ಬೆಂಗಳೂರು: ಸಿದ್ದರಾಮಯ್ಯಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ಕೊಟ್ಟು ಸರಿಯಿಲ್ಲ ಅಂತ ಹೇಳಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಮಾತಾಡಿದ ಬೊಮ್ಮಾಯಿ, ಬ್ಯಾಲೆಟ್ ಪೇಪರ್‌ಗಳಲ್ಲಿ ಅಕ್ರಮ, ಗೊಂದಲ ಬಹಳ ಆಗ್ತಿತ್ತು. ಇದನ್ನು ತಪ್ಪಿಸಲು ಇವಿಎಂಗಳು ಬಂದ್ವು. 2004, 2009 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಇವಿಎಂಗೆ ತಕರಾರು ಇರಲಿಲ್ಲ ಎಂದು ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಗೆದ್ದಿದ್ದೇ ಇವಿಎಂನಿಂದ. ಇವರು ಗೆಲ್ಲೋದಿಕ್ಕೆ ಇವಿಎಂ ಬೇಕಾಗಿತ್ತು. ಇವಿಎಂಗಳಲ್ಲಿ ಗೊಂದಲ, ದೋಷ ಇದ್ರೆ ಬಂದು ತೋರಿಸಿ, ದಾಖಲೆ ಕೊಡಿ ಅಂದ್ರೂ ಯಾರೂ ಬರಲಿಲ್ಲ. ಈಗ ಇವಿಎಂಗಳ ಬದಲು ಬ್ಯಾಲೆಟ್ ಪೇಪರ್‌ಗಳನ್ನು ಅನುಭವದ ಮೇಲೆ ತರ್ತಿದ್ದೇವೆ ಅಂದಿದ್ದಾರೆ ಸಿಎಂ ಎಂದು ಕಿಡಿಕಾರಿದರು.
ನಿಮಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿದ್ರೆ ರಾಜೀನಾಮೆ ಕೊಡಿ. ರಾಜೀನಾಮೆ ಕೊಟ್ಟು ಎವಿಎಂ ಸರಿಯಿಲ್ಲ ಅಂತ ಹೇಳಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.