವೂ ಉತ್ತಮ ಸ್ಪಂದನೆ – ಸಂಜೆ 6 ಗಂಟೆವರೆಗೂ ಇರಲಿದೆ ಮೇಳ

TAGGED:bengalurubjpcongressCovid scam ReportMUDA Casesiddaramaiahಕಾಂಗ್ರೆಸ್ಕೋವಿಡ್‌ ಹಗರಣಬಿಜೆಪಿಬೆಂಗಳೂರುಮುಡಾ ಕೇಸ್‌ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Keerthy Suresh
ಕೀರ್ತಿ ಇಟ್ಟ ಗುರಿಗೆ ಫೋಟೋಗ್ರಾಫರ್ ಕಣ್ಣೇ ಹೋಯ್ತು..!
Cinema Latest South cinema
Kerala Court 2
ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ – 6 ಆರೋಪಿಗಳಿಗೆ 20 ವರ್ಷ ಜೈಲು
Cinema Court Latest Main Post National South cinema
Salman Khan Sharukh Khan
ಸಲ್ಮಾನ್-ಶಾರುಖ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್.. ಶೀಘ್ರದಲ್ಲೇ ಪಠಾಣ್-2!
Bollywood Cinema Latest Top Stories
Rishab Shetty
ಕಾಗದದ ಮೇಲೆ ಹುಟ್ಟಿದ ಪಾತ್ರ ಜೀವ ಪಡೆದಾಗ… `ಕಾಂತಾರ’ದ ಆತ್ಮಕಥೆ ಬಿಚ್ಚಿಟ್ಟ ರಿಷಬ್
Cinema Latest Sandalwood Top Stories

You Might Also Like

Mysuru Palace 2
Districts

ಮೈಸೂರು | ಅರಮನೆಯ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ಭಾರೀ ಬಿರುಕು

Public TV
By Public TV
7 hours ago
Shehbaz Sharif
Latest

ಪಾಕ್‌ ಪ್ರಧಾನಿಗೆ ವಿಶ್ವವೇದಿಕೆಯಲ್ಲಿ ಅವಮಾನ – ಪುಟಿನ್‌ ಭೇಟಿಗಾಗಿ 40 ನಿಮಿಷ ಕಾದು ಕುಳಿತ ಶೆಹಬಾಜ್ ಷರೀಫ್

Public TV
By Public TV
7 hours ago
03 5
Latest

MGNREGA | ನರೇಗಾ ಹೆಸರು ಬದಲು – ಪ್ರಮುಖ ನಿರ್ಧಾರಗಳೊಂದಿಗೆ ದೇಶದ ಗಮನ ಸೆಳೆದ ಸಂಸತ್ತು

Public TV
By Public TV
7 hours ago
MB Patil 1 1
Districts

ಶ್ರೀಗಳು ಹಾಕಿಕೊಟ್ಟ ಮಾರ್ಗ ಸೂರ್ಯ, ಚಂದ್ರ ಇರೋವರೆಗೂ ಚಿರಸ್ಥಾಯಿ – ಲಿಂ.ಚನ್ನಬಸವ ಸ್ವಾಮೀಜಿ ಅಂತಿಮ ದರ್ಶನ ಪಡೆದ ಎಂ.ಬಿ.ಪಾಟೀಲ್

Public TV
By Public TV
8 hours ago
Kalaburagi Chariot
Districts

ಕಲಬುರಗಿ | ಕಡಕೋಳ ಜಾತ್ರೆಯಲ್ಲಿ ರಥದ ಚಕ್ರ ಕಟ್ಟಾಗಿ ಅವಘಡ

Public TV
By Public TV
8 hours ago
Madikeri Elephant
Districts

ಕೊಡಗು | ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ – ಬೆಚ್ಚಿಬಿದ್ದ ವಾಹನ ಸವಾರರು

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?