– ಬೆಂಬಲಿಗರ ಜೊತೆ ಬಂದು ಯಾಸಿರ್ ಖಾನ್ ಪಠಾಣ್ ಮತದಾನ
ಹಾವೇರಿ: ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನರೊಟ್ಟಿಗೆ ಸರತಿ ಸಾಲಿನಲ್ಲಿ ನಿಂತು ಸಂಸದ ಬಸವರಾಜ ಬೊಮ್ಮಾಯಿ ಅವರು ಮತ ಚಲಾಯಿಸಿದರು. ಈ ವೇಳೆ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಹಾಗೂ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕೂಡ ಸಾಥ್ ನೀಡಿದರು.
ಮತದಾನಕ್ಕೂ ಮೊದಲು ಪುತ್ರ ಭರತ್ ಅವರೊಂದಿಗೆ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಬಳಿಕ ಅಲ್ಲಿಂದ ಶಿಗ್ಗಾಂವಿಗೆ ಬಂದು ಮತದಾನ ಮಾಡಿದರು.
ಇತ್ತ ‘ಕೈ’ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಕೂಡಾ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮತ ಚಲಾಯಿಸಿದರು. ಶಿಗ್ಗಾವಿ ಪಟ್ಟಣದ ಮಾಮ್ಲೆದೇಸಾಯಿ ಶಾಲೆಯಲ್ಲಿ ಮತದಾನ ಮಾಡಿದರು. ಈ ವೇಳೆ ಬೆಂಬಲಿಗರು ಸಾಥ್ ನೀಡಿದರು.
ಶಿಗ್ಗಾವಿ ತಾಲೂಕು ಹುಲಗೂರು ಗ್ರಾಮದಲ್ಲಿ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಕೂಡ ಮತದಾನ ಮಾಡಿದರು. ಗ್ರಾಮದ ಬಾಲಕರ ಪ್ರಾಥಮಿಕ ಮಾದರಿ ಶಾಲೆ ಮತಗಟ್ಟೆ ಸಂಖ್ಯೆ 31 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.